ಮೈಸೂರು:ನಗರದ ಕೆಆರ್‌ಎಸ್ ರಸ್ತೆಯ ಜಿಎಸ್‌ಎಸ್‌ಎಸ್ ಮಹಿಳಾ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ಬಿಇ, ಬಿ ಆರ್ಚ್ ವಿದ್ಯಾರ್ಥಿನಿಯರ ಸ್ಟೂಡೆಂಟ್ ಇಂಡಕ್ಷನ್ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಜಿಎಸ್‌ಎಸ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಫಾರ್ ವುಮೆನ್ ಮತ್ತು ಜಿಎಸ್‌ಎಸ್‌ಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಫಾರ್ ವುಮೆನ್‌ನಿಂದ ಕಾಲೇಜು ಆವರಣದ ಎಂ.ಗೋವಿಂದ ರಾವ್ ಮೆಮೋರಿಯಲ್ ಹಾಲ್ ಆಯೋಜಿಸಿದ್ದ ಕಾರ್ಯಕ್ರಮವನ್ನು ಬೆಂಗಳೂರಿನ ಸ್ಯಾಮ್ಸಂಗ್ ಆರ್ ಡಿ ಇನ್‌ಸ್ಟಿಟ್ಯೂಟ್ ಇಂಡಿಯಾದ ವಿಷ್ಯುವಲ್ ಇಂಟೆಲಿಜೆನ್ಸ್ ನಿರ್ದೇಶಕ ಬಿ.ಪಿ.ಪ್ರವೀಣ್ ಉದ್ಘಾಟಿಸಿ, ಹೊಸದಾಗಿ ಪ್ರವೇಶ ಪಡೆದ ಉದಯೋನ್ಮುಖ ಇಂಜಿನಿಯರ್‌ಗಳು ಕಲಿಯಲು ಮುಕ್ತ ಮನಸ್ಸು ಹೊಂದಿರಬೇಕು. ಮುಖ್ಯವಾಹಿನಿಯ ಇಂಜಿನಿಯರಿಂಗ್‌ಗೆ ತಮ್ಮನ್ನು ತಾವು ಸೀಮಿತ ಮಾಡಿಕೊಳ್ಳದೆ ವೈವಿಧ್ಯತೆಯನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಇಂಜಿನಿಯರ್‌ಗಳು ಮುಕ್ತ ಮನಸ್ಸಿನಿಂದ ಯೋಚನೆ ಮಾಡಬೇಕು. ಅದರ ಸ್ಪಷ್ಟತೆಯೊಂದಿಗೆ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇದರ ಜತೆಗೆ ಶಿಕ್ಷಣವನ್ನು ಆಧ್ಯಾತ್ಮಿಕ ರೀತಿಯಲ್ಲಿ ಅವಲೋಕಿಸಬೇಕು. ಆಧ್ಯಾತ್ಮಿಕತೆಯು ಪ್ರಶ್ನಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ. ಉತ್ತಮ ತಿಳಿವಳಿಕೆಗೆ ಕಾರಣವಾಗುತ್ತದೆ. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಮತ್ತು ಕರ್ನಾಟಕದಲ್ಲಿ ಮಹಿಳೆಯರಿಗಾಗಿಯೇ ಮೊದಲ ಇಂಜಿನಿಯರಿಂಗ್ ಸಂಸ್ಥೆಯನ್ನು ಸ್ಥಾಪಿಸಿದ ಪ್ರೊ. ಬಿ.ಎಸ್.ಪಂಡಿತ್ ಅವರ ಪ್ರಯತ್ನ ಶ್ಲಾಘನೀಯ ಎಂದರು.
ಕಾಲೇಜಿನ ಆಡಳಿತ ಅಧಿಕಾರಿ ಅನುಪಮಾ ಬಿ.ಪಂಡಿತ್ ಅವರು, ಜಿಎಸ್‌ಎಸ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಫಾರ್ ವುಮೆನ್ ಮತ್ತು ಜಿಎಸ್‌ಎಸ್‌ಎಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ಗಳ ಸ್ಥಾಪನೆ ಹಾಗೂ ಬೆಳವಣಿಗೆಯ ಬಗ್ಗೆ ಸಂಕ್ಷಿಪ್ತ ವರದಿ ನೀಡಿದರು.
ಪ್ರಾಂಶುಪಾಲ ಡಾ.ಎಂ.ಶಿವಕುಮಾರ್ ಅವರು ವಿವಿಧ ಕೋರ್ಸ್, ಕಲಿಕೆಗೆ ಲಭ್ಯವಿರುವ ಸೌಲಭ್ಯ ಮತ್ತು ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ತರಗತಿಗಳ ಸಮಯದಲ್ಲಿ ಅಧ್ಯಾಪಕರೊಂದಿಗೆ ಸಂವಾದ ಮತ್ತು ಸಂದೇಹ ನಿವಾರಣೆಯ ಮೂಲಕ ಉತ್ತಮ ಕಲಿಕೆಗಾಗಿ ಎಲ್ಲ ವಿದ್ಯಾರ್ಥಿಗಳು ಹೆಚ್ಚಿನ ಕಾಳಜಿ ವಹಿಸಬೇಕೆಂದು ತಿಳಿಸಿದರು.
ಮೈಸೂರಿನ ಜಿಎಸ್‌ಎಸ್‌ಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಫಾರ್ ವುಮೆನ್‌ನ ಪ್ರಾಂಶುಪಾಲೆ ಅರ್ಚನಾ ಉತ್ತಯ್ಯ ಅವರು ಜಿಎಸ್‌ಎಸ್‌ಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಫಾರ್ ವುಮೆನ್‌ನಲ್ಲಿರುವ ಸೌಲಭ್ಯಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ಗೌರವ ಕಾರ್ಯದರ್ಶಿ ವನಜಾ ಬಿ.ಪಂಡಿತ್, ಆಡಳಿತ ಮಂಡಳಿ ಸದಸ್ಯ ಆರ್.ಕೆ.ಭರತ್ ಇತರರು ಇದ್ದರು.
‘ಇಂಜಿನಿಯರ್‌ಗಳು ಸೀಮಿತ ಮಾಡಿಕೊಳ್ಳದಿರಿ’
ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips
ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…
ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…
ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…
ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower
ಬೆಂಗಳೂರು: ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…