ಶ್ರೀರಾಮನಿಂದಲೂ ಅತ್ಯಾಚಾರ ಪ್ರಕರಣ ತಡೆಯಲು ಸಾಧ್ಯವಿಲ್ಲ: ಬಿಜೆಪಿ ಶಾಸಕ

ಬಲಿಯಾ(ಉತ್ತರ ಪ್ರದೇಶ) : ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಈಗಾಗಲೇ ಕೆಲವರು ಬಿಜೆಪಿ ನಾಯಕರು ಸುದ್ದಿಯಾಗಿದ್ದಾರೆ. ಇದೀಗ ಅದೇ ಸಾಲಿಗೆ ಸೇರುತ್ತಾರೆ ಬೈರಿಯಾ ಜಿಲ್ಲೆಯ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ್‌ ಸಿಂಗ್‌.

ಹೌದು, ಸ್ವತಃ ಶ್ರೀರಾಮನೇ ಬಂದರೂ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿ ಸುದ್ದಿಯಾಗಿದ್ದಾರೆ.

ಉತ್ತರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯಿಸಿ, ಈ ವಿಚಾರವನ್ನು ನಾನು ಆತ್ಮವಿಶ್ವಾಸದಿಂದ ಹೇಳುತ್ತೇನೆ. ಭಗವಾನ್‌ ಶ್ರೀರಾಮನಿಂದಲೂ ಇಂತಹುಗಳನ್ನು ತಡೆಯಲು ಸಾಧ್ಯವಿಲ್ಲ. ಇವೆಲ್ಲ ಸ್ವಾಭಾವಿಕ ಮಾಲಿನ್ಯಗಳಿದ್ದಂತೆ. ಅದು ಯಾರನ್ನು ಬಿಡುವುದಿಲ್ಲ. ಇತರರನ್ನು ತಮ್ಮ ಕುಟುಂಬದ ಅಕ್ಕ-ತಂಗಿಯರು ಎಂದು ಭಾವಿಸಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಇವುಗಳನ್ನು ನಾವು ಮೌಲ್ಯಗಳಿಂದ ತಡೆಗಟ್ಟಬಹುದೇ ಹೊರತು ಸಂವಿಧಾನದಿಂದಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ಸುರೇಂದ್ರ ನಾರಾಯಣ್‌ ಸಿಂಗ್‌ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸರ್ಕಾರಿ ಸಿಬ್ಬಂದಿಗಳಿಗಿಂತ ವೇಶ್ಯೆಯರೇ ಉತ್ತಮ. ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಪಾಲಕರು ಮತ್ತು ಸ್ಮಾರ್ಟ್‌ ಫೋನ್‌ಗಳೇ ಕಾರಣ ಎಂದಿದ್ದರು. (ಏಜೆನ್ಸೀಸ್)