Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಲಾರ್ಡ್ಸ್​ನಲ್ಲಿ ಮಳೆ ಅಡ್ಡಿ

Friday, 10.08.2018, 3:02 AM       No Comments

ಲಂಡನ್: ಬರೋಬ್ಬರಿ 17 ವರ್ಷಗಳ ಬಳಿಕ ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಭಾರತ-ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟಕ್ಕೆ ಮಳೆ ಅನುವು ಮಾಡಿಕೊಡಲಿಲ್ಲ. ಟಾಸ್ ನಡೆಸಲೂ ಕೂಡ ಅವಕಾಶ ಸಿಗದ ಕಾರಣ, ಗುರುವಾರದ ಆಟ ಕ್ರಿಕೆಟ್ ದಾಖಲೆಗಳಲ್ಲಿ ಉಳಿದುಕೊಳ್ಳಲಿಲ್ಲ. ಇದರಿಂದಾಗಿ ಲಾರ್ಡ್ಸ್ ಟೆಸ್ಟ್ ಚತುರ್ದಿನ ಮುಖಾಮುಖಿಯಾಗಿ ಬದಲಾಗಿದೆ. 2001ರ ಮೇ 17ರಂದು ಪಾಕಿಸ್ತಾನ ವಿರುದ್ಧ ನಡೆದ ಲಾರ್ಡ್ಸ್

ಟೆಸ್ಟ್​ನ ಮೊದಲ ದಿನದಾಟ ಮಳೆಯಿಂದಾಗಿ ರದ್ದುಗೊಂಡಿತ್ತು. ಆದರೆ, ಬಲಾಢ್ಯ ಇಂಗ್ಲೆಂಡ್ ನಂತರ ಎರಡೇ ದಿನದ ಆಟದಲ್ಲಿ ಇನಿಂಗ್ಸ್ ಜಯ ಒಲಿಸಿಕೊಂಡಿತ್ತು. ಬೆಳಗ್ಗೆಯಿಂದಲೂ ಸುರಿಯುತ್ತಿದ್ದ ಮಳೆ ಆಟಗಾರರಿಗೆ ಅಭ್ಯಾಸ ನಡೆಸಲೂ ಅವಕಾಶ ನೀಡಲಿಲ್ಲ. ಜಿಟಿಜಿಟಿ ಮಳೆ ಕಾರಣ ಇಡೀ ದಿನ ಲಾರ್ಡ್ಸ್ ಪಿಚ್ ಕವರ್ಸ್​ನ ಅಡಿಯಲ್ಲಿತ್ತು. ಶುಕ್ರವಾರ ಮಳೆಯ ಮುನ್ಸೂಚನೆ ಕಡಿಮೆ ಇರುವ ಕಾರಣ ಪೂರ್ಣ ದಿನದ ಆಟ ನಡೆಯುವ ನಿರೀಕ್ಷೆ ಇದೆ. ಏಜೆನ್ಸೀಸ್

ಎಂಸಿಸಿ ಲೈಬ್ರೆರಿ ಫುಲ್

ಮೊದಲ ದಿನ ಆಟ ನಡೆಯದೆ ಇದ್ದರೂ ಮೆರಿಲ್​ಬೋನ್ ಕ್ರಿಕೆಟ್ ಕ್ಲಬ್ ದಾಖಲೆ ಬರೆದಿದೆ. ಆಟ ನಡೆಯದ ಕಾರಣ ಕ್ರೀಡಾ ಪತ್ರಕರ್ತರು ಹಾಗೂ ಉತ್ಸಾಹಿಗಳು ಕ್ರಿಕೆಟ್ ಕುರಿತಾಗಿಯೇ ಮೀಸಲಾಗಿರುವ ಎಂಸಿಸಿ ಗ್ರಂಥಾಲಯಕ್ಕೆ ಭೇಟಿ ನೀಡಿದ್ದರು. 2015ರಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ಟೆಸ್ಟ್ ವೇಳೆ ಮಧ್ಯಾಹ್ನ 3 ಗಂಟೆಯ ವೇಳೆಗೆ 113 ಮಂದಿ ಲೈಬ್ರೆರಿಯಲ್ಲಿ ಇದ್ದಿದ್ದು ಈವರೆಗಿನ ದಾಖಲೆ ಎನಿಸಿತ್ತು. ಆದರೆ, ಗುರುವಾರ ಇದೇ ಅವಧಿಯಲ್ಲಿ 121 ಮಂದಿ ಗ್ರಂಥಾಲಯದಲ್ಲಿದ್ದರು ಎಂದು ಎಂಸಿಸಿ ತಿಳಿಸಿದೆ. ಆಟ ನಡೆಯುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಕೊನೆಗೂ ನಿರಾಸೆಯಿಂದ ಮೈದಾನದಿಂದ ಹೊರನಡೆದರು.

Leave a Reply

Your email address will not be published. Required fields are marked *

Back To Top