ನೀರಿನ ಟ್ಯಾಂಕರ್ ಮಾಲೀಕರಿಗೆ ಹಣ ಬಿಡುಗಡೆ

ಕಡೂರು: ಕಳೆದ ಎರಡು ಮೂರು ವರ್ಷಗಳಿಂದ ಟ್ಯಾಂಕರ್ ಮೂಲಕ ನೀರುಪೂರೈಸುತ್ತಿರುವ ಟ್ಯಾಂಕರ್ ಮಾಲೀಕರಿಗೆ 1.8 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಾಲೂಕು ಪ್ರಭಾರ ಇಒ ಎಸ್.ನಯನಾ ತಿಳಿಸಿದರು.

ಕಳೆದ ನಾಲ್ಕ ದಿನಗಳ ಹಿಂದೆ ಜಿಪಂ ಸಿಇಒ ಸತ್ಯವತಿ ಕಡೂರು ತಾಲೂಕು ಕಚೇರಿಗೆ ಭೇಟಿ ನೀಡಿದಾಗ ಚೆಕ್ ನೀಡಿದ್ದು. ವಾರದೊಳಗೆ ಬಾಕಿದಾರರಿಗೆ ಹಣ ನೀಡಲಾಗುವುದು ಎಂದರು.

2017-18 ನೇ ಸಾಲಿನಲ್ಲಿ ಸುಮಾರು 30 ಗ್ರಾಪಂ ವ್ಯಾಪ್ತಿಗೆ ಸೇರಿರುವ 71 ಹಳ್ಳಿಗಳಿಗೆ ನೀರು ಪೂರೈಸಿದ ಸುಮಾರು1.55 ಕೋಟಿ ರೂ.ಬಾಕಿ ಹಣದಲ್ಲಿ ಶೇ.70 ಬಿಡುಗಡೆಯಾಗಿದೆ. ಉಳಿದ 30 ರಷ್ಟು ಹಣವನ್ನು ಗ್ರಾಪಂಗಳು ಲಭ್ಯವಿರುವ ಹಣಕಾಸಿನಡಿಯಲ್ಲಿ ಟ್ಯಾಂಕರ್ ಮಾಲೀಕರಿಗೆ ನೀಡಲು ಸೂಚಿಸಲಾಗಿದೆ ಎಂದರು.

ತಾಲೂಕಿನ ಮಲ್ಲೇಶ್ವರ ಗ್ರಾಪಂ ವ್ಯಾಪ್ತಿಯ ಮಚ್ಚೇರಿ, ತುರುವನಹಳ್ಳಿ, ಎಂ.ಕೋಡಿಹಳ್ಳಿ. ಚೌಡ್ಲಾಪುರ, ಗ್ರಾಮಗಳಲ್ಲಿ ನೀರಿನ ಲಭ್ಯತೆ ಇದ್ದರೂ ಸಮರ್ಪಕವಾಗಿ ವಿತರಣೆ ನಡೆದಿಲ್ಲ. ತುರುವನಹಳ್ಳಿಯಲ್ಲಿ ಎರಡು ದಿನಗಳಿಗೊಮ್ಮೆ ನೀರು ಪೂರೈಸುತ್ತಿದ್ದು, ಪ್ರತ್ಯೇಕ ಕೊಳವೆ ಬಾವಿ ಕೊರೆಸಲು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದ್ದಾರೆ ಎಂದರು.