More

  ಸಾರ್ವಜನಿಕರ ಮುಂದೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಬಿಗ್ ಬಾಸ್ ಒಟಿಟಿ ವಿಜೇತ!

  ರಾಜಸ್ಥಾನ: ಜೈಪುರದ ಹೆಸರಾಂತ ರೆಸ್ಟೋರೆಂಟ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ ಬಿಗ್ ಬಾಸ್ ಒಟಿಟಿ ಸೀಸನ್​ ವಿಜೇತನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ದೃಶ್ಯ ನೋಡಿದ ನೆಟ್ಟಿಗರು ಮಿಶ್ರ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.

  ಇದನ್ನೂ ಓದಿ: ಹಲ್ದ್ವಾನಿ ಹಿಂಸಾಚಾರ: 30 ಮಂದಿ ಬಂಧನ! ಕೇಂದ್ರದಿಂದ ಹೆಚ್ಚುವರಿ ಪಡೆಗಳು ಬೇಕೆಂದ ಉತ್ತರಾಖಂಡ ಸರ್ಕಾರ

  ಭಾನುವಾರ (ಫೆಬ್ರವರಿ 11) ಜೈಪುರದ ರೆಸ್ಟೋರೆಂಟ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಬಿಗ್ ಬಾಸ್ ಒಟಿಟಿ 2 ವಿಜೇತ ಮತ್ತು ಖ್ಯಾತ ಯೂಟ್ಯೂಬರ್ ಆದ ಎಲ್ವಿಶ್ ಯಾದವ್ ಮತ್ತೊಮ್ಮೆ ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಘಾತಕಾರಿ ಘಟನೆಯ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ದೃಶ್ಯದಲ್ಲಿ ಎಲ್ವಿಶ್ ರೆಸ್ಟೋರೆಂಟ್‌ನಲ್ಲಿ ಇತರರೊಂದಿಗೆ ಜಟಾಪಟಿ ನಡೆಸುತ್ತಿರುವುದು ಕಂಡುಬಂದಿದೆ.

  ಇಬ್ಬರ ನಡುವಿನ ತೀವ್ರ ವಾಗ್ವಾದಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಆದರೆ, ಹಲ್ಲೆಗೊಳಗಾದ ವ್ಯಕ್ತಿ ಎಲ್ವಿಶ್ ಅವರ ತಾಯಿಯನ್ನು ನಿಂದಿಸಿದ ಕಾರಣಕ್ಕೆ ಎಲ್ವಿಶ್ ಸಾರ್ವಜನಿಕರ ಮುಂದೆಯೇ ಕಪಾಳಮೋಕ್ಷ ಮಾಡಿದರು ಎನ್ನಲಾಗಿದೆ. ಘಟನೆಯ ಬೆನ್ನಲ್ಲೇ ಸ್ನೇಹಿತರ ಜತೆಗೆ ರೆಸ್ಟೋರೆಂಟ್‌ನಿಂದ ಹೊರಬಂದ ಯುಟ್ಯೂಬರ್, ತಾನು ಮಾಡಿದ್ದು ಸರಿ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ.

  ಇದನ್ನೂ ಓದಿ: “ಬೆಳ್ಳುಳ್ಳಿ ಕಬಾಬ್” ಟ್ರೆಂಡ್ ಬೆನ್ನಲ್ಲೇ ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ; ಮೊಯೆ..ಮೊಯೆ ಎಂದ ಗ್ರಾಹಕರು

  “ನಮ್ಮೊಂದಿಗೆ ಪೊಲೀಸರು ಮತ್ತು ಕಮಾಂಡೋಗಳು ಇದ್ದರು. ನಾವು ಯಾವುದೇ ತಪ್ಪು ಮಾಡಿಲ್ಲ. ಇದು ವೈಯಕ್ತಿಕವಾಗಿದೆ. ಅವರು ನನ್ನ ವಿರುದ್ಧ ವೈಯಕ್ತಿಕವಾಗಿ ಮಾತನಾಡುತ್ತಿದ್ದರು. ಈ ಕಾರಣದಿಂದ ಕೋಪಗೊಂಡ ನಾನು ಅವರಿಗೆ ಕಪಾಳಮೋಕ್ಷ ಮಾಡಿದ್ದೇನೆ. ಇದರ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ” ಎಂದು ಹೇಳಿದ್ದಾರೆ,(ಏಜೆನ್ಸೀಸ್). 

  ‘ಓಂ’ ಚಿತ್ರದಲ್ಲಿರುವ ಈ ಇಬ್ಬರು ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ? ಸ್ಟಾರ್​ ನಟನ ಮಕ್ಕಳಿವರು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts