ಹೆಬ್ರಿ: ಪ್ರಥಮ ಪಿಯುಸಿ ದಾಖಲಾತಿ ಬಯಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಪಿಆರ್‌ಎನ್ ಅಮೃತ ಭಾರತಿಯಲ್ಲಿ ಭಾನುವಾರ ಪ್ರವೇಶ ಪರೀಕ್ಷೆ ನಡೆಯಿತು.
ಪ್ರಾಂಶುಪಾಲ ಅಮರೇಶ್ ಹೆಗ್ಡೆ ಮಾತನಾಡಿ, ಸಮಾಜ ಸೇವಾ ಮನೋಭಾವದಿಂದ ಆರಂಭವಾದ ಅಮೃತ ಭಾರತಿ ಹಲವಾರು ವರ್ಷಗಳಿಂದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಶುಲ್ಕ ರಿಯಾಯಿತಿ ಮೂಲಕ ಶಿಕ್ಷಣ ನೀಡುತ್ತಾ ಬಂದಿದೆ. ಈ ಬಾರಿ ಪ್ರವೇಶ ಪರೀಕ್ಷೆಯಲ್ಲಿ ದೊಡ್ಡ ಮೊತ್ತದ ವಿದ್ಯಾರ್ಥಿವೇತನ ನೀಡುವ ಯೋಜನೆ ಇದೆ ಎಂದರು.