More

  ಕಲಿಕಾ ಹಬ್ಬದಿಂದ ಪಠ್ಯಾಭ್ಯಾಸಕ್ಕೆ ಪ್ರೋತ್ಸಾಹ

  ಚಿತ್ರದುರ್ಗ: ಕಲಿಕಾ ಹಬ್ಬ, ಕಲಿಕೆಯೆಡೆಗೆ ವಿದ್ಯಾರ್ಥಿಗಳ ಮನಸ್ಸನ್ನು ಸೆಳೆಯುವ ವಿಭಿನ್ನ ಕಾರ್ಯಕ್ರಮವಾಗಿದೆ ಎಂದು ಚಿತ್ರದುರ್ಗ ಕ್ಷೇತ್ರ ಶಿಕ್ಷಣಾ ಧಿಕಾರಿ ತಿಪ್ಪೇಸ್ವಾಮಿ ಹೇಳಿದರು.ನಗರದ ಸರ್ಕಾರಿ ಪ್ರೌಢಶಾಲೆ(ಕೋಟೆ)ಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ದಕ್ಷಿಣ ಕ್ಲಸ್ಟರ್ ವಿಭಾಗದ ಕಲಿಕಾ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

  ಚಿತ್ರದುರ್ಗ ತಾಲ್ಲೂಕಿನಾದ್ಯಂತ ಈ ಹಬ್ಬವನ್ನು ಸಡಗರ,ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ಪ್ರೋತ್ಸಾಹ ದೊರೆಯಲಿದೆ. ಎಲ್ಲ ಮಕ್ಕಳು ಎರಡು ದಿನಗಳ ಈ ಕಾರ‌್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕೆಂದರು.
  ಬಿಆರ್‌ಸಿ ಸಂಪತ್‌ಕುಮಾರ್ ಮಾತನಾಡಿ,ಕಲಿಕಾ ಹಬ್ಬ ಚಟುವಟಿಕೆ ಆಧಾರಿತವಾಗಿದ್ದು,ಆಡುವ ಮೂಲಕ ಪಾಠ ಕಲಿಯುವ ಕೆಲ ಸವಾಗಬೇಕು ಎಂದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹುಲಿಕುಂಟರಾಯಪ್ಪ,ಮುಖ್ಯಶಿಕ್ಷಕಿ ಸೌಮ್ಯ,ಎಸ್‌ಡಿಎಂಸಿ ಅಧ್ಯಕ್ಷೆ ಪವಿತ್ರಾ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ,ಕ್ಷೇತ್ರ ಸಮನ್ವಯಾಧಿಕಾರಿ ಶ್ವೇತಾ ಮತ್ತಿತರರು ಇದ್ದರು.

  ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರು ಪ್ರಯತ್ನಿಸಬೇಕು.
  ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಗಣನೀಯವಾದದ್ದು,ಅವರ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರುವುದಕ್ಕಾಗಿ ಶಿಕ್ಷಕರು ಅವಿರತ ಪ್ರಯತ್ನಿಸಬೇಕು ಬೇಕೆಂದು ಬಿಇಒ ತಿಪ್ಪೇಸ್ವಾಮಿ ಹೇಳಿದರು. ರೋಟರಿ ಕ್ಲಬ್ ಚಿತ್ರದುರ್ಗ,ರೋಟರಿ ಕ್ಲಬ್ ಚಿತ್ರದುರ್ಗ ಪೋರ್ಟ್ ಆಶ್ರಯದಲ್ಲಿ ನಗರದ ಆದಿಶೇಷ ರೋಟರಿ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಜಿಲ್ಲೆ ರಾಜ್ಯದಲ್ಲಿಪ್ರಥಮ ಸ್ಥಾನ ಪಡೆಯ ಬೇಕೆಂದು ಆಶಿಸಿದರು.

  ದಾವಣಗೆರೆ ರೋಟರಿ ಕ್ಲಬ್ ಪ್ರಮುಖ ವಿಶ್ವಜಿತ್ ಜಾದವ್ ಮಾತನಾಡಿ,ಶಾಲೆಯಲ್ಲಿ ಸೌಕರ್ಯಗಳಿದ್ದರೂ ಉತ್ತಮ ಶಿಕ್ಷಕರು ಇಲ್ಲದಿದ್ದರೆ ಕಲಿಕೆಯಲ್ಲಿ ಗುಣಾತ್ಮಕ ಬದಲಾವಣೆ ಕಷ್ಟವೆಂದರು. ಹರಿಸರ್ವೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಕೆ. ರವೀಂದ್ರ,ಗಾಯತ್ರಿ ಶಿವರಾಂ,ಮಾಧುರಿ ಮಧು ಪ್ರಸಾದ್,ಮಧುಸೂದನ್‌ರೆಡ್ಡಿ,ಜಯಶ್ರೀ ಶಾ,ಜೆ.ಅಶೋಕ್‌ಕುಮಾರ್,ಎಂ.ಜೆ. ರಾಘವೇಂದ್ರ ಮತ್ತಿತರರು ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 28

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts