ಕೇರಳಕ್ಕೆ 175 ಟನ್​ ಪರಿಹಾರ ಸಾಮಗ್ರಿ ತಲುಪಿಸಲಿರುವ ಎಮಿರೇಟ್ಸ್​ ಏರ್​ಲೈನ್ಸ್​

ದುಬೈ: ಯುನೈಟೆಡ್​ ಅರಬ್​ ಎಮಿರೇಟ್ಸ್​ನ ಎಮಿರೇಟ್ಸ್​ ಏರ್​ಲೈನ್ಸ್​ ಸಂಸ್ಥೆ ದಾನಿಗಳು ನೀಡಿರುವ 175 ಟನ್​ ಪರಿಹಾರ ಸಾಮಗ್ರಿಯನ್ನು ನೆರೆಪೀಡಿತ ಕೇರಳಕ್ಕೆ ತಲುಪಿಸಲಿದೆ.

ಎಮಿರೇಟ್ಸ್​ ಏರ್​ಲೈನ್ಸ್​ ಸಂಸ್ಥೆ ದುಬೈನಿಂದ ಕೇರಳದ ತಿರುವನಂತಪುರಂಗೆ ಪರಿಹಾರ ಸಾಮಗ್ರಿಯನ್ನು ತಲುಪಿಸಲಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಮಿರೇಟ್ಸ್​ ಏರ್​ಲೈನ್ಸ್​ ಯುಎಇಯ ಉದ್ಯಮಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ನೀಡಿರುವ 175 ಟನ್​ ಪರಿಹಾರ ಸಾಮಗ್ರಿಗಳನ್ನು ಎಮಿರೇಟ್ಸ್​ ಸ್ಕೈ ಕಾರ್ಗೋ ಕೇರಳಕ್ಕೆ ತಲುಪಿಸಲಿದೆ ಎಂದು ತಿಳಿಸಿದೆ.

ಲೈಫ್​ ಸೇವಿಂಗ್​ ಬೋಟ್ಸ್​, ಬ್ಲಾಂಕೆಟ್​ಗಳು, ಒಣ ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ನೆರೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುವುದು ಎಂದು ಏರ್​ಲೈನ್ಸ್​ ಸಂಸ್ಥೆ ತಿಳಿಸಿದೆ. (ಏಜೆನ್ಸೀಸ್​)