ಗುರು ಸ್ಮರಣೆಯಿಂದ ನೆಮ್ಮದಿ ಬದುಕು

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

ಜೀವನ್ಮುಕ್ತಿಗಾಗಿ ಗುರುವಿನ ಕರುಣೆ ಹಾಗೂ ಅನುಗ್ರಹ ಪ್ರತಿಯೊಬ್ಬರ ಜೀವನದಲ್ಲಿ ಅಗತ್ಯವಾಗಿದ್ದು, ಗುರುಸ್ಮರಣೆ ಮೂಲಕ ನೆಮ್ಮದಿ ಕಂಡುಕೊಳ್ಳಬಹುದಾಗಿದೆ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಪುರಿ ಶ್ರೀಗಳು ಹೇಳಿದರು.

ತಾಲೂಕಿನ ಕಾಗಿನೆಲೆಯ ಕನಕಗುರುಪೀಠದಲ್ಲಿ ಮಂಗಳವಾರ ಆಯೋಜಿಸಿದ್ದ ಬೀರೇಂದ್ರ ಕೇಶವ ತಾರಕಾನಂದಪುರಿ ಶ್ರೀಗಳ 13ನೇ ಪುಣ್ಯಾರಾಧನೆ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚೀನ ಕಾಲದಿಂದಲೂ ಗುರುಶಿಷ್ಯ ಪರಂಪರೆ ಮಹತ್ವ ಪಡೆದಿದ್ದು, ಪ್ರತಿಯೊಬ್ಬರಿಗೆ ಕತ್ತಲೆಯಿಂದ ಬೆಳಕು ತೋರಲು ಗುರು ಬೇಕಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎನ್ನುವ ದಾಸರ ವಾಣಿ ಅಕ್ಷರಶಃ ಸತ್ಯವಾಗಿದೆ. ಸಮಾಜದಲ್ಲಿನ ಮೌಢ್ಯ ಹಾಗೂ ಕಂದಾಚಾರ ತಡೆಗಟ್ಟಲು ಕನಕದಾಸರಂತಹ ಮಹಾತ್ಮರು ಸಾಕಷ್ಟು ಸಾಹಿತ್ಯ ರಚನೆ ಮೂಲಕ ಪ್ರಭಾವ ಬೀರಿದ್ದಾರೆ. ಸುಸಂಸ್ಕೃತ ಸಮಾಜ ನಿರ್ವಿುಸಲು ಪ್ರತಿಯೊಬ್ಬರಿಗೂ ಶಿಕ್ಷಣ ಅಗತ್ಯ. ಆಧುನಿಕತೆಯ ದಿನಗಳಲ್ಲಿ ಗುರುಪರಂಪರೆಗೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದ್ದರೂ ಗುರುಪೀಠಗಳು ಜಾಗೃತಿ ಮೂಡಿಸುತ್ತಿವೆ. ಕನಕಗುರುಪೀಠದಿಂದ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಬೆಂಗಳೂರು ರಾಮಾನುಜ ಮಠದ ತ್ರಿದಂಡಿವೆಂಕಟ ರಾಮಾನುಜ ಜೀಯರ್, ಶಿವಮೊಗ್ಗದ ಸ್ವಾಮಿ ಅಮೋಘ ಸಿದ್ಧೇಶ್ವರನಾನಂದರು, ಕೆಲ್ಲೋಡ ಮಠದ ಈಶ್ವರಾನಂದಪುರಿ, ಮೈಸೂರಿನ ಶಿವಾನಂದ ಶ್ರೀಗಳು, ಎಲ್ಲಮ್ಮ ನಾಯ್ಕರ, ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಮಾತನವರ ಶಂಕ್ರಣ್ಣ, ದೇವರಾಜ ಕಂಬಳಿ, ಎಸ್.ಎನ್. ಗಾಜೀಗೌಡ್ರ, ಶಂಕ್ರಪ್ಪ ಮಾತನವರ, ತಾಪಂ ಸದಸ್ಯ ಜಗದೀಶ ಪೂಜಾರ, ಬೀರಪ್ಪ ಕಾಗಿನೆಲೆ ಇತರರಿದ್ದರು.

Leave a Reply

Your email address will not be published. Required fields are marked *