More

  ಪ್ರತಿವರ್ಷ ಕ್ರೈಸ್ಟ್ ದಿ ಕಿಂಗ್ಸ್ ನಿರಂತರ ಸಾಧನೆ

  ಚನ್ನರಾಯಪಟ್ಟಣ : ಪಟ್ಟಣದಲ್ಲಿನ ಕೋಟೆ ಬಡಾವಣೆಯಲ್ಲಿರುವ ಕ್ರೆಸ್ಟ್ ದಿ ಕಿಂಗ್ ಪಿಯು ಕಾಲೇಜು ಪ್ರತಿವರ್ಷದಂತೆ ಪ್ರಸಕ್ತ ವರ್ಷವೂ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ.

  2023-24ನೇ ಸಾಲಿಗೆ ನಡೆದ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಡಿ.ಎನ್.ಶ್ರೇಯಸ್ ಮತ್ತು ವಾಣಿಜ್ಯ ವಿಭಾಗದಲ್ಲಿ ಲವಿಟಾ ಅಂಟೋನಿ ಸ್ವಾಮಿ ಅವರನ್ನು ಶುಕ್ರವಾರ ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿತು.

  ಕ್ರೆಸ್ಟ್ ದಿ ಕಿಂಗ್ ಕಾಲೇಜು ಎಲೆಮರೆಯಂತೆ ಕಾಯಿಯಂತೆ ಇದ್ದು, ಪ್ರತಿವರ್ಷ ಉತ್ತಮ ಫಲಿತಾಂಶದೊಂದಿಗೆ ತನ್ನ ಹಿರಿಮೆ, ಗರಿಮೆಯನ್ನು ನಿರಂತರವಾಗಿ ಸಾಧಿಸುತ್ತಾ ಬಂದಿದೆ. ಕಳೆದೊಂದು ದಶಕಗಳಿಂದಲೂ ಉತ್ತಮ ಅಂಕಗಳಿಸಿದ ಕ್ರೆಸ್ಟ್ ದಿ ಕಿಂಗ್ ಕಾಲೇಜಿನ ವಿದ್ಯಾರ್ಥಿಗಳು ದೇಶದ ಮೂಲೆ ಮೂಲೆಗಳಲ್ಲಿ ಉತ್ತಮ ಭವಿಷ್ಯ ಕಂಡುಕೊಂಡಿದ್ದಾರೆ. ನೂರಾರು ವಿದ್ಯಾರ್ಥಿಗಳು ಮೆಡಿಕಲ್ ಮಾಡುವ ಮೂಲಕ ಕಾಲೇಜಿಗೆ ಹಿರಿಮೆ ತಂದಿದ್ದಾರೆ.

  ಕಾಲೇಜಿನ ವಿದ್ಯಾರ್ಥಿ ಡಿ.ಎನ್.ಶ್ರೇಯಸ್ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 587 ಅಂಕ ಪಡೆದಿದ್ದಾನೆ. ವಾಣಿಜ್ಯ ವಿಭಾಗದಲ್ಲಿ ಲವಿಟಾ ಅಂಟೋನಿ ಸ್ವಾಮಿ 600 ಅಂಕಗಳಿಗೆ 582 ಅಂಕ ಪಡೆಯುವ ಮೂಲಕ ಕಾಲೇಜಿಗೆ ಮೊದಲಿಗಳಾಗಿದ್ದಾಳೆ. ಈ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಅಂತೋಣಿ ರಾಜ್ ಮತ್ತು ಬೋಧಕ ಸಿಬ್ಬಂದಿ ಸನ್ಮಾನಿಸಿದರು.

  ಅಂತೋಣಿ ರಾಜ್ ಮಾತನಾಡಿ, 9 ವರ್ಷಗಳಿಂದ ಚನ್ನರಾಯಪಟ್ಟಣದ ಕ್ರೆಸ್ಟ್ ದಿ ಕಿಂಗ್ ಕಾಲೇಜಿನ ಫಲಿತಾಂಶವನ್ನು ಕುತೂಹಲದಿಂದ ನಿರೀಕ್ಷಿಸುವ ರೀತಿಯಲ್ಲಿ ನಮ್ಮ ಮಕ್ಕಳು ಸಾಧನೆ ಮಾಡುತ್ತಾ ಬಂದಿದ್ದಾರೆ. ಶಿಕ್ಷಕರೇ ಸೇರಿ ಕಟ್ಟಿದ ಸಂಸ್ಥೆಯಲ್ಲಿ ಎಲ್ಲರೂ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿರುವುದೇ ನಮ್ಮ ಯಶಸ್ಸಿಗೆ ಕಾರಣ. ನಮ್ಮ ಕಾಲೇಜಿನಲ್ಲಿ ದಾಖಲಾಗುವ ಮಕ್ಕಳೆಲ್ಲ ಬಡವರು, ಗ್ರಾಮೀಣ ಭಾಗದವರು. ಅವರಲ್ಲಿರುವ ಬದ್ಧತೆಗೆ ಒಂದು ರೂಪ ಕೊಟ್ಟು ಮೇಧಾವಿಗಳನ್ನಾಗಿ ಮಾಡುತ್ತಿದ್ದೇವೆ. ನಮ್ಮ ಸಂಸ್ಥೆಯ ಮೇಲೆ ಮಕ್ಕಳು, ಪಾಲಕರು ಇಟ್ಟಿರುವ ವಿಶ್ವಾಸವನ್ನು ನಿರಂತರವಾಗಿ ಉಳಿಸಿಕೊಂಡು ಬರುವ ಕೆಲಸ ಮಾಡಲಾಗುತ್ತಿದೆ. ಅವರ ನಂಬಿಕೆಗೆ ಧಕ್ಕೆ ಆಗದ ರೀತಿಯಲ್ಲಿ ಉತ್ತಮ ಅಂಕಗಳೊಂದಿಗೆ ಭದ್ರ ಅಡಿಪಾಯ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದರು.

  ಕಾಲೇಜಿನ ಉಪ ಪ್ರಾಂಶುಪಾಲರಾದ ರಾಧಾ ಅಂತೋನಿರಾಜ್, ಉಪನ್ಯಾಸಕರು, ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts