20.3 C
Bangalore
Sunday, December 15, 2019

ರಾಜ್ಯಭಾಷೆಗಳ ನಿಜವಾದ ಶತ್ರು ಇಂಗ್ಲಿಷ್

Latest News

ನಿರ್ದೇಶಕ ಪ್ರಶಾಂತ್​ ರಾಜ್​ ಮತ್ತಿಬ್ಬರು ಆಪ್ತರ ವಿರುದ್ಧ ವಂಚನೆ, ಜೀವ ಬೆದರಿಕೆ ಆರೋಪ: ಎಫ್​ಐಆರ್​ ದಾಖಲು

ಬೆಂಗಳೂರು: ಸ್ಯಾಂಡಲ್​ವುಡ್​ ಖ್ಯಾತ ನಿರ್ದೇಶಕ ಪ್ರಶಾಂತ್​ ರಾಜ್​ ಮತ್ತು ಇಬ್ಬರು ಆಪ್ತರ ವಿರುದ್ಧ ಬೆದರಿಕೆ ಹಾಗೂ ವಂಚನೆ ಆರೋಪ ಕೇಳಿಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವೃದ್ಧೆ...

ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಭಾನುವಾರ) ಆಸ್ಪತ್ರೆಯಿಂದ ಬಿಡುಗೆಯಾಗಿ ಮನೆಗೆ ತೆರಳಲಿದ್ದಾರೆ.ಸ್ಟಂಟ್​ನಲ್ಲಿ...

ಜೆಡಿಎಸ್ ಜನ್ಮ ಜಾಲಾಟ, ವರಿಷ್ಠರಿಗೆ ಪೀಕಲಾಟ

ಬೆಂಗಳೂರು: ಸಾಲು ಸಾಲು ಸೋಲಿನಿಂದ ದಳಪತಿಗಳು ಕಂಗೆಟ್ಟಿದ್ದಾರೆ. ಲೋಕಸಭಾ ಚುನಾವಣೆ ಸೋಲಿ ನಿಂದ ಬೇಗುದಿ ಹೆಚ್ಚುತ್ತಿದ್ದು, ಮೈತ್ರಿ ಸರ್ಕಾರ ಪತನ, ಉಪಚುನಾವಣೆಯ ಹೀನಾಯ...

ಮೊದಲ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಪರ್ತ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿನ ತನ್ನ...

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ ಹಾವು: ವಿಡಿಯೋ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ...

ಆತನ ಹೆಸರು ಬಿಷಪ್ ರಾಬರ್ಟ್ ಕ್ಯಾಲ್ಡವೆಲ್. ಐರ್ಲೆಂಡ್​ನಲ್ಲಿ 1814 ಮೇ 7ರಂದು ಸ್ಕಾಟಿಶ್ ದಂಪತಿಗೆ ಜನಿಸಿದವನು. ತನ್ನ 24ನೇ ವಯಸ್ಸಿನಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರಕನಾಗಿ ಭಾರತದ ಅಂದಿನ ಮದ್ರಾಸಿಗೆ ಬಂದಿಳಿದ. ತನ್ನ ಕೆಲಸಕ್ಕೆ ಅನುಕೂಲವಾಗಲೆಂದು ಎಲ್ಲ ಪಾದ್ರಿಗಳಂತೆ ಇವನೂ ತಮಿಳು ಭಾಷೆ ಕಲಿಯತೊಡಗಿ, ಭಾಷಾತಜ್ಞನಾಗಿ, ತಮಿಳು ಭಾಷೆಗೆ ಸ್ತುತ್ಯರ್ಹ ಕೊಡುಗೆ ನೀಡಿದ್ದಾನೆ. ಅದಕ್ಕಾಗಿ ಆತ ಅಭಿನಂದನಾರ್ಹ. ಆದರೆ ಈ ಕ್ಯಾಲ್ಡವೆಲ್ ನಂತರ ತನ್ನ ಭಾಷಾ ನೈಪುಣ್ಯವನ್ನು, ಸಂಶೋಧನಾ ಚಾತುರ್ಯವನ್ನು ಉಪಯೋಗಿಸಿಕೊಂಡದ್ದು ಕ್ರಿಶ್ಚಿಯನ್ ಧರ್ಮ ಪ್ರಚಾರದ ಕಾರ್ಯಕ್ಕೆ ಮತ್ತು ಬ್ರಿಟಿಷರ ಒಡೆದಾಳುವ ನೀತಿಗೆ.

ತನ್ನ ಭಾಷಾ ಸಂಶೋಧನೆ ಮುಂದುವರಿಸಿದ ಕ್ಯಾಲ್ಡವೆಲ್- ದಕ್ಷಿಣ ಭಾರತೀಯ ಭಾಷೆಗಳೆಲ್ಲ; ಸಂಸ್ಕೃತ ಮೂಲದ್ದು ಎಂಬ ಆ ತನಕದ ವಿದ್ವಾಂಸರ ವಾದ ತಿರಸ್ಕರಿಸಿ ಅವೆಲ್ಲ ಭಾಷೆಗಳು ಅಷ್ಟೇ ಅಲ್ಲ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಮಾತನಾಡುವ ಬ್ರಹುಯಿ ಎಂಬ ಭಾಷೆಯೂ ತಮಿಳಿನಿಂದ ಟಿಸಿಲೊಡೆದ, ಆ ಗುಂಪಿಗೆ ಸೇರಿದ ಭಾಷೆಗಳು ಎಂದು ಹೇಳಿದ. ನಂತರ ಆ ಭಾಷೆಗಳಿಗೆ ‘ದ್ರಾವಿಡ ಭಾಷೆ’ಗಳು ಎಂದು ನಾಮಕರಣ ಮಾಡಿದ. ದಕ್ಷಿಣ ಭಾರತದ ಭಾಷೆಗಳು ಒಂದು ವಿಶಿಷ್ಟ ಗುಂಪಿಗೆ ಸೇರುತ್ತವೆಂಬುದನ್ನು ತದನಂತರದ ವಿದ್ವಾಂಸರು ಒಪ್ಪಿದರೂ ಇಂಥ ಫಲಿತಾಂಶಗಳ ಹಿಂದಿನ ಆತನ ಮೂಲ ಉದ್ದೇಶ ದಕ್ಷಿಣ ಭಾರತೀಯರನ್ನು ಕ್ರಿಶ್ಚಿಯನ್ ಧರ್ಮದತ್ತ ಸೆಳೆಯುವುದೇ ಆಗಿತ್ತು.

ಆದರೆ ಮುಂದೊಂದು ದಿನ ರಾಜಕೀಯ ನೆಲೆಗಾಗಿ ವಿಷಯವೊಂದನ್ನು ಕಂಡುಕೊಳ್ಳಲು ತಡಕಾಡುತ್ತಿದ್ದ ತಮಿಳುನಾಡಿನ ನಾಯಕನೊಬ್ಬನ ದುರುದ್ದೇಶಪೂರಿತ ಪ್ರಲಾಪ ಪರಮಸತ್ಯದ ರೂಪ ಪಡೆಯಿತು. ಆ ನಾಯಕನೇ ಮುಂದೆ ಪೆರಿಯಾರ್ ಎಂದು ಖ್ಯಾತರಾದ ಈರೋಡ್ ವೆಂಕಟಪ್ಪ ರಾಮಸ್ವಾಮಿ, ಮೂಲತಃ ಕನ್ನಡಿಗರಾದ ಶ್ರೀಮಂತ ಬಲಿಜ ಉದ್ಯೋಗಪತಿ ವೆಂಕಟಪ್ಪ ನಾಯ್ಕರ್ ಎಂಬುವರ ಮಗನಾಗಿ 1879ರಲ್ಲಿ ರಾಮಸ್ವಾಮಿ ಜನಿಸಿದರು. 1919 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಪೆರಿಯಾರ್ ರಾಮಸ್ವಾಮಿ 6 ವರ್ಷಗಳೊಳಗೆ ಅಲ್ಲಿನ ಉತ್ತರ ಭಾರತದ ನಾಯಕರೊಂದಿಗೆ, ವಿಶೇಷವಾಗಿ ಅಲ್ಲಿನ ಬ್ರಾಹ್ಮಣ ನಾಯಕರೊಂದಿಗೆ, ಮುನಿಸಿಕೊಂಡು ಅಲ್ಲಿಂದ ಹೊರ ಬಂದರು. ಆಗ ಅವರಿಗೆ ಜನರ ಮಧ್ಯೆ ಹೋರಾಡಲು ಒಂದು ಪ್ರಚೋದಕ ವಿಷಯ ಬೇಕಾದಾಗ ಅವರ ಕೈಗೆ ಸಿಕ್ಕ ಅಸ್ತ್ರವೇ ಈ ಬಿಷಪ್ ಕ್ಯಾಲ್ಡವೆಲ್​ನ ವಿಚಾರಧಾರೆಯ ಬರಹಗಳು.

ತಮ್ಮ ಉದ್ದೇಶ ಸಾಧನೆಗೆ ಪೆರಿಯಾರ್ ದೇಶದ ಸಂಸ್ಕೃತಿಯನ್ನು, ಅದರ ಆರಾಧ್ಯ ದೈವಗಳಾದ ರಾಮ ಕೃಷ್ಣರನ್ನೆಲ್ಲ ಮನಬಂದಂತೆ ತೆಗಳಿ ಭಾಷಣ ಮಾಡಿದರು, ಲೇಖನಗಳನ್ನು ಬರೆದರು. (ಹೆಸರಿನಲ್ಲಿಯೇ ರಾಮನನ್ನು ಇಟ್ಟುಕೊಂಡವರ ಸೋಜಿಗ ನೋಡಿ!) ನಾಸ್ತಿಕವಾದವನ್ನು ಸಾರಿದರು. ಈ ರಾಜಕೀಯ ಮೇಲಾಟದಲ್ಲಿ ತನ್ನ ರಾಜ್ಯದ ತಮಿಳರನ್ನು ಉತ್ತರ ಭಾರತೀಯರಿಂದ ಪ್ರತ್ಯೇಕಿಸಲು, ಅವರನ್ನು ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರ ಪ್ರಭಾವದಿಂದ ಮುಕ್ತಗೊಳಿಸಲು ಪೆರಿಯಾರ್​ಗೆ ಭಾಷೆ ಒಂದು ಸಾಧನವಾಯಿತು. ಆಗ ದೇಶವನ್ನು ಒಗ್ಗೂಡಿಸಲು ದೇಶದೆಲ್ಲೆಡೆ ಮುಕ್ತವಾಗಿ ಸಂವಹನಕ್ಕಾಗಿ ಒಂದು ಸಾಮಾನ್ಯ ಸಂಪರ್ಕ ಭಾಷೆಯ ಅಗತ್ಯ ಎಲ್ಲರಿಗೂ ಮನವರಿಕೆಯಾಯಿತು. ಮತ್ತು ಆ ಸ್ಥಾನಕ್ಕೆ ಇಡೀ ದೇಶದಲ್ಲಿ ಸುಮಾರು 40 ಪ್ರತಿಶತ ಜನ ಉಪಯೋಗಿಸುವ ಹಿಂದಿಯನ್ನು ಬಹುತೇಕ ಎಲ್ಲರೂ ಒಪ್ಪಿಕೊಂಡಿದ್ದರೂ, ಪೆರಿಯಾರ್ ಅದನ್ನು ವಿರೋಧಿಸಿದರು. ಅದನ್ನು ತಮಿಳರ ಸ್ವಾಭಿಮಾನಕ್ಕೆ ಧಕ್ಕೆ ಎಂದು ಹುಯಿಲೆಬ್ಬಿಸಿದರು. ಸೋಜಿಗವೆಂದರೆ, ದೇಶವನ್ನು ಗುಲಾಮಗಿರಿಗೆ ಒಡ್ಡಿದ ಬ್ರಿಟಿಷರ ಭಾಷೆ ಇಂಗ್ಲಿಷನ್ನು ಸ್ವೀಕರಿಸುವುದು ಅವರಿಗೆ ಸ್ವಾಭಿಮಾನಕ್ಕೆ ಧಕ್ಕೆ ಎಂದು ಅನಿಸಲಿಲ್ಲ. ಇಂದಿಗೂ ಪೆರಿಯಾರ್ ಹುಟ್ಟುಹಾಕಿದ ರಾಜಕೀಯ ಪರಂಪರೆಯಲ್ಲಿಯೇ ತಮಿಳುನಾಡಿನ ರಾಜಕಾರಣ ನಡೆಯುತ್ತಿದೆ. ಅವರ ಅಂದಿನ ಉದ್ದೇಶವೇ ಇಂದೂ ಮುಂದುವರಿದು, ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳು ಶುದ್ಧ ಭಾಷಾಂಧರಾಗಿ ಹಿಂದಿ ಭಾಷೆಯನ್ನು ದ್ವೇಷಿಸುತ್ತಿವೆ. ಹಿಂದಿಯನ್ನು ಒಪ್ಪಿಕೊಳ್ಳುವುದು ತಮಿಳರ ‘ಸ್ವಾಭಿಮಾನ’ಕ್ಕೆ ವಿರುದ್ಧ ಎಂದೆಲ್ಲ ವಾದಿಸುವ, ಪ್ರಚಾರಮಾಡುವ ಅವರ ನಿಜವಾದ ಉದ್ದೇಶ ತಮ್ಮ ರಾಜ್ಯದ ಜನರನ್ನು ದೇಶದ ರಾಷ್ಟ್ರೀಯ ಪಕ್ಷಗಳ ಪ್ರಭಾವದಿಂದ ದೂರವಿಡುವುದೇ ಆಗಿದೆ.

ತಮಿಳುನಾಡಿನ ರಾಜಕೀಯ ಪಕ್ಷಗಳ ಈ ಯಶಸ್ಸು ಸಹಜವಾಗಿ ದಕ್ಷಿಣ ಭಾರತದ ಇತರೆ ಎಲ್ಲ ರಾಜಕಾರಣಿಗಳ ಗಮನ ಸೆಳೆದದ್ದು ಸುಳ್ಳಲ್ಲ. ಹೀಗಾಗಿಯೇ ಈ ದಿಶೆಯಲ್ಲಿ ಅನೇಕರು ಪ್ರಯತ್ನಿಸಿದ್ದರೂ ಅಂಥ ಯಶಸ್ಸು ಯಾರಿಗೂ ಸಿಕ್ಕಿಲ್ಲ. ಆದರೂ ಪ್ರಯತ್ನಗಳು ನಿಂತಿಲ್ಲ. ಆದರೆ ಕರ್ನಾಟಕ ತಮಿಳುನಾಡಲ್ಲ. ಬೆಂಗಳೂರು ಚೆನ್ನೈ ಆಲ್ಲ. ತಮಿಳು, ತೆಲುಗು, ಮಲಯಾಳಿಗಳಂತೆಯೇ, ದೇಶದ ಎಲ್ಲ ಭಾಷೆ, ಭಾಷಿಗರನ್ನೂ ತೆರೆದ ಮನಸ್ಸಿನಿಂದ ಸ್ವಾಗತಿಸಿದ ನಾಡು ನಮ್ಮದು. ಆ ಯಾವ ಭಾಷೆಗಳಲ್ಲೂ ಇಲ್ಲದ ದೋಷವನ್ನು ಹಿಂದಿಯಲ್ಲಿ ನಾವು ಕಂಡಿಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇರಬೇಕು ಎಂಬುದು ನಿರ್ವಿವಾದವಾದರೂ ಇತರೆಲ್ಲ ಭಾಷೆಗಳು ಹಿಂದಿಯೂ ಸೇರಿ ಇಲ್ಲಿ ಸೌಹಾರ್ದದಿಂದ ಉಳಿದು ಬೆಳೆಯಬಲ್ಲವು. ಯಾವದೇ ರಾಜಕೀಯ ಪ್ರೇರಿತ ಮನಸ್ಸುಗಳ, ಸಂಘಟನೆಗಳ ಸೋಂಕು ಇದಕ್ಕೆ ತಾಕದಿರಲಿ.

