More

  ಮನೆಯವರೆಲ್ಲ ಯೋಗಾಭ್ಯಾಸದಲ್ಲಿ ತೊಡಗುವಂತಾಗಲಿ: ಕ್ರೀಡಾ ಭಾರತಿಯ ಪ್ರಾಂತ ಕಾರ್ಯದರ್ಶಿ ಮಹೇಂದ್ರ ಪ್ರಸಾದ್

  ಮೈಸೂರು: ಕ್ರೀಡಾ ಭಾರತಿ ಮೈಸೂರು ಜಿಲ್ಲಾ ಘಟಕದಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ವಿಜಯನಗರದಲ್ಲಿ ಭಾನುವಾರ ವಿಶ್ವ ಯೋಗ ದಿನದ ನಿಮಿತ್ತ ನಮ್ಮ ಮನೆ ಯೋಗ ಮನೆ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿತ್ತು.
  ಕ್ರೀಡಾ ಭಾರತಿಯ ಪ್ರಾಂತ ಕಾರ್ಯದರ್ಶಿ ಮಹೇಂದ್ರ ಪ್ರಸಾದ್ ಮಾತನಾಡಿ, ಯೋಗ ಜೀವನದ ಭಾಗವಾಗಬೇಕು. ಸ್ಪರ್ಧೆ, ಬಹುಮಾನ ಇತ್ಯಾದಿ ಯಾವುದೇ ಆಮಿಷ ಅಥವಾ ಬಾಹ್ಯ ಪ್ರೇರಣೆ ಇಲ್ಲದೆಯೂ ಮನೆಯವರೆಲ್ಲ ಸಹಜವೆಂಬಂತೆ ನಿತ್ಯ ಯೋಗಾಭ್ಯಾಸದಲ್ಲಿ ತೊಡಗುವಂತಾಗಬೇಕು. ಆಗ ಸ್ವಸ್ಥ ಸಮಾಜ ಆ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯವಾಗಲಿದೆ. ಈ ಉದ್ದೇಶದಿಂದ ಕ್ರೀಡಾ ಭಾರತಿ, ಮನೆ ಸದಸ್ಯರಿಗೆಲ್ಲ ಸೇರಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡುವ ಸಲುವಾಗಿ ನಮ್ಮ ಮನೆ ಯೋಗ ಮನೆ ಸ್ಪರ್ಧೆ ಆಯೋಜಿಸಿದೆ ಎಂದು ಹೇಳಿದರು.
  ಸ್ಪರ್ಧೆಗೆ ಮುನ್ನ ಹಿರಿಯ ಯೋಗ ಶಿಕ್ಷಕ ಜಗನ್ನಾಥ ಶೆಟ್ಟಿ, ಜಯರಾಮ್ ಅವರು ಸ್ಪರ್ಧಾಕೂಟಕ್ಕೆ ಚಾಲನೆ ನೀಡಿದರು.
  ತಂದೆ, ತಾಯಂದಿರು ತಮ್ಮ ಮಕ್ಕಳ ಜತೆ ಸೇರಿ ಭಾಗವಹಿಸಿದ್ದು, ಸ್ಪರ್ಧಾಕೂಟದ ವಿಶೇಷವಾಗಿತ್ತು. ಮಕ್ಕಳ ಜತೆಗೂಡಿ ನಮಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ಒಂದು ಉತ್ತಮ ಅನುಭವ ಎಂದು ಭಾಗವಹಿಸಿದ ಪಾಲಕರು ಅಭಿಪ್ರಾಯಪಟ್ಟರು.
  35 ವರ್ಷದ ಒಳಗಿನವರ ವಿಭಾಗದಲ್ಲಿ ಲತಾ, ಹರ್ಷವರ್ಧನ್ (ಪ್ರಥಮ), ಅರ್ಪಿತಾ, ಸ್ತುತಿ ಮತ್ತು ನಚಿಕೇತ್ (ದ್ವಿತೀಯ) ಸ್ಥಾನ ಪಡೆದರು. 35 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಜಿ.ಸ್ಮಿತಾ, ಧನ್ಯತಾ ಗೌಡ, ತಾನ್ವಿ ಗೌಡ (ಪ್ರಥಮ) ಶಿಲ್ಪಾ, ಸುಭೀಕ್ಷಾ, ತನಿಷಾ (ದ್ವಿತೀಯ), ಅರ್ಚನಾ ಭಟ್, ಆರಾಧನಾ, ಮೇದಸ್ವಿ ಕೌಶಿಕ್ (ತೃತೀಯ) ಸ್ಥಾನ ಪಡೆದುಕೊಂಡರು.
  ಕ್ರೀಡಾ ಭಾರತಿಯ ಮಹಿಳಾ ಪ್ರಮುಖರಾದ ಸ್ವಪ್ನ, ಯುವ ಪ್ರಮುಖರಾದ ಜಯಂತ ದಿವಾಕರ್, ರಾಷ್ಟೋತ್ಥಾನ ವಿದ್ಯಾಕೇಂದ್ರದ ಯೋಗ ಶಿಕ್ಷಕ ಸೂರಜ್, ಮೈತ್ರಿ ಮಾತಾಜಿ ಇತರರು ಇದ್ದರು.

  See also  4 ಕೋಟಿ ರೂ. ವರದಕ್ಷಿಣೆ ಸಾಕಾಗುವುದಿಲ್ಲ ಎಂದ ಕಿರಾತಕ! ನಡದೇ ಹೋಯಿತು ಘೋರ ದುರಂತ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts