More

    ರಾಯಬಾಗ: ಸಮಾನತೆ ಹರಿಕಾರ ಅಂಬೇಡ್ಕರ್

    ರಾಯಬಾಗ: ಭೀಮಾ ಕೋರೆಗಾಂವ ಐತಿಹಾಸಿಕ ಯುದ್ಧ ಇತಿಹಾಸವನ್ನು ಮುಚ್ಚಿಟಿದ್ದನ್ನು ಜಗತ್ತಿಗೆ ಬಿಚ್ಚಿಟ್ಟು ಯುದ್ಧದ ಮಹತ್ವವನ್ನು ಸಾರಿದ ಶ್ರೇಯಸ್ಸು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ನಾಸಿಕನ ಬಂತೆ ಗುರುದಮ್ಮ ಬಿಕ್ಕು ಹೇಳಿದ್ದಾರೆ.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಭೀಮಾ ಕೋರೆಗಾಂವ ವಿಜಯೋತ್ಸವ ಕಮಿಟಿಯಿಂದ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ ವಿಜಯೋತ್ಸವದ 202ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಾನ ಬುದ್ಧನ ಸಾಮಾಜಿಕ ಸಮಾನತೆಯನ್ನು ಸಂವಿಧಾನದಲ್ಲಿ ಅಳವಡಿಸುವುದರ ಮೂಲಕ ದೇಶದ ಎಲ್ಲ ಪ್ರಜೆಗಳಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಾನತೆ ನೀಡಿದ ಹೆಗ್ಗಳಿಕೆ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.

    ಉಪನ್ಯಾಸಕರಾಗಿ ಆಗಮಿಸಿದ್ದ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಸಂಜು ತಳವಾರಕರ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಕೂಡ, ನಿಜವಾದ ಶೋಷಿತರಿಗೆ ಇನ್ನೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ವಾತಂತ್ರ್ಯ ದೊರಕದಿರುವುದು ಬೇಸರದ ಸಂಗತಿಯಾಗಿದೆ ಎಂದರು.

    ಕ.ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ (ಭೀಮವಾದ) ರಾಜು ತಳವಾರ ಮತ್ತು ಪಪಂ ಸದಸ್ಯ ಗಣೇಶ ಕಾಂಬಳೆ, ಮಹಾಲಿಂಗಪ್ಪ ಅಳಬಾಳ ಅವರು ಭೀಮಾ ಕೋರೆಗಾಂವ ಯುದ್ಧದ ಇತಿಹಾಸ ಮತ್ತು ವಿಜಯೋತ್ಸವ ಕುರಿತು ಮಾತನಾಡಿದರು. ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ಪಾಟೀಲ, ನ್ಯಾಯವಾದಿ ಎಂ.ಜಿ. ಉಗಾರೆ, ಮುಖ್ಯ ವೈದ್ಯಾಧಿಕಾರಿ ರಮೇಶ ರಂಗನ್ನವರ, ಪಶುವೈದ್ಯಾಧಿಕಾರಿ ಎಂ.ಬಿ. ಪಾಟೀಲ, ಹೆಸ್ಕಾಂ ಅಧಿಕಾರಿ ನಾಗರಾಜ ಯಳಕರ, ಉತ್ತಮಕುಮಾರ ಶಿಂಧೆ, ದೇವಾನಂದ ಸನದಿ, ರೇವಣ್ಣ ಸರವ, ಜಯಶ್ರೀ ಭಿರಡೆ, ದೀಪಾ ಕುರಾಡೆ, ಯಲ್ಲಪ್ಪ ಶಿಂಗೆ, ಅಶೋಕ ಕಾಂಬಳೆ, ನಾಮದೇವ ಮದಲೆ, ಮಹಿಬೂಬ್ ಶೇಖ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಅರುಣ ಕಾಂಬಳೆ ಸ್ವಾಗತಿಸಿದರು. ಮಿಥುನ ಕಾಂಬಳೆ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts