25.9 C
Bengaluru
Wednesday, January 22, 2020

ಮದ್ಯ ನಿಷೇಧದ ನಂತರ ಮತ್ತೊಂದು ವಿಶಿಷ್ಟ ಹೆಜ್ಜೆ

Latest News

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ...

ಮೂರು ಬಾರಿ ಮುಖ್ಯಮಂತ್ರಿಯಾಗಿ ವಿವಿಧ ರಾಜಕೀಯ-ಸಾಮಾಜಿಕ ಪ್ರಯೋಗಗಳನ್ನು ಕೈಗೊಂಡು ಇತರೆ ಪಕ್ಷಗಳ ಅಚ್ಚರಿಗೂ ಕಾರಣವಾಗಿರುವ ಬಿಹಾರ ಸಿಎಂ ನಿತೀಶ್​ಕುಮಾರ್ ಈಗ ಜನರಲ್ಲಿ ಹವಾಮಾನ ಬದಲಾವಣೆ ಬಗ್ಗೆ ಅರಿವು ಮೂಡಿಸಲು ‘ಜಲ್-ಜೀವನ್-ಹರಿಯಾಲಿ ಯಾತ್ರಾ’ ಆರಂಭಿಸಿದ್ದಾರೆ. ರಾಜ್ಯದಲ್ಲಿ ಹಸಿರು ಹೆಚ್ಚಿಸುವುದು, ಜಲಮೂಲಗಳನ್ನು ರಕ್ಷಿಸುವುದು, ಪುನರುಜ್ಜೀವನಗೊಳಿಸುವುದು ಮತ್ತು ನಿಸರ್ಗಸ್ನೇಹಿ ಜೀವನಶೈಲಿಗೆ ಪ್ರೇರಣೆ ನೀಡುವುದು ಯಾತ್ರೆಯ ಉದ್ದೇಶ

ಮತಗಳನ್ನು ಆಕರ್ಷಿಸುವ ನಿರ್ಧಾರ, ನೀತಿಗಳನ್ನೇ ಆಳುಗರು ಪ್ರಕಟಿಸುವುದು ಮಾಮೂಲಾಗಿರುವ ಈ ದಿನಗಳಲ್ಲಿ ನಿತೀಶ್ ಕುಮಾರ್ ಪರಿಸರ ವಿಷಯ ಇರಿಸಿಕೊಂಡು ಯಾತ್ರೆ ಆರಂಭಿಸಿರುವುದು ಅನೇಕರ ಹುಬ್ಬೇರಿಸಿದೆ. ಈ ಹಿಂದೆ ಮದ್ಯ ನಿಷೇಧ, ಬಾಲ್ಯವಿವಾಹ ನಿಷೇಧ ಮಾಡಿ ವರದಕ್ಷಿಣೆ ವಿರುದ್ಧ ಜನಾಂದೋಲನ ರೂಪಿಸಿದ್ದ ನಿತೀಶ್​ಕುಮಾರ್ ಪ್ರಸಕ್ತ ಹವಾಮಾನ ಬದಲಾವಣೆ (ತಾಪಮಾನ ಹೆಚ್ಚಳ) ಸಂಬಂಧ ಜನರ ಬಳಿ ಹೋಗಿ ಮಾತನಾಡುತ್ತಿದ್ದಾರೆ. ಇದೇ ವೇಳೆ ರಾಜ್ಯದ ಕುಗ್ರಾಮಗಳಿಗೂ ಭೇಟಿ ನೀಡಿ, ಅಭಿವೃದ್ಧಿ ನೀತಿಯನ್ನು ಅವಲೋಕಿಸಲಿದ್ದಾರೆ.

ಏನಿದು ಯಾತ್ರೆ?: ಬಿಹಾರಕ್ಕೆ ಒಮ್ಮೆ ನೆರೆ, ಮತ್ತೊಮ್ಮೆ ಬರ ಬಿಟ್ಟುಬಿಡದೇ ಕಾಡುತ್ತಿವೆ. ಒಂದೇ ವರ್ಷ ರಾಜ್ಯದ ಕೆಲ ಪ್ರದೇಶಗಳಲ್ಲಿ ನೆರೆ ಇದ್ದರೆ, ಮತ್ತೆ ಕೆಲ ಭಾಗಗಳಲ್ಲಿ ಬರದ ಸ್ಥಿತಿ (ಕರ್ನಾಟಕದಲ್ಲಿಯೂ ಹೀಗೆ ಇದೆ ಎನ್ನಿ!). ಪರಿಹಾರ ಕಾಮಗಾರಿಗಳೇನೋ ನಡೆಯುತ್ತಿವೆ. ಸರ್ಕಾರ ನೆರವನ್ನೂ ನೀಡುತ್ತಿದೆ. ಆದರೆ, ಹೀಗೆ ಪ್ರಕೃತಿ ಮುನಿಯಲು ಕಾರಣವೇನು? ಈ ಸಮಸ್ಯೆಗೆ ಶಾಶ್ವತ ಪರಿಹಾರ ಏನು? ಎಂದು ನಿತೀಶ್ ತಜ್ಞರ ಬಳಿ ರ್ಚಚಿಸಿದಾಗ ದೊರೆತ ಉತ್ತರವೇ ‘ಹವಾಮಾನ ಬದಲಾವಣೆ’! ಹೌದು, ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚುತ್ತಿದ್ದು, ಇದು ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಮಳೆ ಮಾರುತಗಳು ಏರುಪೇರಾಗುತ್ತಿವೆ. ಮುಖ್ಯವಾಗಿ, ಮರಗಿಡಗಳ ಸಂಖ್ಯೆ ಕಡಿಮೆ ಆಗಿರುವುದು ಈ ಸಮಸ್ಯೆ ಉಲ್ಬಣಕ್ಕೆ ಕಾರಣ. ಜನಸಂಖ್ಯೆ ಹೆಚ್ಚಿದಂತೆ ಮರ-ಗಿಡಗಳ ಸಂಖ್ಯೆಯೂ ಹೆಚ್ಚಬೇಕು ಎಂಬ ಉಪಾಯವನ್ನು ಒಪ್ಪಿಕೊಂಡು ನಿತೀಶ್ ಈಗ ನೇರ ಜನರೆದುರು ಈ ವಿಷಯಗಳನ್ನು ಮಂಡಿಸುತ್ತಿದ್ದಾರೆ.

ಈ ಬೆಳವಣಿಗೆಗಳು ಏಕಾಏಕಿ ಸಂಭವಿಸಿರುವುದೇನಲ್ಲ. ಈ ವರ್ಷ ಜುಲೈನಲ್ಲಿ ಸರ್ವಪಕ್ಷ ಸಭೆ ಕರೆದ ನಿತೀಶ್​ಕುಮಾರ್ ಹವಾಮಾನ ಬದಲಾವಣೆ, ಪ್ರಕೃತಿಯ ನಾಶ ಸೃಷ್ಟಿಸಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಪರಿಸರ ರಕ್ಷಣೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ಸರ್ವಪಕ್ಷಗಳ ನಡುವೆ ಸಮ್ಮತಿ ಏರ್ಪಟ್ಟಿತು. ಆ ಬಳಿಕ, ರಾಜ್ಯ ವಿಧಾನಮಂಡಲಗಳ ಎರಡೂ ಸಭಾಗೃಹಗಳಲ್ಲಿ (ಮೇಲ್ಮನೆ, ಕೆಳಮನೆ) ಈ ಕುರಿತ ನಿರ್ಣಯವನ್ನು ಸರ್ವಸಮ್ಮತದಿಂದ ಅಂಗೀಕರಿಸಲಾಯಿತು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲೆಂದು ಜಲ್-ಜೀವನ್-ಹರಿಯಾಲಿ ಯಾತ್ರೆ ಆರಂಭಿಸಲು ನಿತೀಶ್ ನಿರ್ಧರಿಸಿದರು.

ಹೇಗಿರಲಿದೆ ಯಾತ್ರೆ?

ಪಶ್ಚಿಮ ಚಂಪಾರಣ್ ಜಿಲ್ಲೆಯ ಬಾಘಾದಿಂದ ಡಿಸೆಂಬರ್ 3ರಂದು ಈ ಯಾತ್ರೆ ಆರಂಭಗೊಂಡಿದೆ. ಡಿ.5ರಂದು ಯಾತ್ರೆ ಸಿವಾನ್ ತಲುಪಿದಾಗ ಭಾರಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿತೀಶ್, ಪರಿಸರ ರಕ್ಷಣೆಗೆ ಸರ್ಕಾರದೊಂದಿಗೆ ಜನರೂ ಕೈಜೋಡಿಸಬೇಕು. ಇಲ್ಲದಿದ್ದಲ್ಲಿ ಪ್ರಕೃತಿಯ ಆಘಾತದ ಎದುರು ಮನುಷ್ಯ ಎದ್ದುನಿಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ. ಮೂರ್ನಾಲ್ಕು ಹಂತಗಳಲ್ಲಿ ಯಾತ್ರೆ ನಡೆಯಲಿದ್ದು, ಮೊದಲ ಹಂತದ ಯಾತ್ರೆ ಶನಿವಾರ ಕೊನೆಗೊಳ್ಳಲಿದೆ. ಕೆಲ ದಿನಗಳಲ್ಲೇ ಎರಡನೇ ಹಂತದ ಯಾತ್ರೆ ಆರಂಭಗೊಳ್ಳಲಿದ್ದು, ಒಟ್ಟು ಯಾತ್ರೆಯು ಜನವರಿ ಕೊನೆ ವಾರದಲ್ಲಿ ಸಮಾರೋಪಗೊಳ್ಳಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಈ ಅವಧಿಯಲ್ಲಿ ಭೇಟಿ ನೀಡಲಿರುವ ನಿತೀಶ್, ಜಲ್-ಜೀವನ್-ಹರಿಯಾಲಿ ಮಿಷನ್ ಅಡಿ ಹಲವು ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ.

ಚುನಾವಣೆಯ ಮೇಲೂ ಕಣ್ಣು

ಬಿಹಾರದಲ್ಲಿ 2020ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದರಲ್ಲಿ ಯಶಸ್ಸು ಸಾಧಿಸಿದರೆ ನಿತೀಶ್​ಕುಮಾರ್ ಸತತವಾಗಿ ನಾಲ್ಕನೇ ಬಾರಿ ಬಿಹಾರದ ಮುಖ್ಯಮಂತ್ರಿ ಆಗಲಿದ್ದಾರೆ ಮತ್ತು ಬಿಹಾರದಲ್ಲಿ ದೀರ್ಘಾವಧಿ ಆಳ್ವಿಕೆಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದ್ದಾರೆ. ಆದರೆ, ರಾಜಕೀಯದ ಸಮೀಕರಣಗಳು ಬೇರೆಯೇ ಇವೆ. ಲಾಲು ಪ್ರಸಾದ್ ಯಾದವ್ ಅನುಪಸ್ಥಿತಿಯಿಂದ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಕಳೆಗುಂದಿದ್ದರೂ, ವಿರೋಧಪಕ್ಷಗಳು ಒಟ್ಟಾದರೆ ಜೆಡಿಯುಗೆ ಸಮಸ್ಯೆ ತಪ್ಪಿದ್ದಲ್ಲ. ಅದೇನಿದ್ದರೂ, ಸಾಮಾಜಿಕ ಸಮಸ್ಯೆಗಳನ್ನು ಇರಿಸಿಕೊಂಡು ಜನರ ಮುಂದೆ ಹೋಗುವ ನಿತೀಶರ ಭಿನ್ನ ಶೈಲಿಯನ್ನು ಅನ್ಯಪಕ್ಷದವರೂ ಪ್ರಶಂಸಿಸುತ್ತಿದ್ದಾರೆ.

ಪ್ರಮುಖ ಉದ್ದೇಶ

  • ಜಲ,ಹಸಿರು ಉಳಿದರೆ ಮಾತ್ರ ಜನಜೀವನ ಮುಂದೆ ಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಹಲವು ಪ್ರಮುಖ ಯೋಜನೆ ಹಾಕಿಕೊಂಡಿದ್ದು, 11 ಕಾರ್ಯಕ್ರಮಗಳನ್ನು ಶಾಮೀಲು ಮಾಡಲಾಗಿದೆ ಎಂದು ಬಿಹಾರ ಸರ್ಕಾರ ತಿಳಿಸಿದೆ.
  • ಜಲಮೂಲಗಳನ್ನು ಅತಿಕ್ರಮಣದಿಂದ ಮುಕ್ತಗೊಳಿ ಸುವುದು ಮತ್ತು ಅವುಗಳ ಜೀಣೋದ್ಧಾರ ಮಾಡುವುದು. ಮತ್ತು ಸಂರಕ್ಷಣೆ ಮಾಡುವುದು.
  • ಅಳಿವಿನ ಅಂಚಿಗೆ ತಲುಪಿರುವ ಜಲಮೂಲಗಳನ್ನು ಗುರುತಿಸಿ, ಅವುಗಳಿಗೆ ಪುನರುಜ್ಜೀವನ ನೀಡುವುದು.
  • ಜಲಮೂಲಗಳ ಸುತ್ತಮುತ್ತ ಗಿಡ-ಮರಗಳನ್ನು ಬೆಳೆಸುವುದು.
  • ಮಳೆನೀರನ್ನು ಇಂಗಿಸುವುದು, ನೀರು ಕೊಯ್ಲಿಗೆ ಕ್ರಮ ಕೈಗೊಳ್ಳುವುದು.
  • ಮಳೆನೀರನ್ನು ಸಂಗ್ರಹಿಸಲು, ಸಂರಕ್ಷಿಸಲು ಕ್ರಮ.
  • ನೀರಿನ ಮಿತಬಳಕೆ, ಹನಿ ನೀರಾವರಿಗೆ ಪ್ರೋತ್ಸಾಹ.

ಯಾತ್ರೆಗಳು ಏಕೆ?

ರಾಜಕೀಯ ನಾಯಕರು ರ್ಯಾಲಿಗಳು ನಡೆಸುವಾಗ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಆದರೆ, ಯಾತ್ರೆಗಳಲ್ಲಿ ನಾಯಕರೇ ಜನರ ಬಳಿ ಬಂದು, ಅವರ ಸಮಸ್ಯೆಗಳನ್ನು ಅರಿಯುವುದರಿಂದ ಈ ವಿಧಾನ ಹೆಚ್ಚು ಸೂಕ್ತ ಎನಿಸಿಕೊಂಡಿದೆ. ಅಧಿಕಾರವಧಿಯಲ್ಲಿ ಜನಪ್ರತಿನಿಧಿಗಳು, ರಾಜಕೀಯ ಧುರೀಣರು ಗ್ರಾಮೀಣ ಪ್ರದೇಶದತ್ತ ಬರುವುದೇ ಅಪರೂಪ. ಯಾತ್ರೆಗಳ ಅವಧಿಯಲ್ಲಿ ಹಳ್ಳಿಗಳಿಗೂ ಭೇಟಿ ನೀಡುವುದರಿಂದ ಅಲ್ಲಿನ ಸಮಸ್ಯೆಗಳು ಅರಿವಿಗೆ ಬರುತ್ತವೆ.

