ಮುಂಡರಗಿ: ಪಾಲಕರು ಮಕ್ಕಳ ಅಭಿರುಚಿಗೆ ತಕ್ಕಂತೆ ವಿದ್ಯಾಭ್ಯಾಸ ನೀಡುವಂತಾಗಬೇಕು. ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಪಠ್ಯ ಪುಸ್ತಕವನ್ನು ಮೀರಿ ಮಕ್ಕಳು ಬೆಳೆಯಬೇಕು ಎಂದು ನಿವೃತ್ತ ಡಿಡಿಪಿಐ ಎಂ.ಎ. ರಡ್ಡೇರ ಹೇಳಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನ ಸಭಾಭವನದಲ್ಲಿ ತಾಲೂಕು ರಡ್ಡಿ ಬಳಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಸಮಾಜದಲ್ಲಿ ಸತ್ಕಾರ್ಯಗಳನ್ನು ಮಾಡಬೇಕು. ಕೃಷಿ ಬಗ್ಗೆ ತಾತ್ಸಾರ ಮನೋಭಾವ ಹೊಂದಬಾರದು ಎಂದರು.
ವಿದ್ಯಾರ್ಥಿನಿ ಭೂಮಿಕಾ ರಾಜೂರು ಮಾತನಾಡಿದರು. ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ, ರಾಜ್ಯ ರಡ್ಡಿ ಸಮಾಜದ ಉಪಾಧ್ಯಕ್ಷ ಕರಬಸಪ್ಪ ಹಂಚಿನಾಳ, ಶಿಕ್ಷಕಿ ಶಾಂತಾ ಇಮ್ರಾಪೂರ, ಆದರ್ಶ ಮಾಲಿಪಾಟೀಲ, ಸಂಕಲ್ಪ ಪಾಟೀಲ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ರಡ್ಡಿ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಪರವಾಗಿ ಪಾಲಕರನ್ನು ಗೌರವಿಸಲಾಯಿತು.
ಹೇಮಂತಗೌಡ ಪಾಟೀಲ, ವೀಣಾ ಪಾಟೀಲ, ಎಸ್.ಆರ್. ಬಸಾಪೂರ, ಗಿರಿಯಪ್ಪಗೌಡ್ರ ಎಚ್. ವಿರೂಪಾಕ್ಷಗೌಡ್ರ, ಭೀಮರಡ್ಡಿ ರಾಜೂರು, ಆನಂದ ಪಾಟೀಲ, ಇತರರಿದ್ದರು. ನಿವೃತ್ತ ಶಿಕ್ಷಕ ಎಸ್.ಎಸ್. ಗಡ್ಡದ ಸ್ವಾಗತಿಸಿದರು. ಶಿಕ್ಷಕ ಎಸ್.ಕೆ. ರಾಜೂರು ನಿರ್ವಹಿಸಿದರು. ಪಾಲಾಕ್ಷಿ ಗಣದಿನ್ನಿ ಕಾರ್ಯಕ್ರಮ ನಿರ್ವಹಿಸಿದರು.