More

    ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

    ಬಂದೂಕನ್ನು ಸ್ವಲ್ಪ ಎತ್ತಿ ಅದರ ನೆಚ್ಚು ಮತ್ತು ಗುರಿ ಒಂದೇ ನೇರಕ್ಕೆ ಬಂದೊಡನೆ ಗುಂಡಿಕ್ಕಿ.- Raise the gun a bit up, align the notch on the gun with the target and fire.

    ಸ್ವಾಮೀಜಿಯ ಬಗೆಗಿನ ಅವರ ಟೀಕೆ ಅವರ ತೀವ್ರ ಬೆಂಬಲಿಗರೂ ಅವರಿಂದ ದೂರವಾಗುವಂತೆ ಮಾಡಿತು.- His comments on the abbot have alienated even his fervent supporters.

    ಎಲ್ಲಾ ಮಕ್ಕಳು ಒಂದೇ ತರಹ ಕಾಣುವುದರಿಂದ ಯಾರು ಯಾರೆಂದು ಗುರುತು ಹಿಡಿಯುವುದು ಕಷ್ಟಕರ.- All the children look alike and it’s difficult to recognize who is who.

    ಅವಳಿಗೆ ಕುಟುಂಬದವನೆಂದು ಹೇಳಿಕೊಳ್ಳಲು ಇರುವುದು ನಾನು ಮಾತ್ರ ಆದುದರಿಂದ ಅವಳು ಈ ಕ್ರೂರ ಜಗತ್ತಿನಲ್ಲಿ ಎಲ್ಲೆಲ್ಲೋ ಗೊತ್ತುಗುರಿ ಇಲ್ಲದೆ ಅಲೆಯುವಂತಾಗಲು ನಾನು ಬಿಡಲಾರೆ.- I am all the family she has and so I can’t let her go adrift in this unkind world.

    ಹೇಗಿದ್ದೀ ಎಂದೊಡನೆ ಆಕೆ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ ಅವಳನ್ನು ಸಮಾಧಾನಿಸಲು ಬಹಳ ಸಮಯ ತಗುಲಿತು.- She burst into tears when I asked her how she was and it took long for me to allay her.

    ಎಲ್ಲ ಸೇರಿ ರೂ. 2300 ಆಗುತ್ತದೆ ಸರ್.- Altogether it will be Rs. 2300 sir.

    ಪ್ರತಿ ವರ್ಷ ಸ್ವಾತಂತ್ರ್ಯೊತ್ಸವದ ದಿನ ರಾಷ್ಟ್ರಗೀತೆ ಹಾಡುತ್ತಾ ನಮ್ಮ ಮಾತೃಭೂಮಿಗೆ ನಮ್ಮ ವಿಧೇಯತೆ ಮತ್ತು ಶರಣಾಗತಿ ವ್ಯಕ್ತಪಡಿಸುವಾಗ ನನ್ನ ಕಣ್ಣಾಲಿಗಳು ತುಂಬಿ ಬರುತ್ತದೆ. –Every year, on Independence day my eyes well up when the national anthem is sung pledging allegiance to the mother land.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts