ಆಂಗ್ಲರ ನೆಲದಲ್ಲಿ ಇತಿಹಾಸ ಬರೆದ ಇಂಡಿಯಾ: ಕೊಹ್ಲಿ ಪಡೆಗೆ ದಿಗ್ಗಜರ ಶುಭಾಶಯ

ನಾಟಿಂಗ್ಹ್ಯಾಮ್: ಆತಿಥೇಯ ಇಂಗ್ಲೆಂಡ್​ ನೆಲದಲ್ಲಿ ಸತತ ಎರಡು ಟೆಸ್ಟ್​ ಪಂದ್ಯಗಳಲ್ಲಿ ಮಕಾಡೆ ಮಲಗಿದ್ದ ಟೀಂ ಇಂಡಿಯಾ ಪುಟಿದೆದ್ದು ಮೂರನೇ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ. ಬಹುದಿನಗಳ ನಂತರ ಆಂಗ್ಲರ ನೆಲದಲ್ಲಿ ಪಂದ್ಯವನ್ನು ಗೆದ್ದಿದ್ದಕ್ಕೆ ಕ್ರಿಕೆಟ್​ ದಿಗ್ಗಜರು ಕೊಹ್ಲಿ ಪಡೆಯನ್ನು ಕೊಂಡಾಡಿದ್ದಾರೆ.

ಪಂದ್ಯ ಮುಗಿಯುತ್ತಿದ್ದಂತೆ ಟ್ವಿಟರ್​ನಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕ್ರಿಕೆಟ್​ ದಿಗ್ಗಜರಾದ ಸಚಿನ್​ ತೆಂಡೂಲ್ಕರ್​, ವಿರೇಂದ್ರ ಸೆಹ್ವಾಗ್​, ವಿವಿಎಸ್​ ಲಕ್ಷ್ಮಣ್​, ಆರ್​.ಪಿ. ಸಿಂಗ್​ ಹಾಗೂ ತಂಡದ ತರಬೇತುದಾರ ರವಿಶಾಸ್ತ್ರಿ ಅವರು ವಿಜಯೋತ್ಸವವನ್ನು ತಮ್ಮದೇ ರೀತಿಯಲ್ಲಿ ಬಣ್ಣಿಸಿ, ಮುಂದಿನ ಪಂದ್ಯಗಳಲ್ಲಿ ಗೆಲುವು ನಿಮ್ಮದಾಗಲಿ ಎಂದು ಶುಭ ಹಾರೈಸಿದ್ದಾರೆ.

ದಿಗ್ಗಜರು ಮಾಡಿದ ಟ್ವೀಟ್​ ಶುಭಾಶಯ ಹೀಗಿದೆ.