ಕಾನಹೊಸಹಳ್ಳಿ: ಜನರು ಪರಿಸರದ ಮೇಲೆ ಕಾಳಜಿ ತೋರದಿದ್ದರೆ ಇಡೀ ಜೀವಸಂಕುಲಕ್ಕೆ ಆಪತ್ತು ಎದುರಾಗಬಹುದು ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ದಳವಾಯಿ ಬೋರಣ್ಣ ಆತಂಕ ವ್ಯಕ್ತಪಡಿಸಿದರು.
ಸೂಲದಹಳ್ಳಿಯಲ್ಲಿ ಬಣವಿಕಲ್ಲು ವಲಯದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯಿಂದ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮರ, ಗಿಡಗಳನ್ನು ಬೆಳೆಸುವುದರಿಂದ ಮಳೆ ಸಮೃದ್ಧವಾಗಿ ಬೀಳುತ್ತದೆ. ಅಲ್ಲದೆ, ತಾಪಮಾನ ತಗ್ಗಿಸಲು ಪರಿಸರ ಸಂರಕ್ಷಣೆ ಮಾಡಬೇಕು ಎಂದರು.
ಎಸ್‌ಕೆಡಿಆರ್‌ಡಿಪಿ ವಲಯ ಮೇಲ್ವಿಚಾರಕ ಕುಬೇಂದ್ರ ಕುಮಾರ್, ಶಿಕ್ಷಕರಾದ ಹರೀಶ್‌ಗೌಡ, ವಿಶ್ವನಾಥ, ಮಧು, ರವಿ, ವಿಜಯಲಕ್ಷ್ಮೀ, ಗೋವಿಂದಪ್ಪ, ವಿಶ್ವನಾಥ, ಒಕ್ಕೂಟದ ಅಧ್ಯಕ್ಷ ಓಬಕ್ಕ, ಪದಾಧಿಕಾರಿಗಳಾದ ಮಾರಮ್ಮ, ಅಂಜಿನಮ್ಮ, ರೇಣುಕಮ್ಮ, ಸೇವಾ ಪ್ರತಿನಿಧಿ ಕರಿಬಸಪ್ಪ ಇತರರಿದ್ದರು.