ದಯಾಮರಣಕ್ಕೆ ಮನವಿ

ರಬಕವಿ/ಬನಹಟ್ಟಿ: 35 ವರ್ಷಗಳಿಂದ ಕೈಮಗ್ಗ ನೇಕಾರರ ಸ್ಥಿತಿ ಸುಧಾರಣೆಯಾಗದೆ ಸದ್ಯ ಮಕ್ಕಳನ್ನೂ ಸಲುಹುದಂತಹ ಪರಿಸ್ಥಿತಿ ಎದá-ರಾಗಿದೆ. ನೇಕಾರರದ್ದು ಶೂನ್ಯ ಸಂಪಾದನೆಯಾಗಿದೆ. ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ನೂರಾರು ಕೈಮಗ್ಗ ನೇಕಾರರು ಸಾಮೂಹಿಕ ದಯಾಮರಣಕ್ಕಾಗಿ ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದು ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು.

ಕೈಮಗ್ಗ ನೇಕಾರರ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿ, ಶಾಶ್ವತ ಪರಿಹಾರ ಕಾಣದೆ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇವೆ. ಹೀಗಾಗಿ ದಯಾಮರಣಕ್ಕೆ ಪತ್ರ ಬರೆಯುವ ಅನಿವಾರ್ಯ ಉಂಟಾಗಿದೆ ಎಂದರು.

ರಬಕವಿ-ಬನಹಟ್ಟಿ ತಹಸೀಲ್ದಾರ್ ಪ್ರಶಾಂತ ಚನಗೊಂಡ ಸ್ಥಳಕ್ಕೆ ಭೇಟಿ ನೀಡಿ, ಹೋರಾಟ ಬೇಡಿಕೆಗಳಿಗೆ ಸೀಮಿತವಾಗಿರಲಿ. ದಯಾಮರಣಗಳಂತಹ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ನೇಕಾರರಲ್ಲಿ ಮನವಿ ಮಾಡಿದರು. ಸರ್ಕಾರದ ಮಟ್ಟದಲ್ಲಿ ಉನ್ನತ ಅಧಿಕಾರಿಳೊಂದಿಗೆ ರ್ಚಚಿಸಿ ಸೂಕ್ತ ಪರಿಹಾರ ಒದಗಿಸಲು ಡಿಸಿ ನೇತೃತ್ವದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಕೆಲ ಬೇಡಿಕೆ ಈಡೇರಿಕೆಗೆ ಕಾನೂನು ತೊಡಕು ಉಂಟಾಗಿ ಸಮಸ್ಯೆ ಜಟಿಲವಾಗಿದೆ. ವೃದ್ಧಾಪ್ಯ, ವಿಧವಾ, ಅಂಗವಿಕಲ ಮಾಸಾಶನ ಸಮಸ್ಯೆ ಶೀಘ್ರ ಪರಿಹರಿಸುವುದಾಗಿ ತಿಳಿಸಿದರು.

ತೇರದಾಳ ಉಪತಹಸೀಲ್ದಾರ್ ಎಸ್. ಬಿ. ಕಾಂಬಳೆ, ಆಡಳಿತಾಧಿಕಾರಿ ವಿಜಯಕá-ಮಾರ, ನೇಕಾರ ಮುಖಂಡರಾದ ಸದಾಶಿವ ಗೊಂದಕರ, ಸಿದ್ದಪ್ಪ ಗಂವಾರ, ಅಸ್ಕರ್ ಜಮಾದಾರ, ಗೌರವ್ವ ಅಮಟಿ, ದಾನಪ್ಪ ಮಿರ್ಜಿ, ರತ್ನಾ ಮಿರಜಕರ, ಎಸ್.ಎಲ್. ಹಾಸಿಲ್​ಕರ್, ಸಂಗೀತಾ ಒಂಟಿ, ಈರವ್ವ ಹುನ್ನೂರ, ಚಂದ್ರವ್ವ ಕಡ್ಲಿಮಟ್ಟಿ, ರೇಣುಕಾ ಗಣಾಚಾರಿ, ಫಾತಿಮಾ ನದಾಫ್, ಮಹಾದೇವಿ ಮುಗಳೊಳ್ಳಿ ಮತ್ತಿತರರಿದ್ದರು.