More

  ಲಕ್ಷಾಧಿಪತಿ ಆದ ಕಳ್ಳ ಸ್ಲಿಪ್ಪರ್​ನಿಂದಾಗಿ ಸಿಕ್ಕಿಬಿದ್ದ; ಪೊಲೀಸ್ ಕಾರ್ಯಾಚರಣೆಯೇ ಇಂಟರೆಸ್ಟಿಂಗ್!

  ನವದೆಹಲಿ: ಇಲ್ಲೊಬ್ಬ ಕಳ್ಳ ಲಕ್ಷಗಟ್ಟಲೆ ಹಣವನ್ನು ಲಪಟಾಯಿಸಿ ಏನೂ ಆಗದವನಂತೆ ಇದ್ದೂ ಕೊನೆಗೆ ಬರೀ ಸ್ಲಿಪ್ಪರ್ ಕಾರಣದಿಂದಾಗಿ ಸಿಕ್ಕಿಬಿದ್ದಿದ್ದಾನೆ. ಈ ಮೂಲಕ 22.13 ಲಕ್ಷ ರೂ. ಕಳ್ಳತನ ಪ್ರಕರಣವೊಂದರ ರಹಸ್ಯ ಬಯಲಾಗಿದೆ.

  ಲಖನೌದ ಕೃಷ್ಣನಗರ ಎಂಬಲ್ಲಿನ ಶಾಪಿಂಗ್ ಮಾರ್ಟ್​ವೊಂದರ ಕ್ಯಾಶ್​ ರೂಮ್​ನ ಲಾಕರ್​ನಿಂದ 22.13 ಲಕ್ಷ ರೂ. ಕಳವಾಗಿತ್ತು. ಈ ಕುರಿತು ಹಿರಿಯ ಮ್ಯಾನೇಜರ್​ಗಳು ಪೊಲೀಸರಿಗೆ ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರಿಗೆ ಆರಂಭದಲ್ಲಿ ಈ ಪ್ರಕರಣ ಕಗ್ಗಂಟಾಗಿದ್ದರೂ ಕೊನೆಯಲ್ಲಿ ಅಚ್ಚರಿ ಎಂಬ ರೀತಿಯಲ್ಲಿ ಬಗೆಹರಿದಿದೆ.

  ತನಿಖೆ ಆರಂಭಿಸಿದ ಪೊಲೀಸರು ಕ್ಯಾಶ್​ ರೂಮ್​ಗೆ ಪ್ರವೇಶ ಇರುವ 36 ಉದ್ಯೋಗಿಗಳ ಪೈಕಿ ಒಬ್ಬನನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ಎದುರಿಗೆ ಕರೆಸಿ ವಿಚಾರಣೆ ನಡೆಸಿದ್ದರು. ಆದರೆ ಘಟನೆ ನಡೆದ ದಿನ ಅಂದರೆ ಜುಲೈ 10ರಂದು ಇನ್ನೊಬ್ಬ ಉದ್ಯೋಗಿ ವೀರ್ ಶಂಕರ್ ರಜೆಯಲ್ಲಿದ್ದ ಕಾರಣ ಆತನನನ್ನು ವಿಚಾರಣೆಯಿಂದ ಹೊರಗಿಡಲಾಗಿತ್ತು.

  ಇದನ್ನೂ ಓದಿ: ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

  ಹೀಗೆ ಆ ದಿನ ಕೆಲಸದ ಮೇಲಿದ್ದ ಎಲ್ಲ ಉದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಿದ್ದರೂ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮತ್ತೊಂದೆಡೆ ಲಾಕರ್​ ಕೀಗಳ ಪೈಕಿ ಒಂದು ಡೂಪ್ಲಿಕೇಟ್​ ಕೀ ಜೂ. 29ರಿಂದ ಕಾಣೆಯಾಗಿರುವುದು ಗೊತ್ತಾಗಿತ್ತು. ಇದಾದ ಮೇಲೆ ಪ್ರಕರಣ ಇನ್ನಷ್ಟು ಸಂಕೀರ್ಣ ಎನಿಸಿತ್ತು. ಮುಂದೇನು ಎಂದು ಗೊತ್ತಾಗದ ಪೊಲೀಸರು ನಿಮಗೆ ಯಾರ ಮೇಲಾದರೂ ಅನುಮಾನ ಇದೆಯೇ ಎಂದು ನಂತರದ ವಿಚಾರಣೆಯಲ್ಲಿ ಉದ್ಯೋಗಿಗಳನ್ನು ಕೇಳಿದ್ದರು.

  ಆಗ ಫ್ಲೋರ್ ಮ್ಯಾನೇಜರ್​ ದಿಲೀಪ್ ಎಂಬಾತನತ್ತ ಕೆಲವರು ಬೊಟ್ಟು ಮಾಡಿ ತೋರಿದ್ದರು. ಆದರೆ ಆತನ ಮೇಲೆ ಅನುಮಾನ ಪಡುವಂಥ ಯಾವುದೇ ಅಂಶಗಳು ಕಂಡುಬಂದಿಲ್ಲ. ನಂತರ ದಿಲೀಪ್​ ಮೇಲೆ ಅನುಮಾನ ಪಡಲು ಕಾರಣ ಏನು ಎಂಬುದನ್ನು ಕೇಳಿದಾಗ ಅಂಥದ್ದೊಂದು ಅನುಮಾನ ಮೂಡುವಂಥ ಹೇಳಿಕೆಗಳನ್ನು ವೀರ್ ಶಂಕರ್ ಹಬ್ಬಿಸಿದ್ದ ಎಂಬುದು ತಿಳಿದುಬಂದಿತ್ತು. ಅದಾಗ್ಯೂ ವೀರ್​ ಶಂಕರ್ ಮೇಲೆ ಅಂಥ ಅನುಮಾನ ಮೂಡಿರಲಿಲ್ಲ.

