ಹುಮನಾಬಾದ್: ಎಲ್ಲ ಇಂಜಿನಿಯರ್‌ಗಳು ಸರ್ ಎಂ. ವಿಶ್ವೇಶ್ವರಯ್ಯನವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ವೃತ್ತಿ ಘನತೆ ಹೆಚ್ಚಿಸಬೇಕೇಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಶುಪತಿನಾಥ ಹೇಳಿದರು.
ಪಟ್ಟಣದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಕಚೇರಿಯಲ್ಲಿ ಇಂಜಿನಿಯರ್ ದಿನಾಚರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಕೊಡುಗೆ ಅಪಾರವಾಗಿದೆ. ವಿಶ್ವೇಶ್ವರಯ್ಯನವರು ವೃತ್ತಿ ಕರ್ತವ್ಯ ನಿಷ್ಠೆ ಎತ್ತಿ ಹಿಡಿದ ಮಹಾನ್ ವ್ಯಕ್ತಿ. ದೇಶದಲ್ಲಿ ಅವರ ಕಾರ್ಯ ವೈಖರಿ ಇಂದಿಗೂ ಮಾದರಿಯಾಗಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಶೇಖರ ರಾಗಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ರೇವಣಸಿದ್ದಯ್ಯ ಮಠಪತಿ, ಕಿರಿಯ ಅಭಿಯಂತರರಾದ ರಾಜಕುಮಾರ ಹೆಬ್ಬಾಳೆ, ಪಿರಾಜಿ, ಮಹ್ಮದ್ ಗೌಸ್, ಶಿವಕುಮಾರ ಭಾಲ್ಕಿ, ಗೋರಖನಾಥ, ವಿಜಯಕುಮಾರ ಜಮಾದಾರ, ಓಂಕಾರ ಪಾಟೀಲ್, ಶಿವರಾಜ ಗೋರ್ಟಾ, ಮಾಣಿಕ ನಾಗನಾಯಕ, ಅಲೀಮ್ ಜಮಾದಾರ್, ಹಂಸರಾಜ ಢೋಲೆ, ಪ್ರಭುರಡ್ಡಿ ಮುಸ್ತರಿ, ಸಿದ್ದು ಕಲ್ಲೂರು, ಪ್ರಭು ಅಡಕೈ, ಬಸವರಾಜ ನೆಳಕೋಡ, ಶೈಲಜಾ, ಪ್ರೇಮನಾಥ ಹಂದಿಕೇರಾ, ಹಾಶಪ್ಪ, ಶಂಕರ, ಝರೆಪ್ಪಾ ವಾಡಿ ಇದ್ದರು.