ಮೈಸೂರು: ಗಾಢ ನಿದ್ರೆಯಲ್ಲಿದ್ದರೂ ಬಡಿದೆಬ್ಬಿಸುವಂತಹ ಕನಸು ಕಾಣಬೇಕೇ ವಿನಾ ಸಿನಿ, ಕ್ರಿಕೆಟ್ ತಾರೆಯರ ಕುರಿತು ಹಗಲುಗನಸು ಕಾಣುವುದರಿಂದ ಏನು ಪ್ರಯೋಜನವಿಲ್ಲ ಎಂದು ಕರ್ನಾಟಕ ಗೃಹ ಮಂಡಳಿಯ ಆಯುಕ್ತ ಕೆ.ಎ.ದಯಾನಂದ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಆಯೋಜಿಸಿದ್ದ 50 ದಿನಗಳ ಐಎಎಸ್ ಮತ್ತು ಕೆಎಎಸ್ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಶುಭಹಾರೈಸಿ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಬಡತನ ಮತ್ತು ಹಸಿವಿನ ಒತ್ತಡ ಇದ್ದವರಿಗೆ ಮಾತ್ರ ಸಾಧನೆ ಮಾಡಲು ಸಾಧ್ಯ. ಉದಾಹರಣೆಗೆ ನಾನು ಕೆ.ಆರ್.ನಗರ ತಾಲೂಕಿನ ಕೆಸ್ತೂರುಕೊಪ್ಪಲಿನ ಗುಡಿಸಲಿನಲ್ಲಿ ವಾಸವಿದ್ದು, ಮುಂಜಾನೆ ಎದ್ದು ಐದಾರು ಕಿ.ಮೀ. ನಡೆದು ಕಬ್ಬು ಮತ್ತು ಟೊಮ್ಯಾಟೋ ಹಣ್ಣನ್ನು ಕಿತ್ತು, ಮತ್ತೆ ಐದಾರು ಕಿಮೀ ಹೊತ್ತು ಪಕ್ಕದ ಊರಿನ ಹೆಬ್ಬಾಳಿಗೆ ನಡೆಯುತ್ತಿದ್ದೆ. ಹೀಗಾಗಿ, ನನ್ನಲ್ಲಿ ಹಠ ಮತ್ತು ಛಲದ ಕಿಚ್ಚನ್ನು ಹೆಚ್ಚಿಸಿದವು. ನನ್ನ ಮತ್ತು ನನ್ನ ಕುಟುಂಬವನ್ನು ಕಾಡುವ ಬಡತನ ಮತ್ತು ಹೊಟ್ಟೆ ಹಸಿವಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲೆಂದೇ ಆರಂಭಿಸಿದ ಓದಿನ ಓಟ ಈಗ ನನ್ನನ್ನು ಐಎಎಸ್‌ವರೆಗೆ ತಂದು ನಿಲ್ಲಿಸಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಕರಾಮುವಿಯಿಂದ ಗ್ರಾಮೀಣ, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು-ಕಾರ್ಮಿಕರು, ನಗರದ ಬಡ ಮತ್ತು ಮಧ್ಯಮವರ್ಗದವರಿಗೆ ಕೈಗೆಟುಕುವ ದರದಲ್ಲಿ ಪದವಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಿದ್ದೇವೆ. ಇದರ ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೊಡಗು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯಾ ಅವರು ಶಿಬಿರಾರ್ಥಿಗಳೊಂದಿಗೆ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಯ ಕುರಿತಂತೆ ಆಸಕ್ತಿದಾಯಕ ಪ್ರಶ್ನೋತ್ತರ ಸಂವಾದ ನಡೆಸಿ ಪರೀಕ್ಷಾ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.
ಪರೀಕ್ಷಾಂಗ ಕುಲಸಚಿವ ಡಾ. ಸಿ.ಎಸ್.ಆನಂದಕುಮಾರ್, ತರಬೇತಿ ಕೇಂದ್ರ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಂಪನ್ಮೂಲ ವ್ಯಕ್ತಿಗಳಾದ ಸಿದ್ದೇಶ್ ಹೊನ್ನೂರ್, ಬಿ.ಗಣೇಶ ಕೆ.ಜಿ.ಕೊಪ್ಪಲ್ ಇದ್ದರು.
ಗಾಢ ನಿದ್ರೆಯಲ್ಲಿದ್ದರೂ ಬಡಿದೆಬ್ಬಿಸುವಂತಹ ಕನಸು ಕಾಣಬೇಕು: ಕೆಎಚ್ ಬಿ ಆಯುಕ್ತ ಕೆ.ಎ.ದಯಾನಂದ

You Might Also Like
ಯಾವುದೇ ಕೆಲಸಕ್ಕೆ ಹೊರಗೆ ಹೋಗುವಾಗ ಸೀನುವುದು ಒಳ್ಳೆಯದಲ್ಲ! ಇದು ಯಾವುದರ ಸೂಚನೆ ಎಂದು ನಿಮಗೆ ತಿಳಿದಿದೆಯೇ? Sneezing
Sneezing : ನಾವು ಯಾವುದೇ ಪ್ರಮುಖ ಕೆಲಸದ ಮೇಲೆ ಹೊರಗೆ ಹೋದಾಗ, ಕೆಲವು ಅನಿರೀಕ್ಷಿತ ಘಟನೆಗಳು…
ನೀವು ಪ್ರತಿದಿನ ಬಿಸಿನೀರಿನಿಂದ ಸ್ನಾನ ಮಾಡುತ್ತೀರಾ? ಇದನ್ನು ತಿಳಿದುಕೊಳ್ಳಲೇಬೇಕು.. Bathing
Bathing : ಪ್ರತಿನಿತ್ಯ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ನಾವು ವಾತಾವರಣಕ್ಕೆ ಹೊಂದಿಕೆಯಾಗಿ ಬಿಸಿ, ತಣ್ಣಿರನ್ನು…