  ಇದನ್ನೂ ಓದಿ: ಕಂಪನಿ ಎಂಡಿ, ಸಿಇಒ ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಕೊಂದ ಮಾಜಿ ಉದ್ಯೋಗಿ!

  ಈ ಮಧ್ಯೆ ಪೊಲೀಸರ ಇನ್ನೊಂದು ತಂಡ ಸಿಸಿಟಿವಿ ಕ್ಲಿಪ್ಪಿಂಗ್​ಗಳನ್ನು ಪರಿಶೀಲಿಸುತ್ತಿದ್ದಾಗ ಒಬ್ಬಳು ಮಹಿಳೆ ಶಾಪಿಂಗ್ ಮಾರ್ಟ್​ಗೆ ಬಂದು ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದುದು ಕಂಡುಬಂದಿತ್ತು. ಉದ್ದ ಕೂದಲಿನ ಆಕೆ ಜೀನ್ಸ್​ ಧರಿಸಿದ್ದು, ದುಪ್ಪಟ್ಟು ತೊಟ್ಟು, ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದಳು. ಆಕೆಯನ್ನು ಸಿಸಿಟಿವಿ ಕ್ಲಿಪ್ಪಿಂಗ್​ನಲ್ಲಿ ಇನ್ನಷ್ಟು ಸೂಕ್ಷ್ಮವಾಗಿ ಪರಿಶೀಲಿಸಿದ ಪೊಲೀಸರಿಗೆ ಆಕೆ ಪುರುಷರು ಧರಿಸುವಂಥ ಸ್ಲಿಪ್ಪರ್ ಹಾಕಿಕೊಂಡಿರುವುದು ಕಂಡುಬಂದಿತ್ತು. ಆಗ ಪೊಲೀಸರು ಮತ್ತೆ ಎಲ್ಲ ಉದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ವೀರ್ ಶಂಕರ್ ಆ ಥರದ ಸ್ಲಿಪ್ಪರ್ ಧರಿಸುತ್ತಿದ್ದ ಎಂಬುದು ತಿಳಿದುಬಂದಿತ್ತು.

  ಇದನ್ನೂ ಓದಿ: ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

  ಬಳಿಕ ಪೊಲೀಸರು ವೀರ್ ಶಂಕರ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಆಗ ಆತ ಜೂನ್ 29ರಂದು ಲಾಕರ್​ನ ಡೂಪ್ಲಿಕೇಟ್​ ಕೀ ಕದ್ದಿದ್ದನ್ನು ಹೇಳಿಕೊಂಡ. ನಂತರ ಜುಲೈ 9ರಂದು ಅನಾರೋಗ್ಯ ಎಂದು ಹೇಳಿ ಹೋಗಿದ್ದನ್ನೂ ತಿಳಿಸಿದ. ಅದಾದ ಮೇಲೆ ಜುಲೈ 10ರಂದು ವಿಗ್ ಹಾಕಿಕೊಂಡು ಮಹಿಳೆಯಂತೆ ಕಾಣಿಸುವ ಉಡುಪು ಧರಿಸಿ ಮಾರ್ಟ್​ಗೆ ಬಂದಿದ್ದನ್ನು ಕೂಡ ಹೇಳಿದ. ನಂತರ ಯಾರೂ ಇಲ್ಲದ ಸಮಯ ನೋಡಿ ಕ್ಯಾಶ್​ ರೂಮ್​ಗೆ ತೆರಳಿ, 22 ಲಕ್ಷ ನಗದು ಲಪಟಾಯಿಸಿದ್ದನ್ನು, ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದರಿಂದ ಅಲ್ಲಿನ ಭದ್ರತೆ ಹಾಗೂ ವ್ಯವಸ್ಥೆ ಕುರಿತು ತಿಳಿದು ಕಳವು ಮಾಡಿದ್ದನ್ನು ಒಪ್ಪಿಕೊಂಡು, ಕೊನೆಗೂ ಸಿಕ್ಕಿಬಿದ್ದಿದ್ದಾನೆ. –ಏಜೆನ್ಸೀಸ್

  ಈ ದಿನಾಂಕದೊಳಗೆ ಗೃಹಜ್ಯೋತಿಗೆ ನೋಂದಾಯಿಸಿಕೊಂಡಿದ್ದರೆ ಮಾತ್ರ ಆಗಸ್ಟ್​ನಲ್ಲಿನ ವಿದ್ಯುತ್ ಬಿಲ್​ ಶೂನ್ಯ; ವಿವರ ಇಲ್ಲಿದೆ…

  ಅಂತ್ಯಸಂಸ್ಕಾರದ ಬಳಿಕ ವಾಗ್ವಾದ: ಆಕೆಯ ಸಾವಿಗೆ ಕಾರಣ ಹೊಟ್ಟೆನೋವೋ, ಆತನೋ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts