ಕಲಾದಗಿ: ಒಳ ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುವ ಜನಗಣತಿಯಲ್ಲಿ ಮಾದಿಗ ಸಮುದಾಯದವರು 61ನೇ ಕ್ರಮ ಸಂಖ್ಯೆ ಬಳಸಿ ಮಾದಿಗ ಎಂದೇ ಬರೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ)ಜಿಲ್ಲಾಧ್ಯಕ್ಷ ಕೀರಪ್ಪ ಮಾದರ ಮನವಿ ಮಾಡಿದ್ದಾರೆ.

ಜಸ್ಟಿಸ್ ನಾಗಮೋಹನ್ ದಾಸ್ ಆಯೋಗದ ಮಧ್ಯಂತರ ಶಿಾರಸಿನಂತೆ ಮೇ 5 ರಿಂದ 17 ರ ವರೆಗೆ ನಡೆಯುವ ಸಮೀಕ್ಷೆಗೆ ಗಣತಿದಾರರು ಬಂದಾಗ ಮಾದಿಗ ಸಮುದಾಯ ಬಂಧುಗಳು ಸದರಿ ಸೂಚನೆಯನ್ನು ಅನುಸರಿಸಬೇಕು. ಯಾರಾದರೂ ಗಣತಿದಾರರು ಉದಾಸೀನತೆ ತೋರಿದಲ್ಲಿ ಅಥವಾ ಅಪೂರ್ಣ ಮಾಹಿತಿ ದಾಖಲಿಸಿದ್ದು ಗಮನಕ್ಕೆ ಬಂದಲ್ಲಿ ಕೂಡಲೇ ಜಿಲ್ಲಾಡಳಿತ ಗಮನಕ್ಕೆ ತರಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
TAGGED:ಕಲಾದಗಿ