ಈ ಹಿಂದಿ ವಿರೋಧಿ ಹೋರಾಟ ಪಡೆದುಕೊಂಡ ಆಯಾಮಗಳು ಕುತೂಹಲಕಾರಿ. ತಮಿಳುನಾಡಿನಲ್ಲಿ ಮೊದಲು ಹಿಂದಿ ಹೇರಿಕೆ ವಿರುದ್ಧ ಹೋರಾಟವೆಂದು ಶುರುವಾದ ಚಳವಳಿ, ಆರಂಭದಲ್ಲಿ ಕೆಲ ತರ್ಕಸಮ್ಮತ ಕಾರಣಗಳನ್ನು ಹೊಂದಿತ್ತು. ಆದರೆ ತದನಂತರ ಅದು ಪಡೆದುಕೊಂಡಿದ್ದು ಮಾತ್ರ ಬರಿಯ ಸ್ವಭಾಷಾ ದುರಭಿಮಾನ ಮತ್ತು ಹಿಂದಿ ದ್ವೇಷದ ರೂಪವನ್ನು. ಹೇರಿಕೆಯ ಮಾತು ಬಿಡಿ, ತಮ್ಮ ಅನುಕೂಲಕ್ಕಾಗಿಯೋ, ಅನುಭವಕ್ಕಾಗಿಯೋ, ಜ್ಞಾನಕ್ಕಾಗಿಯೋ, ಸ್ವ ಇಚ್ಛೆಯಿಂದಲೇ ಕಲಿಯಲಿಚ್ಛಿಸಿದವರಿಗೂ ಹಿಂದಿಯನ್ನು ಕಲಿಯಲಾಗದಂಥ ವಾತಾವರಣ ನಿರ್ವಿುಸಲಾಯಿತು. ಆದರೆ ಜನ ಹೆಚ್ಚು ಹೆಚ್ಚು ಸಂಚರಿಸಿದಂತೆ, ಬೇರೆ ಬೇರೆ ನಾಡಿನ ಭಾಷೆ, ಸಂಸ್ಕೃತಿಗಳಿಗೆ ತೆರೆದುಕೊಂಡಂತೆ, ಇವರ ವಾದದ ಪೊಳ್ಳುತನ ಅರಿವಾಗುತ್ತ ಬಂತು.

