ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ಎತಿಕ್ ಡೇ

ದಾವಣಗೆರೆ: ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಮಂಗಳವಾರ ಆಯೋಜಿಸಿದ್ದ ಎತ್ನಿಕ್ ಡೇ, ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆಗಳಲ್ಲಿ ಗಮನ ಸೆಳೆದರು.

ಕಾಲೇಜಿನಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು. ವಿವಿಧ ಬಣ್ಣದ ಸೀರೆ, ಉಡುಪು ತೊಟ್ಟು ಸಂಭ್ರಮಿಸಿದರು. ಕೆಲವು ವಿದ್ಯಾರ್ಥಿನಿಯರು ಶಿವ- ಪಾರ್ವತಿ ಸೇರಿ ವಿವಿಧ ದೇವತಾ ಮೂರ್ತಿಗಳ ಉಡುಗೆಗಳಲ್ಲಿ ಕಂಗೊಳಿಸಿದರು. ಅಲ್ಲಲ್ಲಿ ನಿಂತವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

ಕಾಲೇಜಿನಲ್ಲಿ ಹಳ್ಳಿ ಸಂಸ್ಕೃತಿ ವಾತಾವರಣ ಇತ್ತು. ಬಾವಿ, ಗುಡಿಸಲು ನಿರ್ಮಿಸಲಾಗಿತ್ತು, ಎತ್ತಿನ ಗಾಡಿ ಕಂಡುಬಂದಿತು. ಯುವತಿಯರು ಎತ್ತಿನ ಗಾಡಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.