More

    ಬೀದಿಗಿಳಿದ ವಿದ್ಯಾರ್ಥಿಗಳು ಪೌರತ್ವ ಕಾಯ್ದೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು: ಅಶೋಕ್ ಹಾರನಹಳ್ಳಿ

    ಹಾಸನ: ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರಾಗಿ ಬದುಕುತ್ತಿರುವ ಹಿಂದುಗಳಿಗೆ ಭಾರತೀಯ ಪೌರತ್ವ ನೀಡುವುದು ತಪ್ಪೆಂದು ವಾದಿಸುತ್ತಿರುವ ವಿದ್ಯಾರ್ಥಿಗಳು ಪೌರತ್ವ ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಹೇಳಿದರು.

    ನಗರದ ಸೀತಾರಾಮಾಂಜನೇಯ ದೇವಸ್ಥಾನ ಆವರಣದಲ್ಲಿ ಭಾನುವಾರ ನಗರ ಬ್ರಾಹ್ಮಣ ಸಭಾದಿಂದ ಏರ್ಪಡಿಸಿದ್ದ ವಿಪ್ರ ಸ್ನೇಹ ಸೌಹಾರ್ದ ಕೂಟ ಉದ್ಘಾಟಿಸಿ ಮಾತನಾಡಿದರು.

    ಎಡಪಂಥೀಯ ಸಂಘಟನೆ ಹಾಗೂ ಮಾಧ್ಯಮಗಳ ವದಂತಿಗೆ ಮರುಳಾಗಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿಯಿಂದ ದೇಶವಾಸಿಗಳಿಗೆ ಯಾವುದೇ ತೊಂದರೆಯಿಲ್ಲ. ಫೇಸ್‌ಬುಕ್, ವಾಟ್ಸಾಪ್‌ನಿಂದ ಹೊರಬಂದು ಪುಸ್ತಕಗಳ ಅಧ್ಯಯನ ಮಾಡಿದರೆ ಸತ್ಯ ಅರಿವಾಗುತ್ತದೆ ಎಂದರು.
    ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಪಘಾನಿಸ್ತಾನದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿ ಬದುಕುತ್ತಿದ್ದಾರೆ. ಅಲ್ಲಿನ ಹಿಂದುಗಳು ಭಾರತಕ್ಕೆ ಬರುವುದರಲ್ಲಿ ಯಾವ ತಪ್ಪಿದೆ. ಆ ಎಲ್ಲ ರಾಷ್ಟ್ರಗಳು ತಮ್ಮನ್ನು ತಾವು ಇಸ್ಲಾಮಿಕ್ ಸ್ಟೇಟ್ಸ್ ಎಂದು ಒಪ್ಪಿಕೊಂಡ ಮೇಲೆಯೂ ಭಾರತ ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. ಹೀಗೆಂದ ಮಾತ್ರಕ್ಕೆ ಪಾಕಿಸ್ತಾನದಿಂದ ಈಗ ಬರುತ್ತೇವೆ ಎನ್ನುವ ಮುಸ್ಲಿಂರನ್ನು ಆಮಂತ್ರಿಸುವುದು ಒಳ್ಳೆಯದಲ್ಲ.

    ಭಾರತದಲ್ಲಿ 14 ವರ್ಷ ವಾಸವಿರುವ ವಿದೇಶಿಗ ಹಾಗೂ ದೌರ್ಜನ್ಯಕ್ಕೊಳಗಾಗಿ 5 ವರ್ಷ ನಮ್ಮ ದೇಶದಲ್ಲೇ ವಾಸ್ತವ್ಯ ಹೂಡಿರುವ ವ್ಯಕ್ತಿಗೆ ಪೌರತ್ವ ನೀಡಲು ಕಾನೂನು ರೂಪಿಸಲಾಗಿದೆ. ಪ್ರಸ್ತುತ ಸರ್ಕಾರ 14 ವರ್ಷದ ನಿಯಮಕ್ಕೆ ಬದಲಾಗಿ 5 ವರ್ಷ ಎಂದು ನಿಗದಿಪಡಿಸಿದೆ. ಜತೆಗೆ ಕಾನೂನಿಗೆ ಕೆಲ ಮಾರ್ಪಾಡು ಮಾಡಿದೆ. ಆದರೆ ಅದನ್ನೇ ದೊಡ್ಡ ಪ್ರಮಾದವೆಂಬಂತೆ ಭಾವಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದು ಸರಿಯಲ್ಲ ಎಂದು ಪ್ರತಿಪಾದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts