1.ಶಿಕ್ಷಕ ಉತ್ತರಿಸಲಾಗದಂತೆ ಮುಖ್ಯೋಪಾಧ್ಯಾಯರು ಒಂದೇ ಸವನೆ / ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿದರು.
The HM bombarded the teacher with questions so that she couldn’t answer.
2.ಆ ಉದ್ಯಾನದಲ್ಲಿದ್ದ ಗಿಡಗಳೆಲ್ಲವೂ ಮೊಗ್ಗು ಬಿಟ್ಟಿದ್ದು ಹೂವಾಗಿ ಅರಳಲು ತಯಾರಾಗಿದ್ದವು.
Most of the flowers were coming into bloom in that garden.
3.ಎಲ್ಲ ಮೇಣದ ಬತ್ತಿಗಳನ್ನು ಹಚ್ಚಿ. / ನೀನು ಈ ಮೇಣದ ಬತ್ತಿಗಳನ್ನು ಗಾಳಿ ಊದಿ ಆರಿಸಬಲ್ಲೆಯಾ?
Please light all the candles. / Can you blow these candles out?
4.ನಡೆ, ಹೀಗೇ ಗಾಳಿಸೇವನೆ ಮಾಡಿಕೊಂಡು ಬರೋಣ.
Come on. Let’s go out for a blow.
5.ನಿನ್ನೆ ರಾತ್ರಿ ಪಾರ್ಟಿಯಲ್ಲಿ ಯಾವ ಗಳಿಗೆಯಲ್ಲಿ ಏನೇನಾಯಿತೆಂಬುದರ ವಿವರವನ್ನು ಅವಳು ನನಗೆ ಕೊಟ್ಟಿದ್ದಾಳೆ.
She gave me the blow by blow account of whatever happened in the party last night.
6.ಓಹ್! ಗಾಳಿಗೆ ಎಲ್ಲ ಮೇಣದಬತ್ತಿಗಳ ದೀಪ ಆರಿಹೋಗಿವೆ.
Oh! All the candles are blown out by the sudden breeze.
7.ನಿನ್ನ ಮಗನ ಬದಲು ನನ್ನ ಮಗ ಇಲ್ಲಿದ್ದಿದ್ದರೆ, ಖಂಡಿತ ಈ ಸೈಕಲ್ ಕೊಡಿಸುವಂತೆ ರಂಪ ಮಾಡುತ್ತಿದ್ದ.
If my son was in your son’s place, he would’ve bludgeoned me into getting this cycle.