1.ಅಲಾರ್ಮ್ ಸದ್ದಾದಾಗ ಅವಳು ನನ್ನ ಎಬ್ಬಿಸಿದಳು, ನಾನು ನಿದ್ರೆಯಿಂದೆದ್ದಾಗಿನ ಕೆಂಪು ಕಣ್ಣುಗಳಲ್ಲಿ ಅವಳನ್ನು ದೃಷ್ಟಿಸಿದೆ.
When the alarm bleeped, she woke me up and I looked at her with bleary eyes.
2.ಹಾಗಾದರೆ ಯಾವ ಕರ್ಮಕ್ಕೆ ಅವನು ಅದನ್ನು ಕೊಟ್ಟನಂತೆ?
Then what the blazes did he give it for?
3.ಗೋಡೆಯ ಮೇಲೆ ಹಾವನ್ನು ನೋಡಿದೊಡನೆ ನನ್ನ ಹೆಂಡತಿ ಭಯದಿಂದ ಕಂಪಿಸಿ ಹೆಜ್ಜೆ ಹಿಂದಿಕ್ಕಿದಳು.
My wife blenched when she saw a snake on the wall.
4.ಅವಳು ಗುಂಪಿನಲ್ಲಿ ಸೇರಿಹೋಗಿ / ಬೆರೆತು ಅವರಿಗೆ ಕಾಣದಂತೆ ತನ್ನನ್ನು ಅಡಗಿಕೊಂಡಳು.
She blended in the crowd and hid herself from him.
5.ಅವಳು ಜೋರಾಗಿ ಸೀನಿ ಮೂಗನ್ನು ಶುಚಿಪಡಿಸಿಕೊಂಡಳು.
She blew her nose and cleared it.
6.ನಾನಿನ್ನೂ ಬಸ್ ನಿಲ್ದಾಣದವರೆಗೂ ಹೋಗಿರಲಿಲ್ಲ, ಬೈಕಿನ ಟೈರ್ ಒಡೆದುಹೋಯ್ತು.
I had not even ridden as far as the bus stand, my tyre blew off.
7.ನನಗೆ ಬಸ್ ತಪ್ಪಿ ಹೋಗಿದ್ದು ದೇವರ ದಯೆಯಿಂದಲೇ ಎಂದೆನಿಸುತ್ತದೆ, ಏಕೆಂದರೆ ಆ ಬಸ್ ಅಪಘಾತಕ್ಕೆ ಈಡಾಯ್ತು!
Missing the bus was a blessing in disguise because it met with an accident shortly.