ಭಾಲ್ಕಿ: ನಾಡು ಕಂಡ ಶ್ರೇಷ್ಠ ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಕಾಯಕ ವಿಶ್ವಕ್ಕೆ ಮಾದರಿಯಾಗಿದೆ ಎಂದು ಬೀದರ್ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ಹೇಳಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಚನ್ನಬಸವೇಶ್ವರ ಶಿಕ್ಷಣ ಸಮುಚ್ಚಯ, ಕುಂದುರು ಕನಸ್ಟ್ರಕ್ಷನ್ ಬೆಂಗಳೂರು, ಶ್ರೀನಿವಾಸ ಇನ್ಫ್ರಾಔರಾಂಗಬಾದ್ ಸಹಯೋಗದಡಿ ಭಾನುವಾರ ಏರ್ಪಡಿಸಿದ್ದ ಸರ್ ಎಂ.ವಿಶ್ವೇಶ್ವರಯ್ಯ ೧೯೪ನೇ ಜನ್ಮದಿನ ಮತ್ತು ಇಂಜಿನಿಯರ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಡತನವನ್ನು ಮೆಟ್ಟಿ ಸಾಧಕರಾದ ವಿಶ್ವೇಶ್ವರಯ್ಯ ಅವರ ಪ್ರತಿಯೊಂದು ಕಾರ್ಯ, ಯೋಜನೆ ದಂತ ಕಥೆಯಾಗಿ ನಮ್ಮೆದುರಿಗಿವೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ವಿಶ್ವೇಶ್ವರಯ್ಯ ಜೀವನದುದ್ದಕ್ಕೂ ಪಾಲಿಸಿದರು. ಅವರ ಸತ್ಯ ಶುದ್ಧ ಕಾಯಕ, ವೃತ್ತಿ ಪ್ರಾಮಾಣಿಕತೆ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಬಣ್ಣಿಸಿದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನಿರ್ದೇಶಕ ಚನ್ನಬಸವ ಬಳತೆ ಮಾತನಾಡಿದರು.
ನಿವೃತ್ತ ಇಂಜಿನಿಯರ್ ಸಿದ್ದಯ್ಯ ಕಾವಡಿಮಠ ಬಸವಗುರು ಪೂಜೆ ನೆರವೇರಿಸಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಅಭಿಯಂತರ ವಿಶ್ವನಾಥಪ್ಪ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಕುಡಿಯುವ ನೀರು ಸರಬರಾಜು ಇಲಾಖೆ ಇಇ ರಾಮಲಿಂಗ ಬಿರಾದಾರ್, ಪ್ರಥಮ ದರ್ಜೆ ಗುತ್ತಿಗೆದಾರರಾದ ಸಂಗಮೇಶ ಹುಣಜೆ ಮದಕಟ್ಟಿ, ರಾಜಕುಮಾರ ಬಿರಾದಾರ್, ಹಿರಿಯ ಆಡಳಿತಾಧಿಕಾರಿ ಎಸ್.ಬಿ.ಬಿರಾದಾರ್, ಆಡಳಿತಾಧಿಕಾರಿ ಮೋಹನ ರೆಡ್ಡಿ, ನಾಗಶೆಟ್ಟೆಪ್ಪ ಲಂಜವಾಡೆ, ಎಂ.ಚನ್ನಬಸಪ್ಪ, ಸಚಿನ್ ಉಚ್ಛಾಟಿ, ಬಸವ ಪ್ರಸಾದ ಇತರರಿದ್ದರು. ಮಧುಕರ ಗಾಂವಕರ್ ನಿರೂಪಣೆ ಮಾಡಿದರು. ನಾಮದೇವ ವಂದಿಸಿದರು.
ಓದಿಗೆ ಸಹಾಯಧನ: ಚನ್ನಬಸವೇಶ್ವರ ಗುರುಕುಲದಲ್ಲಿ ಪಿಯುಸಿ ಪೂರೈಸಿ ಖರಗಪುರ ಐಐಟಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿ ರೋಹಿತ ದಿನೇಶ ಮೇತ್ರೆಗೆ ೫೦ ಸಾವಿರ ರೂ. ಸಹಾಯಧನ ವಿತರಿಸಲಾಯಿತು. ವಿದ್ಯಾರ್ಥಿ ಪಾಲಕರಾದ ದಿನೇಶ ಮೇತ್ರೆ ದಂಪತಿಯನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು. ನಿವೃತ್ತ ಇಂಜಿನಿಯರ್ ಸಿದ್ದಯ ಕಾವಡಿಮಠ ಈ ನೆರವು ನೀಡಿದ್ದಾರೆ.
ಸರ್ ಎಂ.ವಿಶ್ವೇಶ್ವರಯ್ಯ ಬಡತನದಲ್ಲಿ ಅರಳಿದ ಅದ್ಭುತ ಪ್ರತಿಭೆ. ಅವರ ಪ್ರತಿಯೊಂದು ಕಾರ್ಯ ಶಾಶ್ವತವಾಗಿ ನೆಲೆ ನಿಂತಿದೆ. ವಿಶ್ವೇಶ್ವರಯ್ಯ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು.
| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