ಸುರಿಬೈಲು ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ

ಮಂಗಳೂರು: ಅಭಿವೃದ್ಧಿಯ ನೆಪ, ಅನುಕೂಲತೆ ವಿಚಾರಲ್ಲಿ ಹಲವಾರು ವರ್ಷಗಳಿಂದ ಬೆಳೆದು ಬಂದ ಪರಿಸರವನ್ನು ನಿರಂತರವಾಗಿ ನಾಶ ಮಾಡಲಾಗುತ್ತಿದೆ. ಪರಿಸರ ಪ್ರಶಸ್ತಿ ನೀಡುವ ಮೂಲಕ ಶಾಲೆಗಳಲ್ಲಿ ಪರಿಸರ ಸಂರಕ್ಷಣೆಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು 3ನೇ ಹೆಚ್ಚುವರಿ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಮುರಲೀಧರ್ ಪೈ ಬಿ. ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹಯೋಗದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲೇ ತಮಗೆ ಗೊತ್ತಿರುವ ವಿಚಾರ ಅಳವಡಿಸಿ ಪರಿಸರ ರಕ್ಷಣೆಯಲ್ಲಿ ವಿಚಾರ ತೊಡಗಿಸಿಕೊಳ್ಳಲು ಕರೆ ನೀಡಿದರು.

ಕೊಳ್ನಾಡು ಸುರಿಬೈಲು ದ.ಕ ಜಿಪಂ ಉನ್ನತೀಕರಿಸಿದ ಹಿ.ಪ್ರಾ. ಶಾಲೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲೆಯ 10 ಶಾಲೆಗೆ ಹಸಿರು ಶಾಲೆ, 10 ಶಾಲೆಗೆ ಹಳದಿ ಶಾಲೆ ಪ್ರಶಸ್ತಿ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಂಗಾಧರ್, ಮೇಯರ್ ಭಾಸ್ಕರ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತಣ ಮಂಡಳಿ ಸದಸ್ಯ ಪಿಯೂಶ್ ಎಲ್.ರಾಡ್ರಿಗಸ್, ಡಿಡಿಪಿಐ ಶಿವರಾಮಯ್ಯ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ದೇಶಕ ಡಾ.ಕೆ.ವಿ.ರಾವ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ.ಹಾಜಿ ಅಬೂಬಕ್ಕರ್ ಉಪಸ್ಥಿತರಿದ್ದರು.

ಪರಿಸರ ಅಧಿಕಾರಿ ರಾಜಶೇಖರ ಬಿ.ಪುರಾಣಿಕ್ ಸ್ವಾಗತಿಸಿ, ಹಿರಿಯ ವೈಜ್ಞಾನಿಕ ಅಧಿಕಾರಿ ಜಯಪ್ರಕಾಶ್ ಬಿ.ಪುರಾಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಕರುಣಾಕರ್ ವಂದಿಸಿದರು.

ಪ್ರಶಸ್ತಿ ಪಡೆದ ಶಾಲೆಗಳು
ಹಸಿರು ಶಾಲೆ: ಸುಳ್ಯ ದೇವರಕಾನ ಸರ್ಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ, ಬೆಳ್ತಂಗಡಿ ಕಕ್ಕಿಂಜೆ ಸರ್ಕಾರಿ ಪ್ರೌಢಶಾಲೆ, ಬಂಟ್ವಾಳ ಕಡೇಶಿವಾಲಯ ದ.ಕ ಜಿಪಂ ಮಾ.ಹಿ.ಪ್ರಾ.ಶಾಲೆ, ಪುಣಚ ಸ.ಹಿ.ಪ್ರಾ.ಶಾಲೆ ದಂಬೆ, ಇಡ್ಕಿದು ಮಿತ್ತೂರು ದ.ಕ ಜಿಪಂ ಹಿ.ಪ್ರಾ ಶಾಲೆ, ಸಿದ್ದಕಟ್ಟೆ ಸ.ಪ.ಪೂ.ಕಾಲೇಜು ಪ್ರೌಢಶಾಲೆ ವಿಭಾಗ, ಪುತ್ತೂರು ಆನಡ್ಕ ಸ.ಹಿ.ಪ್ರಾ.ಶಾಲೆ, ಬೆಟ್ಟಂಪಾಡಿ ನವೋದಯ ಪ್ರೌಢಶಾಲೆ, ಚೆನ್ನಾವರ ದ.ಕ ಜಿಪಂ ಕಿ.ಪ್ರಾ ಶಾಲೆ, ಸುಳ್ಯ ಅಜ್ಜಾವರ ಸರ್ಕಾರಿ ಪ್ರೌಢಶಾಲೆ.
– ಹಳದಿ ಶಾಲೆ: ಬಂಟ್ವಾಳ ವೀರಕಂಭ ಮಜಿ ದ.ಕ ಜಿಪಂ ಹಿ.ಪ್ರಾ.ಶಾಲೆ, ಕಲ್ಲಡ್ಕ ನೆಟ್ಲ ಸ.ಹಿ.ಪ್ರಾ.ಶಾಲೆ, ಮಂಗಳೂರು ಬಿಜೈ ಲೂರ್ಡ್ಸ್ ಕೇಂದ್ರೀಯ ವಿದ್ಯಾಲಯ, ಪುತ್ತೂರು ಇರ್ದೆ-ಉಪ್ಪಳಿಗೆ ಸರ್ಕಾರಿ ಪ್ರೌಢ ಶಾಲೆ, ಸುಳ್ಯ ದುಗ್ಗಲಡ್ಕ ಸರ್ಕಾರಿ ಪ್ರೌಢಶಾಲೆ, ಪುತ್ತೂರು ರೆಂಜಿಲಾಡಿ ದ.ಕ ಜಿಪಂ ಹಿ.ಪ್ರಾ. ಶಾಲೆ, ಬಂಟ್ವಾಳ ವಿದ್ಯಾಗಿರಿ ರಘುರಾಮ ಮುಕುಂದ ಪ್ರಭು ಸೆಂಟನರಿ ಪಬ್ಲಿಕ್ ಸ್ಕೂಲ್, ಸುಳ್ಯ ಎಣ್ಣೆ ಮಜಲು ಸ.ಕಿ.ಪ್ರಾ.ಶಾಲೆ, ಪುತ್ತೂರು ಶ್ರೀ ರಾಮ ಕೃಷ್ಣ ಪ್ರೌಢಶಾಲೆ, ಕದ್ರಿ ಮಲ್ಲಿಕಟ್ಟೆ ಸರ್ಕಾರಿ ಪ್ರೌಢಶಾಲೆ.