More

    ನ್ಯಾಯದೇವತೆ|ಅವಧಿಗೆ ಮುನ್ನವೇ ಅಂಗಡಿ ಖಾಲಿ

    ನನ್ನ ತಂದೆಗೆ ಇಬ್ಬರು ಹೆಂಡತಿಯರು. ನಾನು ಮೊದಲನೆಯ ಹೆಂಡತಿಯ ಮಗ. ಎರಡನೆಯ ಹೆಂಡತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ನನ್ನ ತಾಯಿ ಇತ್ತೀಚೆಗೆ ಆರು ತಿಂಗಳ ಹಿಂದೆ ತೀರಿಕೊಂಡರು. ನನ್ನ ತಂದೆ ಒಂದು ತಿಂಗಳ ಹಿಂದೆ ತೀರಿಕೊಂಡರು. ನಮ್ಮ ತಂದೆಗೆ ಹತ್ತು ಎಕರೆ ಪಿತ್ರಾರ್ಜಿತ ಆಸ್ತಿ ಮತ್ತು ಸ್ವಯಾರ್ಜಿತ ಆಸ್ತಿ ಎರಡು ಎಕರೆ ಜಮೀನು ಇದೆ. ಆ ಜಮೀನಿನಲ್ಲಿ ಇರುವ ಮನೆಯಲ್ಲಿ ನಮ್ಮ ಚಿಕ್ಕಮ್ಮ ವಾಸ ಮಾಡುತ್ತಿದ್ದಾರೆ. ನಾನು ಇದುವರೆಗೆ ಜಮೀನಿನ ಬೆಳೆಯಲ್ಲಿ ಮಾರಾಟದ ಹಣದಲ್ಲಿ ಒಂದು ಕಾಸೂ ಪಡೆದಿಲ್ಲ. ಈಗ ಭಾಗ ಕೇಳಿದರೆ, ನಮ್ಮ ತಮ್ಮಂದಿರು ನಿನಗೆ ಭಾಗ ಇಲ್ಲ ಎನ್ನುತ್ತಿದ್ದಾರೆ. ನಮ್ಮ ತಂದೆ ವಿಲ್ ದಾನ ಪತ್ರ ಏನೂ ಮಾಡಿಲ್ಲ. ಜಮೀನಿನ ಕಬ್ಜೆಯಲ್ಲಿ ನನ್ನ ತಮ್ಮಂದಿರೇ ಇದ್ದಾರೆ. ನಾನು ಭಾಗ ಪಡೆಯುವುದು ಹೇಗೆ ? ತಿಳಿಸಿ ಸಹಾಯ ಮಾಡಿ.

    ಮೃತ ಹಿಂದೂ ಪುರುಷನ ಸ್ವಯಾರ್ಜಿತ ಆಸ್ತಿಯಲ್ಲಿ ಆತನ ಹೆಂಡತಿ ಮತ್ತು ಮಕ್ಕಳಿಗೆ ಸಮ ಭಾಗ ಇರುತ್ತದೆ. ಮೊದಲ ಹೆಂಡತಿ ಬದುಕಿರುವಾಗ ಎರಡನೇ ಮದುವೆ ಆಗಿದ್ದರೆ ಎರಡನೇ ಪತ್ನಿಗೆ ಮೃತ ಹಿಂದೂ ಪುರುಷನ ಆಸ್ತಿಯಲ್ಲಿ ಯಾವ ಭಾಗವೂ ಬರುವುದಿಲ್ಲ. ಇನ್ನು ಪಿತ್ರಾರ್ಜಿತ ಆಸ್ತಿಯ ವಿಷಯಕ್ಕೆ ಬಂದರೆ ನಿಮ್ಮ ತಂದೆಗೆ ಎಲ್ಲರೂ ಗಂಡು ಮಕ್ಕಳೇ ಇರುವುದರಿಂದ , ನಿಮ್ಮ ಮೂವರಿಗೂ ಅದೂ ಸಮಭಾಗ ಆಗುತ್ತದೆ.ಅ

    ನ್ಯಾಯದೇವತೆ|ಅವಧಿಗೆ ಮುನ್ನವೇ ಅಂಗಡಿ ಖಾಲಿಹೀಗಾಗಿ ನೀವು ಧೈರ್ಯವಾಗಿ ನಿಮ್ಮ ಮೂರನೇ ಒಂದು ಭಾಗಕ್ಕೆ ದಾವೆ ಹಾಕಿ. ಪ್ರಕರಣ ನಡೆಯುವವರೆಗೆ ಆಸ್ತಿಯನ್ನು ಪರಭಾರೆ ಮಾಡಬಾರದೆಂದು ಇಂಜಂಕ್ಷನ್ ಆದೇಶವನ್ನು ಪಡೆದುಕೊಳ್ಳಿ. ಜಮೀನಿನ ಬೆಳೆಯ ಲೆಕ್ಕಾಚಾರಕ್ಕೆ ರಿಸೀವರ್ ಅರ್ಜಿಯನ್ನೂ ಹಾಕಿಸಿ. ಪ್ರಕರಣದ ನೋಟೀಸು ನಿಮ್ಮ ಸಹೋದರರಿಗೆ ಜಾರಿ ಆದ ಮೇಲೆ, ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ನ್ಯಾಯಾಲಯವನ್ನು ಕೇಳಿಕೊಳ್ಳಿ. ಅಲ್ಲಿ, ಕೂತು ಮಾತಾಡಿ ಎಲ್ಲರೂ ಒಪ್ಪಿಗೆಗೆ ಬಂದರೆ ಅನುಕೂಲಕ್ಕೆ ಅನುಗುಣವಾಗಿ ಆಸ್ತಿ ಹಂಚಿಕೊಳ್ಳಿ. ನಿಮ್ಮ ತಮ್ಮಂದಿರು ಒಪ್ಪದಿದ್ದರೆ ಧೈರ್ಯವಾಗಿ ಕೇಸು ನಡೆಸಿ.

