ಗುಳೇದಗುಡ್ಡ: ಇಂದು ಯಾಂತ್ರಿಕೃತ ಜೀವನ ಪದ್ಧತಿಯಿಂದ ಗಗನಮುಖಿ ಕಟ್ಟಡ ನಿರ್ಮಾಣಮಾಡಿ ಅರಣ್ಯಗಳ ನಾಶ, ರಾಸಾಯನಿಕ ಬಳಕೆ, ಪ್ಲಾಸ್ಟಿಕ್ ಅತೀಯಾದ ಬಳಕೆಯಿಂದಾಗಿ ಪ್ರಕೃತಿಯ ಮೇಲೆ ಸಾಕಷ್ಟು ಪರಿಣಾಮಬೀರಿ ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಅನೇಕ ಸಮಸ್ಯೆ ತಂದೊಡ್ಡಿದೆ ಎಂದು ಪಟ್ಟಣದ ಶಾರದಾ ಪಿಯು ಕಾಲೇಜು ಆಡಳಿತಾಧಿಕಾರಿ ಪ್ರೊ. ಹನುಮಂತ ಭಜಂತ್ರಿ ಹೇಳಿದರು.
ಪಟ್ಟಣದ ಡಾ. ರಾಧಾಕೃಷ್ಣನ್ ಶಿಕ್ಷಕ ನಗರದ ಪ್ರಗತಿ ಕಾಲನಿಯಲ್ಲಿ ಗಾರ್ಡನ್ ಹಾಗೂ ರಸ್ತೆಯ ಪಕ್ಕದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪರಿಸರ ಉಳಿವಿಗಾಗಿ ಗಿಡಮರಗಳನ್ನು ಬೆಳೆಸುವ ಅವಶ್ಯಕತೆ ಇದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪರಿಸರ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಬಾದಾಮಿ ವಲಯ ಅರಣ್ಯಾಧಿಕಾರಿ ಸಿದ್ದು ಪೂಜಾರ, ವಲಯ ಅರಣ್ಯ ಉಪವಿಭಾಗಾಧಿಕಾರಿ ಮಂಜುನಾಥ ಜಗದಾಳ, ಪ್ರೊ. ಅನಿಲ ಮಾನ್ವಿ, ವಿಶ್ರಾಂತ ಪ್ರೊ. ವೀರಭದ್ರಪ್ಪ ಬೆನಕನಾಳ, ಮಂಜುನಾಥ ಇಜೇರಿ, ಸಂಗಮೇಶ ಕಡಿ, ಪ್ರದೀಪ ಕಂಚಾಣಿ, ಶಿವಾನಂದ ಬಡಿಗೇರ, ಕಿರಣಕುಮಾರ ಭಾಪ್ರಿ ಇದ್ದರು.