ಹಣ್ಣುಗಳ ರಾಜ ತಾ ಬಂದಾ… ಮಾವು ಟಿಕ್​, ಟಿಕ್​… ಮಾವು ಟಿಕ್​, ಟಿಕ್​… ಮಾವಿನಹಣ್ಣು ತಿನ್ನುವುದರ ಲಾಭ ಏನು…?

blank

ಬೆಂಗಳೂರು: ಬೇಸಿಗೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವಂತೆ ಘಮ ಘಮಿಸುತ್ತಾ ಬರುವ ಹಣ್ಣೇ ಮಾವಿನ ಹಣ್ಣು. ಇದನ್ನು ಹಣ್ಣುಗಳ ರಾಜ ಎಂದೇ ಕರೆಯುತ್ತಾರೆ. ಅಷ್ಟು ಆಕರ್ಷಣೆ, ರುಚಿ, ಸ್ವಾದಿಷ್ಟ, ವೈವಿಧ್ಯಮಯ, ಪೌಷ್ಟಿಕಾಂಶಭರಿತ… ಈ ಎಲ್ಲ ಕಾರಣಕ್ಕಾಗಿಯೇ ಇದನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ.

ಇಂಥ ಮಾವಿನಹಣ್ಣನ್ನು ತಿನ್ನದಿರುವವರೇ ಕಡಿಮೆ ಎಂದರೂ ತಪ್ಪಾಗಲಾರದು. ಮಕ್ಕಳಂತೂ ಮೈಮೇಲೆ ರಸ ಸೋರಿಸಿಕೊಂಡು, ಹುಳಿ, ಸಿಹಿ ಮಿಶ್ರಿತವಾದ ಹಣ್ಣನ್ನು ತಿನ್ನುತ್ತಿದ್ದರೆ ಅವರಿಗೆ ಸ್ವರ್ಗದಲ್ಲೇ ತೇಲುತ್ತಿರುವ ಅನುಭವ.

ಮಾವಿನಹಣ್ಣುಗಳಲ್ಲಿ ಎಲ್ಲರನ್ನೂ ಆಕರ್ಷಿಸುವ ಎಂಥ ಗುಣಗಳಿವೆ… ಅದನ್ನು ತಿನ್ನುವ ಬಗೆ ಏನು… ಇದನ್ನು ಹೆಚ್ಚಾಗಿ ತಿನ್ನುವುದರಿಂದ ಆರೋಗ್ಯದ ಸಮಸ್ಯೆ ಉಂಟಾಗುತ್ತದೆಯೇ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಕೆಲವೊಂದು ಭಾಗಗಳಲ್ಲಿ ಮಾವಿನಹಣ್ಣನ್ನು ಊಟದೊಂದಿಗೆ ನೆಂಚಿಕೊಂಡು ತಿನ್ನುವ ಅಭ್ಯಾಸ ಇದೆ. ಆದರೆ, ಇದು ತಪ್ಪು. ಅದರ ಬದಲು ಬೆಳಗ್ಗೆ ಮತ್ತು ಮಧ್ಯಾಹ್ನದ ಸಂಧಿಕಾಲದಲ್ಲಿ ಇಲ್ಲವೇ ಇಳಿಸಂಜೆಯ ವೇಳೆ ತಿನ್ನುವುದರಿಂದ ಆರೋಗ್ಯಕಾರಿ ಅಂಶಗಳು ಹೆಚ್ಚಾಗುತ್ತವೆ ಎಂದು ಆಹಾರ ತಜ್ಞರು ಅಭಿಪ್ರಾಯಪಡುತ್ತಾರೆ.

ಮಾವಿನಹಣ್ಣನ್ನು ಇಡಿಯಾಗಿ ತಿನ್ನುವುದರಿಂದ ಹೆಚ್ಚಿನ ಲಾಭಗಳಿವೆ. ಅದನ್ನು ಕತ್ತರಿಸಿ, ಸಣ್ಣ ತುಂಡಾಗಿ ಅಥವಾ ಜ್ಯೂಸ್​ ಮಾಡಿಕೊಂಡು ಕುಡಿಯುವುದರಿಂದ, ಅದರಲ್ಲಿನ ನಾರಿನಾಂಶ ಮತ್ತು ಪೌಷ್ಟಿಕಾಂಶ ಎಲ್ಲವೂ ನಷ್ಟವಾಗುತ್ತದೆ ಎಂದು ಎಚ್ಚರಿಸುತ್ತಾರೆ.

ತ್ವಚ್ಛೆ ಬೆಳಗುತ್ತೆ, ಕೂದಲು ಬೆಳೆಯುತ್ತೆ: ಮಾವಿನಹಣ್ಣು ಕ್ಷಾರೀಯ ಗುಣಗಳನ್ನು ಹೆಚ್ಚಾಗಿ ಹೊಂದಿದೆ. ಹಾಗಾಗಿ ಈ ಹಣ್ಣನ್ನು ಸೇವಿಸುವುದರಿಂದ, ತ್ವಚ್ಛೆ ಬೆಳಗುತ್ತದೆ. ತಲೆಗೂದಲು ಸಮೃದ್ಧವಾಗಿ ಬೆಳೆಯುತ್ತದೆ. ಜತೆಗೆ ಮೊಡವೆ ಸಮಸ್ಯೆಯನ್ನೂ ತರುತ್ತದೆ.
ಮೊಡವೆ ಎಂದು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಈ ಸಮಸ್ಯೆಗೆ ಪರಿಹಾರ ಇದೆ. ಮಾವಿನಹಣ್ಣನ್ನು ಸೇವಿಸುವ ಮೊದಲು ಐದಾರು ನಿಮಿಷ ನೀರಿನಲ್ಲಿ ನೆನಸಿಟ್ಟು ತಿನ್ನುವುದರಿಂದ ಮೊಡವೆ ಸಮಸ್ಯೆಯೇ ಉದ್ಭವಿಸುವುದಿಲ್ಲ ಎಂದು ಆಹಾರ ತಜ್ಞರು ಹೇಳಿದ್ದಾರೆ.

ಸಿಪ್ಪೆಯೂ ಆರೋಗ್ಯಕಾರಿ: ಮಾವಿನಹಣ್ಣಿನ ಸಿಪ್ಪೆ ಮತ್ತು ಹಣ್ಣಿನ ತಿರುಳಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆ್ಯಂಟಿಆಕ್ಸಿಡೆಂಟ್​ಗಳು ಯಥೇಚ್ಚವಾಗಿ ಇವೆ. ಹೀಗಾಗಿ ನಾನಾ ಬಗೆಯ ಮಾರಕ ಸೋಂಕುಗಳ ವಿರುದ್ಧ ಹೋರಾಡಲು ಇದು ದೇಹವನ್ನು ಸಜ್ಜುಗೊಳಿಸುತ್ತದೆ.
ವಿಟಮಿನ್​ ಎ, ಬೀಟಾ ಕ್ಯರೋಟಿನ್​, ಆಲ್ಫಾ ಕ್ಯರೋಟಿನ್​ ಮತ್ತು ಬೀಟಾ ಕ್ರಿಪ್ಟೋಕ್ಸಾಂಥಿನ್​ ಎಂಬ ಫ್ಲವನೋಯಿಡ್​ಗಳನ್ನು ಹೊಂದಿದೆ. ಇದರಿಂದಾಗಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲೂ ಮಾವಿನಹಣ್ಣು ಸಹಕಾರಿ ಎಂದು ಆಹಾರ ತಜ್ಞರು ಮಾಹಿತಿ ನೀಡಿದ್ದಾರೆ.

ಮಾವಿನಹಣ್ಣಿನಲ್ಲಿ ಪೊಟಾಷಿಯಂ ಲವಣಾಂಶ ಹೆಚ್ಚಾಗಿರುತ್ತದೆ. ಹಾಗಾಗಿ ಹೃದಯ ಸಂಬಂಧಿತ ಸಮಸ್ಯೆಗಳು, ಹೃದಯಬಡಿತ, ರಕ್ತೊದೊತ್ತಡದಂಥ ಸಮಸ್ಯೆಗಳನ್ನು ನಿಯಂತ್ರಿಸಲು ಈ ಹಣ್ಣು ಸಹಕರಿಸುತ್ತದೆ ಎಂದು ತಿಳಿಸಿದ್ದಾರೆ.

ಮಾವಿನಹಣ್ಣಿನಲ್ಲಿರುವ ಗುಣಗಳು, ಅವಗುಣಗಳು, ಅವಗುಣಗಳ ಪರಿಹಾರ, ಆರೋಗ್ಯದ ಲಾಭ ಇತ್ಯಾದಿ ಅಂಶಗಳನ್ನು ತಿಳಿದುಕೊಂಡಾಯಿತಲ್ಲ… ಇನ್ನು ನಿಮ್ಮ ಇಷ್ಟದ ತಳಿಯ ಮಾವಿನಹಣ್ಣನ್ನು ಖರೀದಿಸಿ, ತಿಂದು, ಆಸ್ವಾದಿಸಿ…

ಈ ನಟಿ 25 ವರ್ಷಗಳ ಹಿಂದೆ ನುಡಿದಿದ್ದ ಭವಿಷ್ಯ ಇಂದು ಸತ್ಯವಾಗಿದೆಯಂತೆ… ಯಾರು ಆ ನಟಿ… ಏನದು ಭವಿಷ್ಯ…

Share This Article

ಹುಡುಗಿಯ ಹೃದಯವನ್ನು ಗೆಲ್ಲುವುದು ಹೇಗೆ..? Chanakya Niti

Chanakya Niti: ಈಗಿನ ಯಾವ ಹುಡುಗಿಯೂ ಹುಡುಗನ ಪ್ರೀತಿಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಚಾಣಕ್ಯನು ಪುರುಷನು…

ಕಂಕುಳಿನ ದುರ್ವಾಸನೆಯಿಂದ ಬೇಕಾ ಮುಕ್ತಿ? ಹಾಗಾದ್ರೆ ಈ ಸಿಂಪಲ್ ಟಿಪ್​ ಅನುಸರಿಸಿ, ಆಮೇಲೆ ನೋಡಿ ಚಮತ್ಕಾರ!

Bad Odour: ವಿಪರೀತ ಬೆವರುವುದು ಇಂದು ಅನೇಕರ ಸಮಸ್ಯೆ. ಪ್ರತಿಯೊಬ್ಬರು ಬೆವರುತ್ತಾರೆ. ಆದರೆ, ಎಲ್ಲರೂ ಬೆವರುವ…

ನೋ ಜಿಮ್​, ನೋ ಡಯಟ್​… ಬರೋಬ್ಬರಿ 20 KG ತೂಕ ಇಳಿಕೆ, ಯುವತಿಯ ಆರೋಗ್ಯದ ಗುಟ್ಟು ರಟ್ಟು! Weight Loss

Weight Loss : ಇತ್ತೀಚೆಗೆ ತೂಕ ಇಳಿಕೆ ತುಂಬಾ ಸುಲಭವಾಗಿದೆ. ಏಕೆಂದರೆ, ತೂಕ ಇಳಿಕೆಗೆ ಹಲವು…