ನಾಯಕರ ಯಾತ್ರೆಗಳು

# ರಾಮ ರಥಯಾತ್ರೆ: ಬಿಜೆಪಿ ಹಿರಿಯ ಧುರೀಣ ಲಾಲಕೃಷ್ಣ ಆಡ್ವಾಣಿ 1990ರಲ್ಲಿ ನಡೆಸಿದ ರಾಮ ರಥಯಾತ್ರೆ ಬಿಜೆಪಿ ಪಾಲಿಗೆ ಹೊಸ ಚೈತನ್ಯವನ್ನೇ ತಂದುಕೊಟ್ಟಿತು. ದೇಶಾದ್ಯಂತ ಸಂಚರಿಸಿ ಜನರನ್ನು ಭಾವನಾತ್ಮಕವಾಗಿ ಸೆಳೆದ ಆಡ್ವಾಣಿ, ಈ ಮೂಲಕ ರಾಮ ಜನ್ಮಭೂಮಿ ಆಂದೋಲನಕ್ಕೂ ಹೊಸ ಶಕ್ತಿ ತುಂಬಿದರು.

# ಯುಪಿ ಯಾತ್ರೆ: ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಸಿಂಗ್ ಯಾದವ್ ವಿಧಾನಸಭಾ ಚುನಾವಣೆ ಸಮೀಪದಲ್ಲಿದ್ದಾಗ ಯುಪಿ ಯಾತ್ರೆ ನಡೆಸಿದ್ದರು. ಹಲವು ಹಳ್ಳಿಗಳಿಗೂ ಭೇಟಿ ನೀಡಿ, ಜನರೊಂದಿಗೆ ಒಂದಾಗಿದ್ದರು.

# ಕಿಸಾನ್ ಯಾತ್ರೆ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2016 ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ಕಿಸಾನ್ ಯಾತ್ರಾ ನಡೆಸಿ, ರೈತರೊಂದಿಗೆ ಸಂವಾದ ನಡೆಸಿದ್ದರು. ಗ್ರಾಮೀಣ ಪ್ರದೇಶದಲ್ಲೂ ಸಂಚರಿಸಿದ್ದರು.

# ಸದ್ಭಾವನಾ ಯಾತ್ರೆ: ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಸದ್ಭಾವನೆ ಯಾತ್ರೆ ನಡೆಸಿದ್ದರು. ಸಾಮರಸ್ಯ ಮೂಡಿಸಿ, ಸಹಬಾಳ್ವೆಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿತ್ತು.

# ಸೇವಾಯಾತ್ರೆ: ಈ ಹಿಂದೆ ಸೇವಾಯಾತ್ರೆ ನಡೆಸಿದ್ದ ನಿತೀಶ್ ಕುಮಾರ್ ಬಳಿಕ ಅಧಿಕಾರಯಾತ್ರೆ ಕೂಡ ನಡೆಸಿದ್ದರು.

# ಕ್ರಾಂತಿಯಾತ್ರೆ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ 1987ರಲ್ಲಿ ಉತ್ತರಪ್ರದೇಶದಲ್ಲಿ ನಡೆಸಿದ ಕ್ರಾಂತಿಯಾತ್ರೆ ಭಾರಿ ಜನಬೆಂಬಲ ಪಡೆದುಕೊಂಡಿತ್ತು.

# ಸ್ವರಾಜ್ ಯಾತ್ರೆ: ರಾಷ್ಟ್ರೀಯ ಲೋಕ ದಳ ಅಧ್ಯಕ್ಷ ಅಜಿತ್ ಸಿಂಗ್ ಪಕ್ಷ ಸಂಘಟನೆಯ ಬೇರುಗಳನ್ನು ಗಟ್ಟಿಗೊಳಿ ಸಲು ಉತ್ತರಪ್ರದೇಶದಲ್ಲಿ ಸ್ವರಾಜ್ ಯಾತ್ರೆ ನಡೆಸಿದ್ದರು.

(ಅನಿವಾರ್ಯ ಕಾರಣದಿಂದ ದಿಕ್ಸೂಚಿ ಅಂಕಣ ಪ್ರಕಟವಾಗಿಲ್ಲ)

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...