ಟಿವಿ ಶೋಗಳನ್ನು ನೋಡಿ ದರೋಡೆ ಕಲಿತು, ಎಟಿಎಂಗಳಿಂದ ಹಣ ದೋಚುತ್ತಿದ್ದ ಇಂಜಿನಿಯರ್​ ಅರೆಸ್ಟ್​

blank

ಭೂಪಾಲ್​: ಎಟಿಎಂ ಲೂಟಿ ಮಾಡುತ್ತಿದ್ದ ಇಂಜಿನಿಯರ್​ ಪದವೀಧರ ಸೇರಿ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಗ್ಯಾಂಗ್​ ಇದುವರೆಗೂ ಏಳು ಎಟಿಎಂಗಳಿಂದ ಹಣ ದೋಚಿದೆ. ಸ್ಫೋಟಕಗಳಿಂದ ಮಶಿನ್​ ಒಡೆದು, ಹಣ ಕಳವು ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಆರೂ ಮಂದಿಯನ್ನು ಬಂಧಿಸಲಾಗಿದೆ. ಏಳು ಎಟಿಎಂಗಳಿಂದ ಸುಮಾರು 46 ಲಕ್ಷ ರೂಪಾಯಿ ದೋಚಿದ್ದಾರೆ ಎಂದು ಐಜಿಪಿ ಅನಿಲ್​ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: VIDEO | ಐಪಿಎಲ್‌ಗಾಗಿ ಸುರೇಶ್ ರೈನಾ, ರಿಷಭ್ ಪಂತ್ ಬ್ಯಾಟ್ ಶಾಪಿಂಗ್!

ಇವರು ಎಟಿಎಂ ಮಶಿನ್​​ನ ಹಣ ಬರುವ ಸ್ಥಳದ ಬಳಿ ಜೆಲಾಟಿನ್ ಸ್ಟಿಕ್ ಇಟ್ಟು, ಮೋಟಾರ್​ ಸೈಕಲ್​ ಬ್ಯಾಟರಿ ಮೂಲಕ ಸ್ಫೋಟಿಸುತ್ತಿದ್ದರು. ಈ ಬಂಧಿತರಲ್ಲಿ ಓರ್ವ ಸಿವಿಲ್​ ಇಂಜಿನಿಯರ್​. ಅಷ್ಟೇ ಅಲ್ಲ ಈತ ಯುಪಿಎಸ್​ಸಿ ಎಕ್ಸಾಮ್​ ಕೂಡ ಬರೆದಿದ್ದಾನೆ. ಟಿವಿಯಲ್ಲಿ ರಾಬರಿಗೆ ಸಂಬಂಧಪಟ್ಟ ಶೋಗಳನ್ನು ನೋಡಿ ಲೂಟಿ ಮಾಡುವುದನ್ನು ಕಲಿತಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಬಂಧಿತರಿಂದ 3.50 ಲಕ್ಷ ರೂ. ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದೇವೆ. ಎಟಿಎಂ ಸ್ಫೋಟಕ್ಕೆ ಬಳಸುತ್ತಿದ್ದ ಸಾಧನಗಳನ್ನು, ಪಿಸ್ತೂಲ್​ಗಳನ್ನು ಜಪ್ತಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

VIDEO: ಏಕಾಂಗಿಯಾಗಿ ಪಾರ್ಕ್​​ಗೆ ಹೋಗಿ 60 ಅಡಿ ಎತ್ತರ ಮರ ಏರಿ ಕುಳಿತ ವ್ಯಕ್ತಿ…!

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…