ಪೆಟ್​ ಶಾಪ್​ಗೆ ಹೋಗಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿಗಳು! ವಿಡಿಯೋ ವೈರಲ್​

ಕೊಚ್ಚಿ: ಓದಿನಲ್ಲಿ ಗಮನವಹಿಸಬೇಕಾದ ಇಬ್ಬರು ಇಂಜಿನಿಯರಿಂಗ್​ ವಿದ್ಯಾರ್ಥಿಗಳು ನಾಯಿ ಮರಿಯನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಬಂಧಿಯಾಗಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಬಂಧಿತ ವಿದ್ಯಾರ್ಥಿಗಳನ್ನು ನಿಖಿಲ್​ ಮತ್ತು ಶ್ರೇಯಾ ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರನ್ನು ಕೇರಳದ ಪನಂಗದ ಠಾಣಾ ಪೊಲೀಸರು ಕರ್ನಾಟಕದ ಕಾರ್ಕಳದಲ್ಲಿ ಬಂಧಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಂದ 45 ದಿನದ ಹಾಗೂ 20 ಸಾವಿರ ರೂಪಾಯಿ ಮೌಲ್ಯದ ನಾಯಿ ಮರಿಯನ್ನು ವಶಕ್ಕೆ ಪಡೆಯಲಾಗಿದೆ. ನಿಖಿಲ್​ ಮತ್ತು ಶ್ರೇಯಾ ಕೇರಳದ ನೆಟ್ಟೂರಿನಲ್ಲಿರುವ ಸಾಕು ಪ್ರಾಣಿಗಳ ಅಂಗಡಿಯಿಂದ ನಾಯಿ ಮರಿಯನ್ನು ಕದ್ದಿದ್ದರು. … Continue reading ಪೆಟ್​ ಶಾಪ್​ಗೆ ಹೋಗಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿಗಳು! ವಿಡಿಯೋ ವೈರಲ್​