ಸಮಪಾಲು, ಸಮಬಾಳ್ವೆಗೆ ಪ್ರಜಾಪ್ರಭುತ್ವ ಪೂರಕ

Equality, Equality, Democracy, Additional District Collector, Somalinga Gennur, Nalatwada, Human Chain,

ನಾಲತವಾಡ: ನಾಗರಿಕ ಹಕ್ಕುಗಳ ಉಳಿಯುವಿಕೆ, ಪ್ರಜಾಪ್ರಭುತ್ವವನ್ನು ಸಂವಿಧಾನದ ಮೂಲಕ ಗಟ್ಟಿಗೊಳಿಸುವುದು ಸೇರಿ ಕಾನೂನುಬದ್ಧ ಆಡಳಿತ ಹಾಗೂ ಸಮಬಾಳು, ಸಮಾನತೆ ಸಾರುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಯಶಸ್ವಿಗೊಳಿಸಲು ರಾಜ್ಯದ ಅಂದಾಜು 2500 ಕಿ.ಮೀ. ಉದ್ದದ ಮಾನವ ಸರಪಳಿ ಪೂರಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ಸಮೀಪದ ಮುದ್ದೇಬಿಹಾಳ ತಾಲೂಕು ಹಾಗೂ ಲಿಂಗಸುಗೂರು ಗಡಿ ಭಾಗ ಬಸವಸಾಗರ ಜಲಾಶಯದ ಸೇತುವೆಯಿಂದ ಅಂದಾಜು 65 ಕಿ.ಮೀ ದೂರದ ಮಾನವ ಸರಪಳಿಗೆ ನಾಡಗೀತೆ ಹಾಗೂ ಸಂವಿಧಾನ ಪೀಠಿಕೆ ಪ್ರಸ್ತುತ ಪಡಿಸಿ ಚಾಲನೆ ನೀಡಿ ಅವರು ಮಾತನಾಡಿದರು.

ವೀರೇಶನಗರ ಮೂಲಕ ನಾಲತವಾಡ, ನಾಗರಬೆಟ್ಟ ಹಾಗೂ ಮುದ್ದೇಬಿಹಾಳ ಮಾರ್ಗದಿಂದ ಗೆದ್ದಲಮರಿ, ಚಲಮಿ, ಜಟ್ಟಗಿ, ಹುಲ್ಲೂರ ಹಾಗೂ ನಿಡಗುಂದಿಯಿಂದ ಆಲಮಟ್ಟಿ ಮದ್ಯದಿಂದ ಬಾಗಲಕೋಟೆ ಗಡಿವರೆಗೆ ಅಂದಾಜು 60 ಸಾವಿರ ಜನರ ಗುರಿಯೊಂದಿಗೆ, ಶಾಲಾ ಮಕ್ಕಳ, ಸಂಘ ಸಂಸ್ಥೆ, ಜನಪ್ರತಿನಿಧಿಗಳು, ಆಶಾ- ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಕರು, ಆರೋಗ್ಯ ಇಲಾಖೆಯವರು, ಪಂಚಾಯತ್ ರಾಜ್ಯ ಇಲಾಖೆಯವರು ಉತ್ಸುಕತೆಯಿಂದ ಭಾಗವಹಿಸಿದ್ದು ಶ್ಲಾಘನೀಯ ಎಂದರು.

ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಎಪಿಎಂಸಿ ನಿರ್ದೇಶಕ ವೈ.ಎಚ್.ವಿಜಯಕರ್, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಗುಳಗಿ ಮಾತನಾಡಿದರು. ವಿ.ವಿ.ಅಂಬಿಗೇರ ಸಂವಿಧಾನ ಪೀಠಿಕೆ ಓದಿದರು.

ನಾಗಬೇನಾಳ ಪಿಡಿಒ ಎಂ.ಎ.ಪೀರಾಪೂರ, ಅರಣ್ಯಾಧಿಕಾರಿ ಮೃತ್ಯುಂಜಯ ಬಿದಕುಂದಿ, ಡಾ.ಸಿ.ಬಿ.ವಿರಕ್ತಮಠ, ವೈ.ಎನ್.ದೊರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ತಾಪಂ ಇಒ, ರಾಯನಗೌಡ ತಾತರಡ್ಡಿ, ಮಲ್ಲಿಕಾರ್ಜುನ ಬಾಗೇವಾಡಿ, ಮಲ್ಲು ತಳವಾರ, ಸಿದ್ದಣ್ಣ ಕಟ್ಟಿಮನಿ, ಮೈಬೂಬ ಕುಳಗೇರಿ, ಮಂಜು ಕಟ್ಟಿಮನಿ, ಭೀಮಣ್ಣ ಚಲವಾದಿ, ನಾಗಬೇನಾಳ ಗ್ರಾಪಂ ಸದಸ್ಯರಾದ ಭೀಮಣ್ಣ ಗುರಿಕಾರ ಇದ್ದರು.

ವೀರೇಶನಗರದ ಮೂಲಕ ಆಗಮಿಸಿದ ಮಾನವ ಸರಪಳಿಯನ್ನು ಪಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್, ಉಪಾಧ್ಯಕ್ಷ ಬಸವರಾಜ ಗಂಗನಗೌಡರ ಹಾಗೂ ಸದಸ್ಯರು ಸೇರಿ ಬರಮಾಡಿಕೊಂಡರು. ನಾಲತವಾಡ, ಮುದ್ದೇಬಿಹಾಳ ಹಾಗೂ ತಾಳಿಕೋಟೆಯ ಪೋಲೀಸರು ಮತ್ತು ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ್ ತಿಪ್ಪಾರಡ್ಡಿ, ರಾಮನಗೌಡ ಸಂಕನಾಳ ಸಿಬ್ಬಂದಿಯೊಂದಿಗೆ ಭದ್ರತೆ ಒದಗಿಸಿದ್ದರು.

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…