More

    VIDEO: ‘ಆಕಾಶ ಇಷ್ಟೇ ಯಾಕಿದೆಯೋ..ಈ ಭೂಮಿ ಕಷ್ಟ ಆಗಿದೆಯೋ..’-ಟೆರೇಸ್​ ಮೇಲೆ ಕುಳಿತು ಗಾಳಿಪಟ ಹಾರಿಸಿ ಆಟವಾಡಿದ ಮಂಗ.. !

    ಇತ್ತೀಚೆಗೆ ಕೋತಿಗಳು ಸ್ವಿಮ್ಮಿಂಗ್​ ಫೂಲ್​ನಲ್ಲಿ ಸ್ವಚ್ಛಂದವಾಗಿ ಈಜುತ್ತಿದ್ದ ವಿಡಿಯೋವೊಂದು ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿತ್ತು. ಈಗ ಅಂಥದ್ದೇ ಒಂದು ಕ್ಯೂಟ್​ ವಿಡಿಯೋ ವೈರಲ್​ ಆಗಿದೆ. ಇದು ಕೂಡ ಕೋತಿಗೆ ಸಂಬಂಧಪಟ್ಟದ್ದೇ.

    ಲಾಕ್​ಡೌನ್​ ಇರುವುದರಿಂದ ಮನುಷ್ಯರೆಲ್ಲ ಮನೆಯಲ್ಲಿಯೇ ಇದ್ದಾರೆ. ಹಾಗಾಗಿ ಮಂಗಗಳು ಸೇರಿ ಹಲವು ಪ್ರಾಣಿಗಳು ನಗರದಲ್ಲಿ ಆರಾಮವಾಗಿ ಓಡಾಡಿಕೊಂಡು, ಕೀಟಲೆ ಮಾಡಿಕೊಂಡು ಇವೆ.

    ಆದರೆ ಇಲ್ಲೊಂದು ಕೋತಿ ಗಾಳಿಪಟ ಹಾರಿಸಿದೆ. ಅದರ ವಿಡಿಯೋ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಐಎಫ್​ಎಸ್ ಅಧಿಕಾರಿ ಸುಸಾಂತಾ ನಂದಾ ಅವರು ವಿಡಿಯೋವನ್ನು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಟೆರೇಸ್​ ಮೇಲೆ ಕುಳಿತ ಕೋತಿಯೊಂದು ಪಕ್ಕಾ ಮನುಷ್ಯರಂತೆಯೇ ಗಾಳಿಪಟ ಹಾರಿಸಿ ಆಟವಾಡುವುದನ್ನು 12 ಸೆಕೆಂಡ್​ಗಳ ವಿಡಿಯೋದಲ್ಲಿ ನೋಡಬಹುದು.

    ವಿಡಿಯೋ ಶೇರ್​ ಮಾಡಿದ ಐಎಫ್​ಎಸ್​ ಅಧಿಕಾರಿ, ಲಾಕ್​ಡೌನ್​ ಎಂಬುದು ಅನೇಕ ವಿಕಾಸಗಳಿಗೆ ಕಾರಣವಾಗುತ್ತಿದೆ. ಮಂಗ ಗಾಳಿಪಟ ಹಾರಿಸುತ್ತಿದೆ. ಹೌದು..ನಿಜಕ್ಕೂ ಅದು ಕೋತಿಯೇ ಹೌದು..ಎಂದು ಕ್ಯಾಪ್ಷನ್​ ಬರೆದಿದ್ದಾರೆ.
    ಶೇರ್​ ಆದ ಐದೇ ತಾಸಿನಲ್ಲಿ 10,000ಕ್ಕೂ ಅಧಿಕ ವೀವ್ಸ್​ಗಳನ್ನು ಪಡೆದುಕೊಂಡಿರುವ ವಿಡಿಯೋಕ್ಕೆ ಸಾವಿರಕ್ಕೂ ಹೆಚ್ಚು ಲೈಕ್ಸ್​​ಗಳು ಬಂದಿವೆ.

    ನೆಟ್ಟಿಗರಂತೂ ಫುಲ್​ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಗೆಬಗೆಯ ಕಾಮೆಂಟ್​ಗಳನ್ನು ಹಾಕಿದ್ದಾರೆ. ಇದೊಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಸನ್ನಿವೇಶ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    VIDEO: ಲಾಕ್​ಡೌನ್​ ಇದ್ರೇನು? ಪೊಲೀಸರು ಕೂಗ್ತಿದ್ದರೆ ನಮಗೇನು…ಸಿಕ್ಕಿದಷ್ಟು ಎತ್ಕೊಂಡು ಹೋಗ್ತಾ ಇರೋದೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts