ಶರಣರ ಕ್ರಾಂತಿಯಿಂದ ಸಮಾಜದಲ್ಲಿ ಸಮಾನತೆ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

12ನೇ ಶತಮಾನದ ಶಿವಶರಣರ ಕಾಲದಲ್ಲಿ ಕಾಯಕ ನಿಷ್ಠೆ ಹಾಗೂ ಪ್ರಬುದ್ಧ ಸಮಾಜ ನಿರ್ವಣಕ್ಕಾಗಿ ತೀವ್ರ ಹೋರಾಟ ನಡೆಸಿದ ಫಲದಿಂದ ಎಲ್ಲೆಡೆ ಸಾಮಾಜಿಕ ಭದ್ರತೆ ದೊರೆತಿದೆ ಎಂದು ಮುಪ್ಪಿನಸ್ವಾಮಿ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾ ಡಳಿತ ಹಾಗೂ ಶಿವಶರಣ ಹಡಪದ ಅಪ್ಪಣ್ಣ ಸಮಾಜದ ತಾಲೂಕು ಘಟಕದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಸಮಾನತೆ ಹಾಗೂ ಅಂಧಕಾರಗಳನ್ನು ತೊಡೆದು ಹಾಕಲು ನಡೆಸಿದ ಕ್ರಾಂತಿಕಾರಕ ಹೋರಾಟದ ಪ್ರತಿಫಲದಿಂದ ಸಮಾನತೆ ದೊರೆತಿದೆ. ಸಮಾಜದಲ್ಲಿದ್ದ ಕಂದಾಚಾರ ಹಾಗೂ ಮೌಢ್ಯ ಆಚರಣೆಗಳನ್ನು ತೊಡೆದುಹಾಕುವಲ್ಲಿ ಶಿವಶರಣರು ನಡೆಸಿದ ಯತ್ನ ಇಂದಿಗೂ ಸಂಪೂರ್ಣವಾಗಿ ಸಫಲವಾಗಿಲ್ಲ. ಜಾತಿ ಭೇದ, ಬಡವ, ಮೇಲು-ಕೀಳು ಎನ್ನದೆ ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು ಎಂಬ ಶರಣರ ನಿಲುವು ಸಂವಿಧಾನದಲ್ಲಿ ಅಡಕವಾಗಿದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ ಸೇರಿ ಹಲವು ಶರಣರು ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದರು.

ಹಿರಿಯ ಸಾಮಾಜಿಕ ಹೋರಾಟಗಾರ ಮುರಿಗೆಪ್ಪ ಶೆಟ್ಟರ್ ಮಾತನಾಡಿ, ಬರೀ ಶರಣರ ಜಯಂತ್ಯುತ್ಸವ ಆಚರಣೆಯಿಂದ ಅಭಿವೃದ್ಧಿ ಹಾಗೂ ಸಮಾಜ ಪರಿವರ್ತನೆ ಸಾಧ್ಯವಿಲ್ಲ. ಅವರ ನಡೆನುಡಿ ಹಾಗೂ ಜೀವನ ಚರಿತ್ರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕವಾಗಲಿದೆ. ಶರಣರ ವಚನಗಳನ್ನು ಮನೆಮನೆಗೂ ತಲುಪಿಸಲು ಹಾಗೂ ಅವರ ಭಾವಚಿತ್ರಗಳನ್ನು ಸಮಾಜ ಬಾಂಧವರಿಗೆ ನೀಡುವುದಾಗಿ ಭರವಸೆ ನೀಡಿದರು.

ಪ್ರೊ. ವಿ.ಜಿ. ಮಲ್ಲೂರು ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬೀರಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ ನಡೆಸಲಾಯಿತು. ನೂರಾರು ಮಹಿಳೆಯರು ಕುಂಭ ಹೊತ್ತು ಪಾಲ್ಗೊಂಡಿದ್ದರು. ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಮುಖಂಡರಾದ ಫಕೀರಮ್ಮ ಚಲವಾದಿ, ಸೋಮಣ್ಣ ಕರ್ನಲ, ಬಸಲಿಂಗಪ್ಪ ಕಾಯಕದ, ದುಂಡೆಪ್ಪ ಕಾಯಕದ, ವಕೀಲ ಮೃತ್ಯುಂಜಯ ಕಾಯಕದ, ಮಂಜುನಾಥ ಕಾಯಕದ, ಧನಂಜಯ ಕದರಮಂಡಲಗಿ, ಬಾಬಣ್ಣ ಕ್ಯಾಲಕೊಂಡ, ಷಣ್ಮುಖ ಕಾಯಕದ, ಉದಯ ಬೇವಿನಮಟ್ಟಿ, ಉದಯ ಕಾಯಕದ ಇತರರಿದ್ದರು.

Leave a Reply

Your email address will not be published. Required fields are marked *