More

    ಮುಂದಿನ ಸೂಚನೆಯವರೆಗೂ ಇರಾನ್​ ವಾಯುಮಾರ್ಗದಲ್ಲಿ ಸಂಚಾರ ಬೇಡ; ವಿಮಾನಯಾನ ಸಂಸ್ಥೆಗಳಿಗೆ ಇಎಎಸ್​ಎ ಎಚ್ಚರಿಕೆ ಸಂದೇಶ

    ಬ್ರುಸೆಲ್​: ಉಕ್ರೇನ್​ ವಿಮಾನವನ್ನು ಹೊಡೆದುರುಳಿಸಿದ್ದು ತಾವೇ ಎಂದು ಇರಾನ್​ ಸೇನೆ ಒಪ್ಪಿಕೊಂಡಿರುವ ಬೆನ್ನಲ್ಲೇ ಯುರೋಪಿಯನ್​ ಒಕ್ಕೂಟದ ವಾಯುಯಾನ ಸುರಕ್ಷತಾ ಸಂಸ್ಥೆ ಎಲ್ಲ ಏರ್​ಲೈನ್ಸ್​ಗಳಿಗೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.

    ಅಮೆರಿಕ ಮತ್ತು ಇರಾನ್​ ನಡುವೆ ಸಂಘರ್ಷ ಉಂಟಾಗಿದೆ. ಅಮೆರಿಕ ದಾಳಿಗೆ ಇರಾನ್​ ಪ್ರತಿದಾಳಿಯನ್ನೂ ನಡೆಸಿದೆ. ಅದರ ಬೆನ್ನಲ್ಲೇ ಉಕ್ರೇನ್​ ವಿಮಾನವನ್ನು ತಪ್ಪಾಗಿ ಗ್ರಹಿಸಿ ಹೊಡೆದುರುಳಿಸದ ಪರಿಣಾಮ 176 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

    ಈಗ ಯುರೋಪಿಯನ್ ಏವಿಯಷನ್ ಸೇಫ್ಟಿ ಏಜೆನ್ಸಿ ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ಎಚ್ಚರಿಕೆಯಿಂದ ಇರಿ, ಸದ್ಯ ಯಾರೂ ಇರಾನ್​ ವಾಯುಮಾರ್ಗದಲ್ಲಿ ಸಂಚಾರ ಮಾಡಬೇಡಿ ಎಂದು ಸೂಚನೆ ನೀಡಿದೆ. ಅಲ್ಲದೆ, ವಾಣಿಜ್ಯ ವಿಮಾನಗಳು ತೆಹ್ರಾನ್​ ಪ್ರವೇಶ ಮಾಡುವುದು ಸದ್ಯದ ಮಟ್ಟಿಗೆ ಎಷ್ಟು ಅಪಾಯ ಎಂಬುದನ್ನು ನಾವು ಮೌಲ್ಯಮಾಪನ ಮಾಡಿದ್ದೇವೆ ಎಂದು ತಿಳಿಸಿದೆ.

    ಮುನ್ಸೂಚನಾ ಕ್ರಮವಾಗಿ ಭದ್ರತಾ ದಳಗಳ ಶಿಫಾರಸಿನ ಮೇರೆಗೆ ಮುಂದಿನ ಸೂಚನೆವರೆಗೂ ಇರಾನ್​ನ ವಾಯುಮಾರ್ಗದಲ್ಲಿ ವಿಮಾನಗಳ ಸಂಚಾರ ಮಾಡದೆ ಇರುವುದು ತುಂಬ ಒಳ್ಳೆಯದು ಎಂದು ಇಎಎಸ್​ಎ​ ಹೇಳಿದೆ.

    ಇನ್ನೊಮ್ಮೆ ಇಂತಹ ಅನಾಹುತಗಳು ಸಂಭವಿಸದಂತೆ ಎಚ್ಚರದಿಂದ ಕೆಲಸ ಮಾಡಿ ಎಂದು ಇರಾನ್​ ಸರ್ವೋಚ್ಛ ನಾಯಕ ಅಲಿ ಖಮೇನಿ ತಮ್ಮ ದೇಶದ ಸೇನಾ ಪಡೆಗಳಿಗೆ ಖಡಕ್​ ಆದೇಶ ನೀಡಿದ್ದಾರೆ.(ಏಜೆನ್ಸೀಸ್​)

    ಉಕ್ರೇನಿಯನ್​ ವಿಮಾನ ಪತನ ಪ್ರಕರಣ: ಕೊನೆಗೂ ತಪ್ಪೊಪ್ಪಿಕೊಂಡ ಇರಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts