ಫಿಫಾ ವಿಶ್ವಕಪ್​: ಇತಿಹಾಸದಲ್ಲೆ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸಿದ ಕ್ರೊವೇಷಿಯಾ

<<ಇಂಗ್ಲೆಂಡ್ ವಿರುದ್ಧ 2-1 ಅಂತರದ ಗೆಲುವು, ಫ್ರಾನ್ಸ್​ ವಿರುದ್ಧ ಫೈನಲ್​ನಲ್ಲಿ ಹಣಾಹಣಿ>>

ಮಾಸ್ಕೋ: ಲುಝ್ನಿಕಿ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್​ನ ಎರಡನೇ ಸೆಮಿಫೈನಲ್​ ಹಣಾಹಣಿಯಲ್ಲಿ ಕ್ರೊವೇಷಿಯಾ ತಂಡ ಇಂಗ್ಲೆಂಡ್ ವಿರುದ್ಧ 2-1 ಅಂತರದ ಗೋಲ್​ಗಳಿಂದ ಗೆಲುವು ಸಾಧಿಸುವ ಮೂಲಕ ವಿಶ್ವಕಪ್​ ಇತಿಹಾದಲ್ಲೇ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸಿದೆ.

ಮೊದಲಾರ್ಧದಲ್ಲಿ ಉತ್ತಮ ಆಟವಾಡಿದ ಇಂಗ್ಲೆಂಡ್​ ಕ್ರೊವೇಷಿಯಾ ವಿರುದ್ಧ ಒಂದು ಗೋಲು ದಾಖಲಿಸಿತು. ಇಂಗ್ಲೆಂಡ್​ ಪರ ಕೀರನ್ ಟ್ರಿಪ್ಪಿಯರ್ ಉತ್ತಮ ಕಿಕ್​ ಮಾಡುವ ಮೂಲಕ ತಂಡಕ್ಕೆ ಮೊದಲ ಗೋಲನ್ನು ತಂದುಕೊಟ್ಟರು.

ದ್ವಿತಿಯಾರ್ಧದಲ್ಲಿ ಇಂಗ್ಲೆಂಡ್​ಗೆ ಕ್ರೊವೇಷಿಯಾ ಪ್ರಬಲ ಪೈಪೊಟಿ ನೀಡಿತು. ತಂಡದ ಇವಾನ್​ ಪೆರಿಸಿಕ್​ ಮೊದಲ ಗೋಲ್​ ಬಾರಿಸುವ ಮೂಲಕ ತಂಡದ ಮೊತ್ತವನ್ನು ಸಮನಾಗಿಸಿದರು. ನಂತರ ಜುವೆಂಟಸ್ ಮತ್ತೊಮ್ಮೆ ಚೆಂಡನ್ನು ಗೋಲ್​ನತ್ತ ಬಾರಿಸುತ್ತಿದ್ದಂತೆ ಕ್ರೊವೇಷಿಯಾ ಪಾಳಯದಲ್ಲಿ ಹರ್ಷ ಮುಗಿಲು ಮುಟ್ಟಿತ್ತು.

1966 ರಲ್ಲಿ ಟ್ರೋಫಿಯನ್ನು ಎತ್ತಿ ಹಿಡಿದಿದ್ದ ಇಂಗ್ಲೆಂಡ್​ ಮತ್ತೊಂದು ಗೆಲುವಿನ ಕನಸಿಗೆ ಕ್ರೊವೇಷಿಯಾ ಅಡ್ಡಗಾಲು ಹಾಕಿದೆ. ಇತಿಹಾದಲ್ಲೆ ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿರುವ ಕ್ರೊವೇಷಿಯಾ ಪರ ಕ್ರೀಡಾಭಿಮಾನಿಗಳು ಶಹಬ್ಬಾಸ್​ಗಿರಿ ನೀಡಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್​ ಹಣಾಹಣಿಯಲ್ಲಿ ಕ್ರೊವೇಷಿಯಾ ತಂಡ ಬಲಿಷ್ಠ ಫ್ರಾನ್ಸ್​ ತಂಡವನ್ನು ಎದುರಿಸಲಿದೆ. (ಏಜೆನ್ಸೀಸ್​)