ದಿಗ್ವಿಜಯ ಅಭಿಯಾನ: ಹುಟ್ಟಿನಿಂದಲೇ ಎಂಡೋ ಸಂತ್ರಸ್ತನಿಗೆ ಇನ್ನೂ ದೊರೆಯದ ಪರಿಹಾರ

ದಕ್ಷಿಣ ಕನ್ನಡ: ಎಂಡೋ ಬಾಧಿತರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್​ ಆದೇಶವಿದ್ದರೂ ಬಂಟ್ವಾಳ ತಾಲೂಕಿನಲ್ಲಿ ಪಾಲನೆಯಾಗಿಲ್ಲ. ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಶಿವಪ್ರಸಾದ್​(24) ಅವರನ್ನು ಆರೋಗ್ಯ ಇಲಾಖೆ ಎಂಡೋ ಸಂತ್ರಸ್ತ ಎಂದು ಗುರುತಿಸಿದ್ದರೂ ಕಂದಾಯ ಇಲಾಖೆ ಮಾತ್ರ ಪರಿಹಾರಧನ ನೀಡಿಲ್ಲ.

ಶಿವಪ್ರಸಾದ್​ ಏಳಲೂ ಆಗದ ಸ್ಥಿತಿಯಲ್ಲಿ ಮಲಗಿದ್ದಾರೆ. ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದೆ. ಆದರೆ, ಪರಿಹಾರವೂ ಸಿಗುತ್ತಿಲ್ಲ. ಈ ಬಗ್ಗೆ ಕಂದಾಯ ಇಲಾಖೆಯನ್ನು ಕೇಳಿದರೆ, ಶಿವಪ್ರಸಾದ್​ ವಾಸಿಸುತ್ತಿರುವ ಪ್ರದೇಶ ಎಂಡೋ ಪೀಡಿತ ಪ್ರದೇಶವಲ್ಲ ಎಂಬ ಕಾರಣಕ್ಕೆ ಪರಿಹಾರ ತಡೆ ಹಿಡಿಯಲಾಗಿದೆ ಎಂದು ಸಮರ್ಥನೆ ನೀಡುತ್ತದೆ.

ಹುಟ್ಟಿನಿಂದಲೇ ಬಾಧಿತ

ಆದರೆ, ವಾಸ್ತವದಲ್ಲಿ ಶಿವಪ್ರಸಾದ್​ ತಾಯಿ ಗರ್ಭಿಣಿಯಾಗಿದ್ದಾಗ ಪುತ್ತೂರಿನ ಎಂಡೋಬಾಧಿತ ಪ್ರದೇಶದಲ್ಲಿ ವಾಸವಾಗಿದ್ದರು. ಹಾಗಾಗಿ ಅವರು ಹುಟ್ಟಿನಿಂದಲೇ ಎಂಡೋ ಸಂತ್ರಸ್ತರಾಗಿದ್ದರು. ಅವರಿಗೆ ಶೀಘ್ರ ಪರಿಹಾರ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಕೂಡಲೇ ಗಮನ ಹರಿಸಬೇಕು ಎಂದು ಆಗ್ರಹಿಸಲಾಗಿದೆ.

ಶಿವಪ್ರಸಾದ್​ ಎಂಡೋ ಪೀಡಿತರಾಗಿದ್ದು ಹೇಗೆ?
ಶಿವಪ್ರಸಾದ್​ ಕುಟುಂಬ ಮೊದಲು ಪುತ್ತೂರಿನಲ್ಲಿ ಇತ್ತು. ಬೆಳ್ತಂಗಡಿಯ ಕೊಕ್ಕಡ ಸುತ್ತಲೂ ಸರ್ಕಾರಿ ಭೂಮಿಯಲ್ಲಿ ಗೇರು ಬೆಳೆಯಲಾಗುತ್ತಿತ್ತು. ಗೇರು ಅಭಿವೃದ್ಧಿ ನಿಗಮದಿಂದ 1980-2000ರವರೆಗೆ ಎಂಡೋಸಲ್ಫಾನ್​ ಸಿಂಪಡಿಸಲಾಗಿತ್ತು. ಇದರಿಂದ ಆ ಭಾಗದ ಅನೇಕರ ಮೇಲೆ ಪರಿಣಾಮ ಬೀರಿದೆ.

 

Leave a Reply

Your email address will not be published. Required fields are marked *