ಮಹಿಳೆ ತಲೆಯಲ್ಲಿ ಹೇನು! ತುರ್ತು ಭೂಸ್ಪರ್ಶ ಮಾಡಿದ ವಿಮಾನ

flight

ಅಮೆರಿಕಾ: ಅಮೆರಿಕನ್ ಏರ್‌ಲೈನ್ಸ್ ಮಹಿಳೆ ತಲೆಯಲ್ಲ ಹೇನಿದೆ ಅನ್ನೋ ಕಾರಣಕ್ಕೆ ಲಾಸ್ ಎಂಜಲ್ಸ್‌ನಿಂದ ನ್ಯೂಯಾರ್ಕ್‌ಗೆ ಪ್ರಯಾಣಿಸುತ್ತಿದ್ದ ವಿಮಾನ ಏಕಾಏಕಿ ಫೋನಿಕ್ಸ್‌ನಲ್ಲಿ ಲ್ಯಾಂಡ್ ಮಾಡಲಾಗಿದೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ ಚರ್ಚೆ ಆಗುತ್ತಿದೆ.

ಲಾಸ್ ಎಂಜಲ್ಸ್‌ನಿಂದ ನ್ಯೂಯಾರ್ಕ್‌ಗೆ ಪ್ರಯಾಣಿಸುತ್ತಿದ್ದ ವಿಮಾನವಾಗಿತ್ತು. ಲಾಸ್ ಎಂಜಲ್ಸ್‌ನಿಂದ ನ್ಯೂಯಾರ್ಕ್‌ಗೆ ಸರಿಸುಮಾರು 6 ಗಂಟೆಗಳ ಪ್ರಯಾಣ. ಈ ಸುದೀರ್ಘ ಪ್ರಯಾಣದ ನಡುವೆ ಏಕಾಏಕಿ ಫ್ಲೈಟ್ ಮಾರ್ಗ ಬದಲಾಗಿದೆ. ತುರ್ತು ವಿಮಾನ ಭೂಸ್ಪರ್ಶವಾಗಿದೆ. ಹಲವರಿಗೆ ಏನಾಗಿದೆ ಅನ್ನೋದೇ ಗೊತ್ತಿಲ್ಲ. ಕೆಲವರಿಗೆ ಭೂಸ್ಪರ್ಶ ಯಾಕೆ ಅನ್ನೋ ಗೊಂದಲ. ವಿಮಾನದಲ್ಲಿರುವ ಎಲ್ಲಾ ಪ್ರಯಾಣಿಕರು ಆರೋಗ್ಯವಾಗಿದ್ದಾರೆ. ಯಾರೂ ಅಸ್ವಸ್ಥರಾಗಿಲ್ಲ, ಯಾರಿಗೂ ತುರ್ತು ಚಿಕಿತ್ಸೆಯ ಅವಶ್ಯಕತೆ ಬಿದ್ದಿಲ್ಲ. ಹೀಗಿದ್ದರೂ ಭೂಸ್ಪರ್ಶವೇಕೆ ಅನ್ನೋದು ಹಲವು ಪ್ರಯಾಣಿಕರ ಅನುಮಾನವಾಗಿತ್ತು.

ವಿಮಾನ ಫೋನಿಕ್ಸ್‌ನಲ್ಲಿ ಲ್ಯಾಂಡ್ ಆಗುತ್ತಿದ್ದ ಮಹಿಳೆಯೊಬ್ಬರು ಎಲ್ಲರಿಗಿಂತ ಬೇಗ ಇಳಿಯಲು ಧಡಧಡ ಎಂದು ವಿಮಾನದ ಮುಂಭಾಗಕ್ಕೆ ತೆರಳಿದ್ದಾರೆ.  ಕೆಲ ಹೊತ್ತಲ್ಲಿ ವಿಮಾನದ ಪ್ರಯಾಣಿಕರು ಗದ್ದಲ ಆರಂಭಿಸಿದ್ದಾರೆ. ಇಲ್ಲಿ ಯಾಕೆ ಲ್ಯಾಂಡಿಂಗ್ ಮಾಡಿದ್ದೀರಿ. ನಮ್ಮ ಸಮಯ ವ್ಯರ್ಥವಾಗಿದೆ. ಹೊಟೆಲ್ ಬುಕಿಂಗ್ ಆಗಿದೆ. ಕಚೇರಿ ಸಭೆ ಇದೆ. ಹೀಗೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳಿ ಗದ್ದಲ ಆರಂಭಿಸಿದ್ದಾರೆ. ಈ ವೇಳೆ ವಿಮಾನವ ಸಂಸ್ಥೆ ತುರ್ತು ಆರೋಗ್ಯದ ಕಾರಣಕ್ಕಾಗಿ ಭೂಸ್ಪರ್ಶ ಮಾಡಲಾಗಿದೆ. ಇದಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದಷ್ಟೇ ಮಾಹಿತಿ ನೀಡಿದ್ದಾರೆ.

ಈ ತುರ್ತು ಸ್ಥಿತಿಗೆ ಕಾರಣಾಗಿತ್ತು ಒಂದು ಹೇನು. ಮಹಿಳೆ ತಲೆಯಲ್ಲಿ ಹೇನು ಹರಿದಾಡುತ್ತಿರುವುದನ್ನು ಪಕ್ಕದಲ್ಲಿ ಕುಳಿತ ಪ್ರಯಾಣಿಕ ಗಮನಿಸಿದ್ದಾನೆ. ಸಹ ಪ್ರಯಾಣಿಕ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ತಲೆ ಮೇಲೆ ಹೇನು ಹರಿದಾಡುತ್ತಿದೆ ಎಂದು ದೂರು ನೀಡಿದ ಬೆನ್ನಲ್ಲೇ ವಿಮಾನ ಲ್ಯಾಂಡ್ ಆಗಿದೆ. ಆದರೆ ಈ ಹೇನಿನಿಂದ ಪಕ್ಕದಲ್ಲಿರುವ ಪ್ರಯಾಣಿಕರಿಗೆ  ಆಗುತ್ತಿರುವ ಸಮಸ್ಯೆ ಏನು? ಎಂಬುದು ಮಾತ್ರ ತಿಳಿದು ಬಂದಿಲ್ಲ.

ತಲೆಯಲ್ಲಿದ್ದ ಹೇನು ವಿಮಾನವನ್ನೇ ಭೂಸ್ಪರ್ಶ ಮಾಡುವ ಸಮಸ್ಯೆ ಎಂದು ತುರ್ತಾಗಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಒಂದು ಹೇನು ವಿಚಾರವನ್ನು ಕ್ಯಾಪ್ಟನ್ ಕೂಡ ಗಂಭೀರವಾಗಿ ಪರಿಗಣಿಸಿದ್ದಾರೆ. ಬಳಿಕ ಮಾರ್ಗ ಬದಲಾಯಿಸಿ, ಲ್ಯಾಂಡಿಂಗ್ ಮಾಡಿದ್ದಾರೆ ಎನ್ನಲಾಗಿದೆ.

ವಯನಾಡು ಭೂಕುಸಿತ: 6 ದಿನಗಳ ನಂತ್ರ ಮನೆ ಯಜಮಾನಿ ಬಳಿ ಬಂದು ಕಣ್ಣೀರಿಟ್ಟ ಶ್ವಾನ

Share This Article

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…