‘ಮೀನಮೇಷ ಎಣಿಸದೆ ಒಳಮೀಸಲಾತಿ ಜಾರಿಗೊಳಿಸಿ’

ಮೈಸೂರು: ಯಾವುದೇ ಸಾಂವಿಧಾನಿಕ ತೊಡಕಿಲ್ಲದಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳು ಮೀನಮೇಷ ಎಣಿಸುವ ನಾಟಕ ಆಡುವುದನ್ನು ಬಿಟ್ಟು ಒಳಮೀಸಲಾತಿ ಜಾರಿ ಮಾಡಬೇಕು ಎಂದು ಚಿಂತಕ ಶಿವಸುಂದರ್ ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ‘ಮೇಲು-ಕೀಳು ಅಪರಾಧ’ ಕುರಿತು ಭಾಷಣ ಮಾಡಿದ ದಿನದ ಅಂಗವಾಗಿ ಮೀಸಲಾತಿಯ ಒಳನೋಟ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸುಪ್ರೀಕೋರ್ಟ್ ಆದೇಶದಂತೆ ಸರ್ಕಾರಗಳು ಒಳ ಮೀಸಲಾತಿ ಜಾರಿ ಮಾಡಬೇಕು. ಒಳ ಮೀಸಲು ಜಾರಿಗೊಳಿಸಲು ಯಾವುದೇ ಸಾಂವಿಧಾನಿಕ ತೊಡಕಿಲ್ಲ, ಎಲ್ಲ ರಾಜಕೀಯ ಪಕ್ಷಗಳ ಸರ್ಕಾರಗಳು ನಾಟಕ ಆಡುವುದನ್ನು ಬಿಟ್ಟು ಆದೇಶ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಒಳಮೀಸಲಾತಿ ಜಾರಿಯಾದರೆ ದಲಿತರಲ್ಲಿ ಒಡಕುಂಟಾಗುತ್ತದೆ ಎಂಬ ಆತಂಕವನ್ನು ಬಿಟ್ಟು, ತಮ್ಮ ಪಾಲನ್ನು ಹೆಚ್ಚಳ ಮಾಡಿಕೊಳ್ಳುವ ನಿಟ್ಟಿಲ್ಲಿ ದಲಿತರು ಹೋರಾಟ ಮಾಡಬೇಕು. ಅನ್ಯಾಯವಾಗಿರುವವರಿಗೆ ನ್ಯಾಯ ಒದಗಿಸುವ ಕೆಲಸವನ್ನು ನೀವೇ ಮಾಡಿದರೆ ನಿಮ್ಮಲ್ಲಿ ಇನ್ನಷ್ಟು ಒಗ್ಗಟ್ಟು ಹೆಚ್ಚಾಗಲಿದೆ ಎಂದರು.
ಸರ್ಕಾರ ತಮ್ಮ ಪಾಲನ್ನು ಕೊಡದೆ ನಮ್ಮಲ್ಲೇ ಜಗಳ ಹಚ್ಚಲು ಪ್ರಯತ್ನಿಸುತ್ತಿವೆ. ಆದರೆ ನಾವುಗಳು ಒಗ್ಗಟ್ಟಾಗಿ ನಮ್ಮ ಪಾಲನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ. ಒಳಮೀಸಲಾತಿ ಜಾರಿ ಮಾಡಲು ಮನಸ್ಸಿಲ್ಲದ ಪಕ್ಷಗಳು ಮತ್ತು ಸರ್ಕಾರ ಇನ್ನಿಲ್ಲದ ಸಬೂಬು ಹೇಳುತ್ತಿವೆ. ಅನ್ಯಾಯಕ್ಕೊಳಗಾದವರಿಗೆ ಮೀಸಲಾತಿಯ ಅಗತ್ಯ ಇದೆ. ಅದನ್ನು ಪ್ರಮಾಣಿಕವಾಗಿ ಸರ್ಕಾರಗಳು ಮಾಡಬೇಕಿದೆ ಎಂದು ಆಗ್ರಹಿಸಿದರು.
ಒಳಮೀಸಲಾತಿ ಜಾರಿ ಮಾಡಿದರೆ ನಮ್ಮ ಪಾಲು ಕಡಿಮೆಯಾಗಲಿದೆ ಎಂಬ ಆತಂಕ ದಲಿತರಲ್ಲೇ ಇದೆ. ಆದರೆ ನಿಮ್ಮ ಪಾಲನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಹೋರಾಟ ಮುಂದುವರಿಸಬೇಕು. ಮೀಸಲಾತಿಯಲ್ಲಿ ಶೇ.50 ಮೇಲ್ಜಾತಿ ರದ್ದುಗೊಳಿಸವಂತೆ ಒತ್ತಾಯಿಸಬೇಕು ಎಂದರು.
ಜನಸಂಖ್ಯಾವಾರು ಎಷ್ಟು ಜನಸಂಖ್ಯೆ ಹೆಚ್ಚಳವಾಗುತ್ತಿದೆ ಅದರ ಪಾಲನ್ನು ಹೆಚ್ಚಿಗೆ ಕೊಡುವಂತೆ ಕೇಳಬೇಕು, ಖಾಸಗೀಕರಣ ರದ್ದುಮಾಡಬೇಕು, ಉದ್ಯೋಗಗಳ ಸಂಖ್ಯೆ ಹೆಚ್ಚಳ ಮಾಡಿ, ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು, ಸರ್ಕಾರಿ ಶಾಲೆ, ಉದ್ಯೋಗಗಳನ್ನು ಜಾಸ್ತಿ ಮಾಡಿದರೆ ಸಮಾಜಿಕ ನ್ಯಾಯ ಸಿಗಲಿದೆ ಎಂದು ಹೇಳಿದರು.
ಜಾತಿ ವಿನಾಶಕ್ಕಾಗಿ ಹೋರಾಟ ಮಾಡಬೇಕಾದ ಮಠಗಳು ಇಂದು ತಮ್ಮ ಜಾತಿಗಳನ್ನು ಪ್ರಬಲವಾಗಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ದುರದೃಷ್ಟಕರ. ಸರ್ಕಾರ ಕೂಡ ಅಂತಹ ಮಠಗಳಿಗೆ ಹೆಚ್ಚಿನ ಅನುದಾನ ಕೊಡುವುದಲ್ಲದೆ ನೂರಾರು ಎಕರೆ ಭೂಮಿ ನೀಡುತ್ತಿರುವುದು ವಿಷಾದನೀಯ ಎಂದರು.
ಕರ್ನಾಟಕ ಬುದ್ಧ ದಮ್ಮ ಸಮಿತಿ ಕಾರ್ಯದರ್ಶಿ ಆರ್.ಮಹದೇವಪ್ಪ, ವಿಚಾರವಾದಿ ಡಾ.ಕೃಷ್ಣಮೂರ್ತಿ ಚಮರಂ, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕಿರಂಗೂರು ಸ್ವಾಮಿ ಇತರರು ಇದ್ದರು.

Share This Article

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…

Chanakya Niti: ದಾಂಪತ್ಯ ಜೀವನ ಸುಂದರವಾಗಿರಲು 4 ವಿಷಯಗಳನ್ನು ಅನುಸರಿಸಿ….

ಬೆಂಗಳೂರು:  ವಿದ್ವಾಂಸರಲ್ಲಿ ಚಾಣಕ್ಯರು ( Chanakya Niti ) ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

Tamarind Juice : ಹುಣಸೆ ಹಣ್ಣಿನ ರಸದ ಅದ್ಭುತ ಪ್ರಯೋಜನಗಳಿವು…

ಬೆಂಗಳೂರು:  ಹುಣಸೆಹಣ್ಣು ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಹುಣಸೆಹಣ್ಣು ಸ್ವಲ್ಪ ಸಿಹಿ ಮತ್ತು ಸ್ವಲ್ಪ…