ಇಷ್ಟಕ್ಕೂ ನಾವೇಕೆ ಹಿಂದಿಯನ್ನು ವಿರೋಧಿಸಬೇಕು? ಅದು ಈ ನೆಲದ ಭಾಷೆ. ಇಂಗ್ಲಿಷ್​ನಂತೆ ಪರಕೀಯ ಭಾಷೆಯಲ್ಲ. ವ್ಯಾಕರಣ, ವಾಕ್ಯ ರಚನೆ, ಪಡೆನುಡಿಗಳು, ಗಾದೆಗಳು, ಮೌಲ್ಯಗಳು, ಎಲ್ಲ ಭಾರತೀಯ ಭಾಷೆಗಳಲ್ಲಿ ಒಂದೇ. ನಮ್ಮಗಳ ಭಾಷೆಯಲ್ಲಿಯ ಇವುಗಳನ್ನೆಲ್ಲ ನಾವು ಒಬ್ಬರಿಂದೊಬ್ಬರು ಎರವಲು ಪಡೆಯಬಹುದು. ಇಂಗ್ಲಿಷ್ ನಲ್ಲಿ ಇವೆಲ್ಲ ಸಂಪೂರ್ಣ ಭಿನ್ನ. ಅಂದಮೇಲೆ ನಮ್ಮ ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಬದಲು ಹಿಂದಿಯನ್ನು ಸ್ವೀಕರಿಸುವದು ಒಳ್ಳೆಯದಲ್ಲವೇ? ನಮ್ಮಲ್ಲನೇಕರ ಮಕ್ಕಳು ಇಂದು ಫ್ರೆಂಚ್, ಸ್ಪಾ್ಯನಿಷ್, ಜರ್ಮನ್ ಅಂತೆಲ್ಲ ಭಾಷೆಗಳನ್ನು ಕಲಿಯುತ್ತಿರುವಾಗ, ಅದರ ಬಗ್ಗೆ ನಾವೆಲ್ಲ ಹೆಮ್ಮೆ ಪಡುತ್ತಿರುವಾಗ, ನಾವು ನಮ್ಮದೇ, ನಮ್ಮ ನೆಲದ್ದೇ ಆದ ಭಾಷೆಯೊಂದರ ಬಗ್ಗೆ ಇಂಥ ದ್ವೇಷ ತಳೆಯುವುದು ಏಕೆ? ಯಾವುದೇ ಭಾಷೆಯನ್ನು ದ್ವೇಷಿಸಿ ಕನ್ನಡ ಬೆಳೆಯಬೇಕಾಗಿಲ್ಲ. ಹಾಗೆ ಬೆಳೆಯುವುದೂ ಇಲ್ಲ. ಸಂಪರ್ಕ ಭಾಷೆಯಾಗಿ ಹಿಂದಿ ಭಾಷೆಯನ್ನು ಒಪ್ಪುವದು ಅದು ದೇಶದ ಬಹುಸಂಖ್ಯಾತರ ಭಾಷೆ ಎಂಬುದಕ್ಕಾಗಿ. ಕೆಲವರು ಇದನ್ನೂ ಒಂದು ಅಪರಾಧವೆಂಬಂತೆ ಬಿಂಬಿಸುತ್ತಿದ್ದಾರೆ.

3ರಿಂದ 6 ವರ್ಷದ ತನಕ ಮಕ್ಕಳ ಬುದ್ಧಿಶಕ್ತಿ ಗ್ರಹಿಕೆಯಲ್ಲಿ ಅತ್ಯಂತ ಶಕ್ತವಾಗಿರುತ್ತದೆ ಎಂದು ಶಿಕ್ಷಣ ತಜ್ಞರು ಮತ್ತು ವಿಜ್ಞಾನಿಗಳು ಹೇಳುತ್ತಾರೆ. ಅಂಥ ಸಮಯದಲ್ಲಿ ಅವರಲ್ಲಿ ಅನೇಕ ಭಾಷೆಗಳನ್ನು ಕಲಿಯುವ ಸಾಮರ್ಥ್ಯವಿರುತ್ತದೆ. ಅಕ್ಷರ, ವಾಕ್ಯ, ವ್ಯಾಕರಣಗಳ ಹಂಗಿಲ್ಲದೆ ಭಾಷೆಯೊಂದನ್ನು ಕಲಿಯುವ ವಯಸ್ಸದು. ಆ ಸಮಯದಲ್ಲೇ ಅವರು ಇಂಗ್ಲಿಷನ್ನೂ ಕಲಿಯಲಿ, ಹಿಂದಿಯನ್ನೂ ಕಲಿಯಲಿ. ಕನ್ನಡವನ್ನಂತೂ ಕಡ್ಡಾಯವಾಗಿ ಕಲಿಯಲಿ. ಹಿಂದಿಯನ್ನು ಕಲಿಯುವುದರಿಂದ ದಕ್ಷಿಣ ಭಾರತದವರ ಮೇಲೆ ಉತ್ತರ ಭಾರತದವರ ಸವಾರಿ ಶುರುವಾಗುತ್ತದೆ ಎಂಬ ಅನಗತ್ಯ ಶಂಕೆಯನ್ನು ಕೆಲವರು ವ್ಯಕ್ತಪಡಿಸುತ್ತಾರೆ. ನಾವು ನೆನಪಿಡಬೇಕು, ಹಿಂದಿ ಭಾಷೆ ವ್ಯಾಪಕವಾಗಿ ಬಳಕೆಯಲ್ಲಿದ್ದ ನಮ್ಮ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಮತ್ತು ಸ್ವಾತಂತ್ರ್ಯದ ನಂತರದ ಸರ್ಕಾರಗಳಲ್ಲಿ, ದಕ್ಷಿಣ ಭಾರತದವರು ಸೂಕ್ತವಾದ ಪ್ರಾತಿನಿಧ್ಯ ಪಡೆದಿದ್ದಾರೆ.

ರಾಜ್ಯದ ಭಾಷೆಗಳ ನಿಜವಾದ ಶತ್ರು ಇಂಗ್ಲಿಷ್ ವಿನಃ ಹಿಂದಿಯಲ್ಲ ಎಂಬುದನ್ನೂ ಮನಗಾಣಬೇಕಾಗಿದೆ. ಹಿಂದಿ ಭಾಷೆ ಈ ನೆಲದ ಮೌಲ್ಯ, ಪರಂಪರೆ ಸಂಸ್ಕೃತಿಯನ್ನು ಬಿಂಬಿಸುತ್ತದೆಯೇ ವಿನಃ ಇಂಗ್ಲಿಷ್ ಅಲ್ಲ. ರಾಷ್ಟ್ರೀಯ ಭಾಷೆಯ ವ್ಯಾಖ್ಯಾನದ ಗೊಂದಲದಿಂದ ಹೊರಬಂದು ಹಿಂದಿಯನ್ನು ಒಂದು ಸಂಪರ್ಕ ಭಾಷೆಯಾಗಿ ಸ್ವೀಕರಿಸಬೇಕಾಗಿದೆ, ಇಂಗ್ಲಿಷ್ ಎಷ್ಟೇ ವ್ಯಾಪಿಸಿದ್ದರೂ ಹಳ್ಳಿಗಳಲ್ಲಿ, ಕಾಲೇಜು ಶಿಕ್ಷಣ ಪಡೆಯದವರ ಮಧ್ಯೆ ಅದರ ಸ್ವೀಕಾರ ಸಾಧ್ಯವಿಲ್ಲ. ಸಾಧುವೂ ಅಲ್ಲ. ಈ ಎಲ್ಲದರ ಮಧ್ಯೆ ಎಲ್ಲ ರಾಜ್ಯಗಳ ಭಾಷೆಗಳ ಬೆಳವಣಿಗೆಯ ಬಗೆಗೂ ಕಾಳಜಿಯಿರಲಿ. ಕನ್ನಡ, ಮರಾಠಿ, ಬಿಹಾರಿ, ರಾಜಸ್ಥಾನಿ, ಭೋಜಪುರಿ, ಗುಜರಾತಿ, ರಾಜ್ಯಗಳ ಭಾಷೆ ಕಡ್ಡಾಯವಾಗಿ ಕಲಿಕೆಯ ಮಾಧ್ಯಮವಾಗಲಿ. ಹಿಂದಿ ಸದಾ ತೃತೀಯ ಭಾಷೆಯೇ ಆಗಿರಲಿ. ಯಾವುದೇ ಕೆಲಸಕ್ಕೆ ಹಿಂದಿಯ ಪ್ರಾವೀಣ್ಯತೆ ಮಾನದಂಡವಾಗದಿರಲಿ. ಆದರೆ ಇಷ್ಟಪಟ್ಟು ಕಲಿಯಲಿಚ್ಛಿಸುವ ಯಾವುದೇ ವ್ಯಕ್ತಿಗೆ ಅದಕ್ಕಾಗಿ ವಿಪುಲ ಅವಕಾಶಗಳಿರಲಿ. ಎಲ್ಲೆಡೆ ಕನ್ನಡ, ಇಂಗ್ಲಿಷ್ ಜತೆ ಹಿಂದಿಗೂ ಸ್ಥಾನವೊಂದಿರಲಿ. ಅದು ಭಾರತದ ಏಕತೆಯ ಕುರುಹಾಗಿರಲಿ.

(ಲೇಖಕರು ಪ್ರಾಂಶುಪಾಲರು, ಹವ್ಯಾಸಿ ಬರಹಗಾರರು)

Stay connected

278,754FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...