More

  ಸ್ವಯಂಕೃತ ಅಪರಾಧದಿಂದ ಪರಿಸರ ಕಲುಷಿತ

  ಶಿಕಾರಿಪುರ: ದಿನೇದಿನೆ ನಮ್ಮ ಸ್ವಯಂಕೃತ ಅಪರಾಧಗಳಿಂದ ಪರಿಸರ ಕಲುಷಿತವಾಗುತ್ತಿದೆ. ಈಗಿನ ಕಾಲಘಟ್ಟದಲ್ಲಿ ಪರಿಸರ ಪ್ರಜ್ಞೆ ಎಲ್ಲರಲ್ಲೂ ಇರಬೇಕು ಎಂದು ಪ್ರಾಚಾರ್ಯ ಡಾ. ಎಂ.ವೀರೇಂದ್ರ ಹೇಳಿದರು.

  ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ನಾವು ಪರಿಸರವನ್ನು ಸಂರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಣೆ ಮಾಡುತ್ತದೆ. ಇದರಿಂದ ನಮ್ಮ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದರು.
  ಪ್ಲಾಸ್ಟಿಕ್ ತ್ಯಾಜ್ಯ ಭೂಮಿಯಲ್ಲಿ ಹೆಚ್ಚಾದಂತೆ ವಾತಾವರಣ ಕಲುಷಿತವಾಗುತ್ತದೆ. ಅಂತರ್ಜಲದ ಮೇಲೆ ಪರಿಣಾಮ ಉಂಟಾಗುತ್ತದೆ. ಅಕಾಲಿಕ ಮಳೆಯಿಂದ ಬೆಳೆಗಳು ನಾಶವಾಗುತ್ತವೆ. ಹೊಸ ಹೊಸ ರೋಗಗಳು ಉದ್ಭವವಾಗುತ್ತವೆ. ಋತುಗಳ ಕಾಲ ತಪ್ಪುತ್ತದೆ. ಭೂಗೋಳ ಬಿಸಿಯಾಗುತ್ತದೆ. ಹಾಗಾಗಿ ವಿದ್ಯಾರ್ಥಿ ಜೀವನದಿಂದಲೇ ಪರಿಸರದ ಬಗ್ಗೆ ಅರಿವು ಮೂಡಿದರೆ ಉಳ್ಳೆಯದು ಎಂದು ಹೇಳಿದರು.
  ಪರಿಸರದ ಮಹತ್ವ ಕುರಿತು ಕನ್ನಡ ಉಪನ್ಯಾಸಕ ಶಿವರಾಜ್ ಮಾಹಿತಿ ನೀಡಿದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಥಮ ದಿನವಾಗಿದ್ದರಿಂದ ಶಾರದಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿಜ್ಞಾನ ವಿಭಾಗದ ಮುಖ್ಯಸ್ಥ ಪರ್ವೀಜ್ ಅಹಮದ್, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

  See also  ವೈದ್ಯರಿಗೆ ಕರ್ತವ್ಯ ನಿರ್ವಹಿಸಲು ಸಹಕರಿಸಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts