19.4 C
Bangalore
Friday, December 13, 2019

ಆಂಗ್ಲಮಾಧ್ಯಮ ಪಠ್ಯಪುಸ್ತಕ ಇಲ್ಲ

Latest News

ಹೂಕುಂಡಗಳಲ್ಲಿ ವಿದೇಶಿ ಗಾಂಜಾ ಬೆಳೆಯುತ್ತಿದ್ದ ಮೂವರು ಆರೋಪಿಗಳ ಸೆರೆ: ಡಾರ್ಕ್ ವೆಬ್ ಮೂಲಕ ವ್ಯವಹಾರ

ಬೆಂಗಳೂರು: ವಿದೇಶಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಅಮರ್ತ್ಯ ರಿಷಿ ಬಂಧಿತ ಪ್ರಮುಖ ಆರೋಪಿ. ಈತ ಅಪಾರ್ಟ್​ಮೆಂಟ್​ನ...

ಲಾಟರಿ ಗೀಳಿಗೆ ಬಿದ್ದು ಸಾಲತೀರಿಸಲಾಗದೇ ಹೆಂಡತಿ, ಮಕ್ಕಳಿಗೆ ವಿಷಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಆನೇಕಲ್: ಸಿಂಗಲ್​ ನಂಬರ್​ ಲಾಟರಿ ಗೀಳಿನಿಂದ ಮೈತುಂಬ ಸಾಲಮಾಡಿಕೊಂಡ ವ್ಯಕ್ತಿಯೊಬ್ಬ ಕೊನೆಗೆ ಸಾಲತೀರಿಸಲಾಗದೆ ಹೆಂಡತಿ ಮತ್ತು ಮೂವರು ಮಕ್ಕಳಿಗೆ ವಿಷಕೊಟ್ಟು ತಾನೂ ಕುಡಿದು...

ಸಾರ್ವಜನಿಕರಿಗೆ ಬೆದರಿ ಕಾರಿನಲ್ಲಿದ್ದ ಪ್ರಜ್ಞಾಹೀನ ಯುವತಿ ಬಿಟ್ಟು ಪರಾರಿಯಾದ ಯುವಕ

ಮಂಗಳೂರು: ಸಾರ್ವಜನಿಕರಿಗೆ ಬೆದರಿದ ಯುವಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಕಾರಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಮಂಗಳೂರು ಹೊರವಲಯದ ಕುಳಾಯಿ ಬಳಿ ಘಟನೆ ಸಂಭವಿಸಿದೆ.ಕಾರಿನ ಮುಂಭಾಗದ ಸೀಟಿನಲ್ಲಿ...

ಕೇರಳದಲ್ಲಿ ನಿರ್ಮಾಣವಾಯ್ತು ವಿಶ್ವದ ಮೊದಲ ಸಾಗರ ಸ್ಮಶಾನ: ಇಲ್ಲಿದೆ ಜಲಜೀವರಾಶಿಗಳ ನೋವಿನ ಕೂಗು!

ಕೋಳಿಕ್ಕೋಡ್:​ ಸಾಮಾನ್ಯವಾಗಿ ಸ್ಮಶಾನವನ್ನು ಮನುಷ್ಯರಿಗಾಗಿ ಮಾತ್ರ ನಿರ್ಮಾಣ ಮಾಡಲಾಗುತ್ತದೆ. ಸೋಜಿಗವೆಂದರೆ ಕೇರಳದಲ್ಲಿ ಮೀನುಗಳಿಗೂ ಸ್ಮಶಾನವನ್ನು ನಿರ್ಮಿಸಲಾಗಿದೆ. ಇದನ್ನು ಕೇವಲ ಮಣ್ಣು ಅಥವಾ ಸಿಮೆಂಟ್​ನಿಂದ...

ಸರ್ವರ ಮನ-ಮನೆಗಳಲ್ಲೂ ಕನ್ನಡ ಭಾಷೆ ಅನುರಣಿಸಲಿ

ಅಕ್ಕಿಆಲೂರ: ಭಾರತದ 22 ಭಾಷೆಗಳಲ್ಲಿ ಅಗ್ರಗಣ್ಯವಾಗಿರುವ ಕನ್ನಡ ಪ್ರತಿಯೊಬ್ಬರಲ್ಲೂ ಮಾತೃ ವಾತ್ಸಲ್ಯ ಇಮ್ಮಡಿಗೊಳಿಸುವ ಮೌಲ್ಯಯುತ ಗುಣಗಳನ್ನು ಹೊಂದಿದೆ. ಕನ್ನಡ ಭಾಷೆ ಬೆಳವಣಿಗೆ ಮನೆ-ಮನಗಳಿಂದ...

ಸಂದೀಪ್ ಸಾಲ್ಯಾನ್ ಬಂಟ್ವಾಳ

ಈ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಅನುಮತಿ ನೀಡಿ ದಿಟ್ಟತನ ಮೆರೆದಿದ್ದ ರಾಜ್ಯ ಸರ್ಕಾರ ದಾಖಲಾತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡದೆ ಅನ್ಯಾಯವೆಸಗಿದೆ.

ಆಂಗ್ಲ ಮಾಧ್ಯಮ ಕಲಿಕೆಗೆ ಆಯ್ಕೆಯಾದ ಶಾಲೆಗಳಿಗೆ 30 ಸೆಟ್ ಪಠ್ಯಪುಸ್ತಕಗಳನ್ನು ಮಾತ್ರ ವಿತರಿಸುವ ಮಿತಿ ವಿಧಿಸಿದ್ದು, ಹೆಚ್ಚುವರಿ ವಿದ್ಯಾರ್ಥಿಗಳು ಪಠ್ಯಪುಸ್ತಕವಿಲ್ಲದೆ ತರಗತಿಯಲ್ಲಿರಬೇಕಾಗಿದೆ. ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಗೊಂಡಿತು ಎನ್ನುವ ಸಂಭ್ರಮದಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿದ ಪಾಲಕರು ಕಂಗಲಾಗಿದ್ದಾರೆ.

ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿದ್ದ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಮಹತ್ವಕಾಂಕ್ಷಿ ಯೋಜನೆ ಜಾರಿಗೆ ತಂದಿತು. ಈ ಯೋಜನೆಯಂತೆ ಅನುಮತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಶಾಲೆಗಳಲ್ಲಿ ಒಂದನೇ ತರಗತಿಗೆ 100ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುವ ಮೂಲಕ ಹೊಸ ದಾಖಲೆ ಸೃಷ್ಟಿಯಾಯಿತು.
ದಾಖಲಾತಿ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ತಗಾದೆ ತೆಗೆದ ಶಿಕ್ಷಣ ಇಲಾಖೆ, ಒಂದನೇ ತರಗತಿಗೆ ಕೇವಲ 30 ಮಕ್ಕಳನ್ನು ಮಾತ್ರ ದಾಖಲಿಸಬೇಕು ಎನ್ನುವ ಸುತ್ತೊಲೆ ಹೊರಡಿಸಿತ್ತು. ಇದು ಶಿಕ್ಷಕರಲ್ಲಿ ಗೊಂದಲ ಮೂಡಿಸಿದರೆ, ಪಾಲಕರ ಆಕ್ರೋಶಕ್ಕೆ ಕಾರಣವಾಯಿತು. ಎಚ್ಚೆತ್ತ ಇಲಾಖೆ ಸೇರ್ಪಡೆಗೊಂಡ ಎಲ್ಲ ವಿದ್ಯಾರ್ಥಿಗಳಿಗೂ ಕಲಿಕೆಗೆ ಅವಕಾಶ ಮಾಡಿಕೊಡಿ ಎನ್ನುವ ಮೌಖಿಕ ಆದೇಶವನ್ನು ಶಿಕ್ಷಕರಿಗೆ ರವಾನಿಸಿತ್ತು. ಈಗ ತನ್ನ ಹಳೇ ಸುತ್ತೋಲೆಗೆ ಜೋತು ಬಿದ್ದಿರುವ ಇಲಾಖೆ, ಒಂದನೇ ತರಗತಿಗೆ 30 ಪಠ್ಯ ಪುಸ್ತಕ ಮಾತ್ರ ವಿತರಿಸಿ ಬಡಪಾಯಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ.

ಝೆರಾಕ್ಸ್ ಪ್ರತಿ ಹಂಚಿಕೆ!
ಪಠ್ಯಪುಸ್ತಕ ಕೊರತೆ ನೀಗಿಸಲು ಇಲಾಖೆ ಅಧಿಕಾರಿಗಳು, ಶಿಕ್ಷಕರು ಪರದಾಡುತ್ತಿದ್ದಾರೆ. 30ಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳಿಂದ ಇತರ ಶಾಲೆಗಳಿಗೆ ಕೆಲವೆಡೆ ಪೂರೈಸಲಾಗಿದೆ. ಇನ್ನು ಕೆಲವೆಡೆ ಝೆರಾಕ್ಸ್ ಪ್ರತಿ ತೆಗೆದು ಹಂಚಲಾಗಿದೆ. ಕೆಲವು ಶಾಲೆಗಳಲ್ಲಿ ಒಂದು ಬೆಂಚ್‌ಗೆ ಎರಡು ಪುಸ್ತಕ ವಿತರಿಸಿ ಹೊಂದಾಣಿಕೆ ಮಾಡಿ ಪಾಠ ಮಾಡಲಾಗುತ್ತಿದೆ. ಒಂದನೇ ತರಗತಿ ಪಠ್ಯ ಚಟುವಟಿಕೆ ಕೇಂದ್ರೀಕೃತವಾಗಿರುವುದರಿಂದ ಅಷ್ಟೇನೂ ಸಮಸ್ಯೆಯಾಗುವುದಿಲ್ಲ ಎನ್ನುವುದು ಇಲಾಖೆ ಹಿರಿಯ ಅಧಿಕಾರಿಗಳ ವಿಶ್ವಾಸ.

30ಕ್ಕೂ ಅಧಿಕ ಶಾಲೆಗಳಲ್ಲಿ ಸಮಸ್ಯೆ
ದಕ್ಷಿಣ ಕನ್ನಡ ಜಿಲ್ಲೆಯ 46 ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲಾಗಿದೆ. ಇದರಲ್ಲಿ ಬಂಟ್ವಾಳ ದಡ್ಡಲಕಾಡು ಮತ್ತು ವಿಟ್ಲದ ಶಾಲೆಗಳಲ್ಲಿ (ಒಟ್ಟು ಎರಡು) 100ಕ್ಕಿಂತ ಅಧಿಕ ವಿದ್ಯಾರ್ಥಿಗಳಿದ್ದಾರೆ. ಒಂಬತ್ತು ಶಾಲೆಗಳಲ್ಲಿ 50ಕ್ಕಿಂತ ಅಧಿಕ, 26 ಶಾಲೆಗಳಲ್ಲಿ 30ಕ್ಕಿಂತ ಅಧಿಕ ಮತ್ತು ವಿದ್ಯಾರ್ಥಿಗಳಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 8 ಕರ್ನಾಟಕ ಪಬ್ಲಿಕ್ ಸ್ಕೂಲ್ ಸೇರಿದಂತೆ ಒಟ್ಟು 24 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ನಿಗದಿಪಡಿಸಿದ 30 ಸಂಖ್ಯೆಗಿಂತ ಅಧಿಕ ಮಕ್ಕಳು ಪ್ರವೇಶಾತಿ ಪಡೆದ ಕಾರಣ 9ಕ್ಕೂ ಅಧಿಕ ಶಾಲೆಗಳಲ್ಲಿ ಪಠ್ಯಪುಸ್ತಕದ ಕೊರತೆ ಉಂಟಾಗಿದೆ.

ಪಠ್ಯ ಪುಸ್ತಕವಿಲ್ಲದೆಯೇ ಪಾಠ ಮಾಡುವ ವಿಧಾನದ ತರಬೇತಿಯನ್ನು ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಶಿಕ್ಷಕರಿಗೆ ನೀಡಲಾಗಿದೆ. 30ಕ್ಕಿಂತ ಹೆಚ್ಚು ಮಕ್ಕಳನ್ನು ಸೇರ್ಪಡೆಗೊಳಿಸಬಹುದು ಎನ್ನುವ ಅಧಿಕೃತ ಆದೇಶ ಇಲಾಖೆಯಿಂದ ಬಂದಿಲ್ಲ.

– ಜ್ಞಾನೇಶ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ

ದಡ್ಡಲಕಾಡು ಸರ್ಕಾರಿ ಶಾಲೆಯಲ್ಲಿ ಈ ಬಾರಿ ಒಂದನೇ ತರಗತಿಗೆ 108 ಮಕ್ಕಳು ಸೇರ್ಪಡೆಗೊಂಡಿದ್ದಾರೆ. 30 ಮಕ್ಕಳಿಗೆ ಮಾತ್ರ ಪುಸ್ತಕ ದೊರೆತಿದ್ದು, 78 ಮಕ್ಕಳು ಪಠ್ಯಪುಸ್ತಕದಿಂದ ವಂಚಿತರಾಗಿದ್ದಾರೆ. ರಾಜ್ಯದ ಬಹುತೇಕ ಶಾಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಶಿಕ್ಷಣ ಇಲಾಖೆ ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಎಲ್ಲ ವಿದ್ಯಾರ್ಥಿಗಳಿಗೂ ಪುಸ್ತಕ ಒದಗಿಸಬೇಕು, ತಪ್ಪಿದಲ್ಲಿ ಹೋರಾಟ ಅನಿವಾರ್ಯ.
– ಪ್ರಕಾಶ್ ಅಂಚನ್, ರಾಜ್ಯಾಧ್ಯಕ್ಷರು, ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ

ದಕ್ಷಿಣ ಕನ್ನಡ ಜಿಲ್ಲೆಯ 46 ಶಾಲೆಗಳಲ್ಲಿ ಒಂದನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ಕಲಿಕೆಗೆ ಇಲಾಖೆ ಅನುಮತಿ ನೀಡಿದೆ. ಒಂದು ಶಾಲೆಯಲ್ಲಿ ಒಂದನೇ ತರಗತಿಗೆ 30 ಮಕ್ಕಳಿಗೆ ಮಾತ್ರ ಪಠ್ಯ ಪುಸ್ತಕ ವಿತರಣೆಗೆ ಇಲಾಖೆ ಮಿತಿ ವಿಧಿಸಿದ್ದು, ಪ್ರಾಯೋಗಿಕ ಹಂತದಲ್ಲಿ ಸಮಸ್ಯೆ ಸ್ವಾಭಾವಿಕ. ಹೆಚ್ಚುವರಿ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ.
– ವೈ.ಶಿವರಾಮಯ್ಯ, ಉಪನಿರ್ದೇಶಕ, ಶಿಕ್ಷಣ ಇಲಾಖೆ, ದ.ಕ.

Stay connected

278,746FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...