    ನಾನು ಎಪ್ಪತ್ತು ವರ್ಷದ ವೃದ್ಧ. ನಾನು ನನ್ನ ಒಂದು ಅಂಗಡಿಯನ್ನು ಅಯುರ್ವೆದದ ಷಾಪ್ ನಡೆಸಲು ಕೊಟ್ಟಿದ್ದೆ. ಎರಡು ಬಾರಿ ಅಗ್ರಿಮೆಂಟ್ ಮುಂದುವರೆಯಿತು. ಎರಡನೇ ಬಾರಿ ಅವರು ಕೊಟ್ಟಿದ್ದ ಮುಂಗಡ ಹಣವನ್ನು ನನ್ನ ಆರೋಗ್ಯಕ್ಕೆ ಖರ್ಚು ಮಾಡಿಬಿಟ್ಟೆ. ಈಗ ಅವರು ಅವಧಿ ಮುಗಿಯುವ ಮುಂಚೆಯೇ ಅಂಗಡಿ ಖಾಲಿ ಮಾಡಿ ಮುಂಗಡ ಹಣ ಕೊಡು ಎಂದು ಬೆದರಿಸುತ್ತಿದ್ದಾರೆ. ರಿಜಿಸ್ಟರ್ ಪತ್ರದ ಮೂಲಕ ನೋಟಿಸು ಕೊಟ್ಟು ಖಾಲಿ ಮಾಡುವ ಇಂಗಿತ ತಿಳಿಸಿದ್ದಾರೆ. ಯಾವಾಗ ಮಾಡುತ್ತಾರೆ ಎಂದು ತಿಳಿಸಿಲ್ಲ. ಅವರು ಅವಧಿಯವರೆಗೂ ಅಂಗಡಿಯಲ್ಲಿ ಮುಂದುವರೆಸಲು ನಾನು ಏನು ಮಾಡಬೇಕು?

    ನೀವು ಕೊಟ್ಟಿರುವ ಮಾಹಿತಿ ಸಂಪೂರ್ಣವಾಗಿಲ್ಲ. ನಿಮ್ಮ ಮತ್ತು ಬಾಡಿಗೆದಾರರ ಮಧ್ಯೆ ಅಂಗಡಿ ಖಾಲಿ ಮಾಡುವ ಬಗ್ಗೆ ಯಾವ ಒಪ್ಪಿಗೆ ಆಗಿದೆ ಎನ್ನುವುದನ್ನು ಅಗ್ರಿಮೆಂಟ್ ನೋಡಿದಾಗಲೇ ಎಲ್ಲ ವಿಷಯ ಸರಿಯಾಗಿ ತಿಳಿಯುವುದು. ನಿಮಗೆ ಈಗ ಎರಡು ಆಯ್ಕೆ ಇವೆ. ಯಾವುದಾದರೂ ವಕೀಲರ ಮೂಲಕ ಅವರ ನೋಟಿಸಿಗೆ ಪ್ರತ್ಯುತ್ತರ ಕಳಿಸಿ. ಅಥವಾ ನಿಮ್ಮ ತಾಲ್ಲೂಕಿನ ಉಚಿತ ಕಾನೂನು ಸೇವಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ, ನಿಮ್ಮ ಮತ್ತು ಬಾಡಿಗೆದಾರರ ಮಧ್ಯೆ ವ್ಯಾಜ್ಯ ಪೂರ್ವ ಸಂಧಾನ ಮಾಡಬೇಕೆಂದು ಮನವಿ ಕೊಡಿ. ಅಲ್ಲಿ ನುರಿತ ಸಂಧಾನಕಾರರು ಇಬ್ಬರನ್ನೂ ಕರೆಯಿಸಿ ಒಂದು ಒಪ್ಪಂದಕ್ಕೆ ಬರುವಂತೆ ಮಾಡುತ್ತಾರೆ. ಕೋರ್ಟು ಕಚೇರಿ ಎಂದು ಅಲೆದಾಡಿ ಖರ್ಚುಮಾಡಿ ಶ್ರಮ ತೆಗೆದುಕೊಳ್ಳುವ ಬದಲು ಇದು ಒಳ್ಳೆಯ ದಾರಿ. ನೀವು ಯಾವುದಕ್ಕೂ ಹೆದರ ಬೇಕಾಗಿಲ್ಲ. ಬಾಡಿಗೆದಾರರು ಗಲಾಟೆಗೆ ಬಂದರೆ ಪೊಲೀಸರ ಬಳಿ ಹೋಗಿ ಕಂಪ್ಲೇಂಟ್ ಕೊಡಿ.

    ನಾನೊಬ್ಬ ನಿವೃತ್ತ ರೈಲ್ವೆ ನೌಕರ. ನನಗೆ 90 ವರ್ಷ. ಐದು ಹೆಣ್ಣು ಮಕ್ಕಳು ಮತ್ತು ಎರಡು ಗಂಡು ಮಕ್ಕಳು ಇದ್ದಾರೆ. ಎಲ್ಲರಿಗೂ ಮದುವೆ ಆಗಿದೆ. ಒಬ್ಬ ಮಗಳು ವಿಧವೆ . ಅವಳು ತನ್ನ ಇಬ್ಬರು ಮಕ್ಕಳೊಂದಿಗೆ ನನ್ನ ಜತೆಯೇ ಇದ್ದಾಳೆ. ನನ್ನ ಎರಡನೆಯ ಮಗ ತನ್ನ ಹೆಂಡತಿಯಿಂದ ವಿಚ್ಛೇದನ ಪಡೆದು ನಮ್ಮ ಜತೆ ಇದ್ದಾನೆ. ನನಗೆ ಒಂದು 50-60 ಲಕ್ಷ ಬೆಲೆ ಬಾಳುವ ಮನೆ ಮತ್ತು ಸೈಟು ಇದೆ. ಇದು ನಮ್ಮ ತಂದೆ ತಾತ ಇವರುಗಳಿಂದ ಬಂದ ಸ್ವತ್ತು. ಅದನ್ನು ನವೀಕರಿಸಲು 8-9 ಲಕ್ಷ ನನ್ನ ಸ್ವಂತ ಹಣ ಖರ್ಚು ಮಾಡಿದ್ದೇನೆ. ಈಗ ಈ ಸ್ವತ್ತನ್ನು ಅರ್ಧ ನನ್ನ ಕಿರಿಯ ಮಗನಿಗೂ ಅರ್ಧ ನನ್ನ ವಿಧವೆ ಮಗಳಿಗೂ ವಿಲ್ ಮಾಡಬೇಕೆಂದಿದ್ದೇನೆ. ಹೀಗೆ ಮಾಡುವುದರಿಂದ ಮುಂದೆ ಅವರಿಗೆ ಕಾನೂನಿನ ತೊಡಕು ಬರುತ್ತದೆಯೇ ತಿಳಿಸಿ.

    ಯಾವುದೇ ವ್ಯಕ್ತಿಯ ಸ್ವಯಾರ್ಜಿತ ಮತ್ತು ಪ್ರತ್ಯೇಕ ಆಸ್ತಿಯನ್ನು ಯಾರಿಗೆ ಬೇಕಾದರೂ ವಿಲ್ ಮಾಡಬಹುದು. ವಿಲ್ ಮಾಡುವ ವ್ಯಕ್ತಿಗೆ 3-4 ಮಕ್ಕಳು ಇದ್ದು, ಕೆಲವರಿಗೆ ಮಾತ್ರ ವಿಲ್ ಮಾಡುವ ಸಂದರ್ಭದಲ್ಲಿ, ಯಾವ ಕಾರಣದಿಂದ ಕೆಲವರಿಗೆ ಮಾತ್ರ ವಿಲ್ ಮಾಡುತ್ತಿದ್ದೇವೆ ಏಕೆ ಬೇರೆ ಮಕ್ಕಳಿಗೆ ವಿಲ್ ಮಾಡಿಲ್ಲ ಎನ್ನುವುದನ್ನು ಬರೆಯಿಸಿದರೆ ಒಳ್ಳೆಯದು. ನಿಮ್ಮ ಪಿತ್ರಾರ್ಜಿತ ಆಸ್ತಿ ಇದ್ದರೆ , ಅದರಲ್ಲಿ ನಿಮ್ಮ ಭಾಗವನ್ನು ಮಾತ್ರ ನೀವು ವಿಲ್ ಮಾಡಬಹುದು. ನೀವು ಆಸ್ತಿಗೆ ಸಂಬಂಧಿಸಿದ ಪತ್ರಗಳನ್ನು ತೆಗೆದುಕೊಂಡು ವಕೀಲರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆಯುವುದು ಒಳ್ಳೆಯದು. ನೀವು ತಿಳಿಸಿರುವ ಆಸ್ತಿ ನಿಮ್ಮ ಪ್ರತ್ಯೇಕ ಆಸ್ತಿ /ಸಪರೇಟ್ ಪ್ರಾಪರ್ಟಿ ಆದರೆ ನೀವು ವಿಲ್ ಮಾಡಬಹುದು. ನಿಮ್ಮ ಪಿತ್ರಾರ್ಜಿತ ಆಸ್ತಿ ಆದರೆ ನಿಮ್ಮ ಭಾಗವನ್ನು ಮಾತ್ರ ವಿಲ್ ಮಾಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts