ಕೋಲಾರ: ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಹೆಲ್ಮೆಟ್ ಕಡ್ಡಾಯ ಧರಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ನರಸಾಪುರ ಕೈಗಾರಿಕಾ ಪ್ರದೇಶದ ಅಡ್ವಿಕ್ ಹೈ ಟೆಕ್ ಪೆವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಿ, ಬೈಕ್ ಜಾಥಾ ನಡೆಸಿ ವಾಹನ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸಿದರು.
ವೇಮಗಲ್ ಸರ್ಕಲ್ ಇನ್ಸ್ಪೆಕ್ಟರ್ ಬಿ.ಪಿ ಮಂಜುನಾಥ್ ಮಾತನಾಡಿ, ಜನಸಾಮಾನ್ಯರಲ್ಲಿ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು. ರಸ್ತೆ ಅಪಘಾತ, ಸಾವು-&ನೋವುಗಳ ಬಗ್ಗೆ ಅವರ ಗಮನಕ್ಕೆ ತರುವುದು ಹಾಗೂ ರಸ್ತೆ ನಿಯಮ ಪಾಲಿಸುವಂತೆ ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುವುದು ಸಪ್ತಾಹದ ಮುಖ್ಯ ಉದ್ದೇಶ. ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸುರಕ್ಷಿತ ಪ್ರಯಾಣದ ಕಡೆ ಗಮನ ಹರಿಸಬೇಕು ಎಂದರು.
ಕಂಪನಿಯ ಸಂಪನ್ಮೂಲ ಅಧಿಕಾರಿ ಮಾನಸ್ ಮಾತನಾಡಿ, ಕಂಪನಿಯ ಸಿ.ಎಸ್.ಆರ್ ಅನುದಾನದಲ್ಲಿ ಸುಮಾರು 50 ಉಚಿತ ಹೆಲ್ಮೆಟ್ ಗಳನ್ನು ವಿತರಿಸಲಾಗಿದ್ದು, ಪ್ರತಿ ವರ್ಷ ಕಂಪನಿಯ ಸಿಬ್ಬಂದಿಗೆ ಮಾತ್ರವೇ ನೀಡುತ್ತಿದ್ದು ಈ ವರ್ಷ ಹೊರಗಿನ ವಾಹನ ಸವಾರರಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು,

ಹೆಲ್ಮೆಟ್ ನೀಡಿದ ಗಣಪತಿ
ನರಸಾಪುರ ಕೈಗಾರಿಕಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಸವಾರಿ ಮಾಡುತ್ತಿದ್ದ ಸವಾರರಿಗೆ ಮೊದಲು ಗುಲಾಬಿ ಹೂವು ಕೊಟ್ಟು ಜಾಗೃತಿ ಮೂಡಿಸಲಾಯಿತು. ನಂತರ ಗಣಪತಿ ವೇಷ ಧರಿಸಿದವರೊಬ್ಬರು ಸ್ವತ@ ಹೆಲ್ಮೆಟ್ ಹಾಕದವರನ್ನು ಹಿಡಿದು ಉಚಿತವಾಗಿ ಹೆಲ್ಮೆಟ್ ನೀಡಿ, ಸಂಚಾರ ನಿಮಯಗಳ ಅರಿವು ಮೂಡಿಸಿದ್ದು ಗಮನ ಸೆಳೆಯಿತು.