More

  ತಾಲೂಕು ಆಡಳಿತ ಸೌಧದ ಬಳಿ ತಲೆ ಎತ್ತಿದ್ದ ಅನಧಿಕೃತ ಮಳಿಗೆಗಳ ತೆರವು

  ಮೈಸೂರು: ನಗರದ ತಾಲೂಕು ಆಡಳಿತ ಸೌಧದ ಬಳಿ ಅನಧಿಕೃತವಾಗಿ ತಲೆ ಎತ್ತಿದ್ದ ಕಟ್ಟಡಗಳನ್ನು ತಾಲೂಕು ಆಡಳಿತದಿಂದ ಶನಿವಾರ ತೆರವುಗೊಳಿಸಲಾಯಿತು.
  ಮಿನಿ ವಿಧಾನಸೌಧ ಹಿಂಭಾಗ ಹಳೇ ತಹಸೀಲ್ದಾರ್ ಕಚೇರಿ ಜಾಗದಲ್ಲಿ ವ್ಯಕ್ತಿಯೊಬ್ಬರು ಏಳು ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸಿಕೊಂಡು ಇತರರಿಗೆ ಬಾಡಿಗೆ ನೀಡಿದ್ದರು. ಈ ಬಗ್ಗೆ ಬಂದ ದೂರಿನ ಮೇರೆಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ನಿರ್ದೇಶನದಂತೆ ತಹಸೀಲ್ದಾರ್ ಮಹೇಶ್‌ಕುಮಾರ್ ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ರಾಘವೇಂದ್ರ ನಾಯಕ್, ಗ್ರಾಮ ಆಡಳಿತಾಧಿಕಾರಿ ನಾಗೇಶ್‌ಕುಮಾರ್, ಮಹೇಶ್, ಅಜೀಂಖಾನ್ ಇತರರು ತೆರವು ಕಾರ್ಯಾಚರಣೆ ನಡೆಸಿದರು.
  ಈ ಮೂಲಕ ಒತ್ತುವರಿಯಾಗಿದ್ದ ಸುಮಾರು ಒಂದೂವರೆ ಕೋಟಿ ರೂ. ಮೌಲ್ಯದ ಜಾಗವನ್ನು ಸರ್ಕಾರಿ ವಶಕ್ಕೆ ಪಡೆಯಲಾಯಿತು. ನಜರ್‌ಬಾದ್ ಠಾಣೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts