ಇನ್ನೇನಿದ್ರೂ ಕಾನೂನು ಸಂಘರ್ಷ: ಮುಗಿದ ದೋಸ್ತಿ ಪಾದಯಾತ್ರೆ | 2ನೇ ಹಂತದ ಹೋರಾಟಕ್ಕೆ ಶೀಘ್ರ ಚಾಲನೆ

bjp

ವಿಜಯವಾಣಿ ಸುದ್ದಿಜಾಲ ಮೈಸೂರು

ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬಂದಿರುವ ಸರಣಿ 4 ಹಗರಣ, ಭ್ರಷ್ಟಾಚಾರದ ಆರೋಪಗಳ ವಿರುದ್ಧ ದನಿ ಎತ್ತಿ ಬೆಂಗಳೂರಿನಿಂದ ಮೈಸೂರಿವರೆಗೆ ಹಮ್ಮಿಕೊಂಡಿದ್ದ ದೋಸ್ತಿ ಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರ ಒಂದು ವಾರದ ಪಾದಯಾತ್ರೆ ಹೋರಾಟಕ್ಕೆ ತೆರೆಬಿದ್ದಿದೆ. ಉಭಯ ಪಕ್ಷಗಳ ಒಗ್ಗಟ್ಟಿನ ಕಹಳೆಗೆ ಸಾಕ್ಷಿಯಾದ ಸಮಾರೋಪ ವೇದಿಕೆಯಲ್ಲಿ ಸರ್ಕಾರದ ವಿರುದ್ಧದ ನಮ್ಮ ಹೋರಾಟ ಅಂತ್ಯವಲ್ಲ, ಆರಂಭ ಎಂಬ ಪರೋಕ್ಷ ಸಂದೇಶ ರವಾನೆಯಾಗಿದೆ. ಆ ಮೂಲಕ ಕಾನೂನು ಸಂಘರ್ಷ ಚಾಲು ಆಗುವುದಕ್ಕೆ ಭೂಮಿಕೆ ಸಿದ್ಧವಾದಂತಾಗಿದೆ. ರಾಜ್ಯದಲ್ಲಿ ಇತಿಹಾಸದ ಪುಟ ಕೆದಕಿದಾಗ ರಾಜಕೀಯ ಪಕ್ಷಗಳನ್ನು ಅಧಿಕಾರದ ಗದ್ದುಗೆ ಮೇಲೆ ಕೂಡಿಸುವಲ್ಲಿ ಪಾದಯಾತ್ರೆ ನಿರ್ಣಾಯಕ ಪಾತ್ರವಹಿಸಿವೆ.

ಅದೇ ರೀತಿ ನಿಚ್ಚಳ ಜನಾದೇಶ ಪಡೆದು ಅಧಿಕಾರಕ್ಕೇರಿದ 15 ತಿಂಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಪ್ರತಿಪಕ್ಷಗಳು ಪಾದಯಾತ್ರೆಯ ಬಿಸಿಮುಟ್ಟಿಸಿವೆ. ಮುಡಾ ನಿವೇಶನಗಳ ಹಂಚಿಕೆ ಅಕ್ರಮ ಹಾಗೂ ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಸಿಡಿದೆದ್ದು ದೋಸ್ತಿ ಪಕ್ಷಗಳು ಹಮ್ಮಿಕೊಂಡಿದ್ದ ‘ಮೈಸೂರು ಚಲೋ’ ಜಂಟಿ ಪಾದಯಾತ್ರೆ ‘ನಿಚ್ಚಳ ಜನಾಭಿಪ್ರಾಯ’ ರೂಪಿಸಿದ್ದು, ಬಿ.ವೈ.ವಿಜಯೇಂದ್ರ ಸಾರಥ್ಯದ ಹೋರಾಟಕ್ಕೆ ಚೈತನ್ಯ ತುಂಬುವ ಜತೆಯಲ್ಲೇ ಮತ್ತೊಂದು ಹೆಜ್ಜೆ ಇಡುವುದಕ್ಕೂ ಸ್ಪೂರ್ತಿಯಾಗಿದೆ. ಶನಿವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮೂಲೋತ್ಪಾಟನೆಗಾಗಿ ನಡೆಸಲಾದ ಈ ಚಳುವಳಿ ಇಲ್ಲಿಗೆ ನಿಲ್ಲುವುದಿಲ್ಲ ಎಂಬ ಶಪಥ ಹೊರಹೊಮ್ಮಿತು.

5000 ನುಂಗಿದ ಆ 14 ನಿವೇಶನ!: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಕಟಿಸಿದ ‘5000 ನುಂಗಿದ ಆ……14 ನಿವೇಶನಗಳು !’ ಶೀರ್ಷಿಕೆಯಡಿ ರಾಜ್ಯ ಸರ್ಕಾರದ ವಿರುದ್ಧ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಯವರ ಬಗ್ಗೆ ಸಿದ್ದರಾಮಯ್ಯ ಜನತಾದಳದಲ್ಲಿದ್ದಾಗ ಆಡಿದ ಮಾತುಗಳನ್ನು ದೋಸ್ತಿ ನಾಯಕರು ನೆನಪಿಸಿದರು. ಕಾಂಗ್ರೆಸ್ ನಾಯಕರು ಈ ಹಿಂದೆ ಮಾಡಿದ ಭಾಷಣಗಳ ವಿಡಿಯೋ ಪ್ರದರ್ಶಿಸಿ ಕಾಂಗ್ರೆಸ್​ಗೆ ತಿರುಗೇಟು ನೀಡಲಾಯ್ತು. ಇದೇ ಮೈದಾನದಲ್ಲಿ ಶುಕ್ರವಾರ ನಡೆದ ಜನಾಂದೋಲನ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಆಡಿದ್ದ ಮಾತುಗಳಿಗೆ ಬಿಜೆಪಿ-ಜೆಡಿಎಸ್ ನಾಯಕರು ಆವೇಶಭರಿತರಾಗಿ ಪ್ರತ್ಯುತ್ತರಿಸಿದರು. ಪ್ರತಿಪಕ್ಷಗಳ ಪಾದಯಾತ್ರೆಗೆ ನಡುಗಿದ ಸಿದ್ದರಾಮಯ್ಯ ತಮ್ಮ ಅಕ್ರಮ ಮುಚ್ಚಿಕೊಳ್ಳಲು ಜಾತಿಯನ್ನು ಕವಚವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ವಾಗ್ದಾಳಿ ಮಾಡಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ, ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ,ಪ್ರಮುಖ ನಾಯಕರು ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದರು.

ಚಾಟಿ ಬೀಸಿದ ಆರ್.ಅಶೋಕ್: 3-4 ಸಾವಿರ ಕೋಟಿಯ ಮುಡಾ ಹಗರಣದ ವಿವರ ಜನರಿಗೆ ತಲುಪಬೇಕಿದೆ. ಅದಕ್ಕಾಗಿ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ನಡೆಸಿದ ದಂಡಯಾತ್ರೆ ಇದು. 5 ಲಕ್ಷಕ್ಕೆ ದಲಿತರಿಂದ ಖರೀದಿಸಿದ ಭೂಮಿಗೆ ಬದಲಾಗಿ ಸಿಕ್ಕಿದ 14 ನಿವೇಶನಕ್ಕೆ ಸಿದ್ದರಾಮಯ್ಯನವರು 62 ಕೋಟಿ ರೂ. ಕೇಳುತ್ತಿದ್ದಾರೆ. ಮೊದಲು ಸಿಎಂಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಚಾಟಿ ಬೀಸಿದರು.

ಬಿವೈವಿ ರೋಷಾವೇಶ: ಭ್ರಷ್ಟಾಚಾರದಲ್ಲಿ ತೊಡಗಿರá-ವ ಸಿದ್ದರಾಮಯ್ಯ ಮುಡಾ, ವಾಲ್ಮೀಕಿ ಸೇರಿ ಇನ್ನಿತರ ಹಗರಣವನ್ನು ತನಿಖೆ ನಡೆಸá-ವ ಬದಲು ಬಿಜೆಪಿ-ಜೆಡಿಎಸ್ ಕಾಲದ ಹಗರಣ ಕುರಿತು ತನಿಖೆ ನಡೆಸá-ವುದಾಗಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ತನಿಖೆ ನಡೆಸಲಿ. ಅದಕ್ಕೂ ಮá-ನ್ನ ಮುಡಾ, ವಾಲ್ಮೀಕಿ ಹಗರಣದ ತನಿಖೆ ಮಾಡಿಸಲಿ ಎಂದು ಬಿ.ವೈ.ವಿಜಯೇಂದ್ರ ರೋಷಾವೇಶದಲ್ಲಿ ಅಬ್ಬರಿಸಿದರು.

ಎಚ್​ಡಿಕೆ ಕಿಡಿ: ಸಿದ್ದರಾಮಯ್ಯ ಬರೀ ಹಿಂದುಳಿದ ವರ್ಗಗಳ ಸಿಎಂ ಅಲ್ಲ. ಆರೂವರೆ ಕೋಟಿ ಜನರ ಸಿಎಂ. ನನಗೆ ಕಪ್ಪುಚá-ಕ್ಕೆ ಇಲ್ಲ ಎನ್ನುತ್ತಾರೆ. ಆದರೆ ಸಿದ್ದರಾಮಯ್ಯ ಚಡ್ಡಿಯೆಲ್ಲಾ ಕಪ್ಪಾಗಿದೆ. ಸಿದ್ದರಾಮಯ್ಯ ಅವರೇ ಅರ್ಕಾವತಿ ಹಗರಣ, ಕೆಂಪಣ್ಣ ಆಯೋಗದ ವರದಿ ತೆಗೆಯಿರಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಯಾತ್ರೆ ಮುಖ್ಯಾಂಶ

* ಬೆಂಗಳೂರಿನಿಂದ ಮೈಸೂರಿಗೆ 130 ಕಿ.ಮೀ. ನಡಿಗೆ

*7 ದಿನ, ನಗರ- ಪಟ್ಟಣಗಳಲ್ಲಿ 7

ಬಹಿರಂಗ ಸಭೆಗಳು

* ಪಥದಲ್ಲಿ ಬೀದಿಬದಿ ಹರಟೆ, ಗುಂಪು ಸಮಾಲೋಚನೆ

* ಹಾದಿಯಲ್ಲಿ ರಾರಾಜಿಸಿದ ಫ್ಲೆಕ್ಸ್, ಬಾವುಟಗಳು

* ಉಭಯ ಪಕ್ಷಗಳ ನಾಯಕರಿಗೆ ಪುಷ್ಪವೃಷ್ಟಿ

* ಜೋಡೆತ್ತು ಗಾಡಿಗಳೊಂದಿಗೆ ಬಾರಕೋಲು ಚಳವಳಿ

*ಉಪಾಹಾರ, ಊಟ ಅಚ್ಚುಕಟ್ಟು, ಸ್ವಚ್ಛತೆಗೂ ಆದ್ಯತೆ

ಸಭೆಯಲ್ಲಿ ಮಾರ್ಧನಿಸಿದ್ದು

| ಕಾಂಗ್ರೆಸ್ ವಿರá-ದ್ಧ ಬಿಜೆಪಿ-ಜೆಡಿಎಸ್ ನಡೆಸಿದ ಪಾದಯಾತ್ರೆ ಬಳಿಕ ಸಿದ್ದರಾಮಯ್ಯ 14 ನಿವೇಶನ ವಾಪಸ್ ಮಾಡá-ತ್ತೇನೆ ಎಂದಿದ್ದಾರೆ. ಆದರೆ ಕಳ್ಳನನ್ನು ಬಿಡಲು ಆಗá-ತ್ತದೆಯೇ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.

| ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಳಿಯ ಉದ್ಯಮಿ ಸಿದ್ದಾರ್ಥ ಸಾವಿಗೆ ಕಾರಣವೇನು ಎಂಬುದನ್ನು ಡಿಸಿಎಂ ಡಿ.ಕೆ.ಶಿವಕá-ಮಾರ್ ಸಾರ್ವಜನಿಕರ ಮುಂದೆ ಬಹಿರಂಗಪಡಿಸಲಿ ಎಂದು ಎಚ್​ಡಿಕೆ ಸವಾಲು ಹಾಕಿದರು.

| ತಾವು ದಲಿತರ ಪರ ಎನ್ನುವ ಸಿದ್ದರಾಮಯ್ಯ ಅವರು ದಲಿತರಿಗೇ ಅನ್ಯಾಯ ಮಾಡಿದ್ದಾರೆ. ಅವರು ದೇವೇಗೌಡ, ಯಡಿಯೂರಪ್ಪ, ಕುಮಾರಸ್ವಾಮಿಯವರನ್ನು ಟೀಕಿಸá-ತ್ತಿರá-ವುದು ಶೋಭೆ ತರಲ್ಲವೆಂದು ನಿಖಿಲ್ ಕುಮಾರಸ್ವಾಮಿ ಕುಟುಕಿದರು.

| ಕಾಂಗ್ರೆಸ್ ಸಂಪೂರ್ಣವಾಗಿ ದಲಿತರ ಮಾರಣಹೋಮ ಮಾಡಿದೆ. ದಲಿತರ ಮುಂದೆ ಪ್ರೀತಿನುಡಿ, ಹಿಂಬದಿಯಿಂದ ಚಾಕು ಹೊಡಿ ಎಂಬುದು ಸಿದ್ದರಾಮಯ್ಯನವರ ನಡೆ ಎಂದು ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದರು.

| ವಿಧಾನಸಭೆಯಲ್ಲಿ ಅವತ್ತು ಯಡಿಯೂರಪ್ಪ ನನ್ನನ್ನು ನಾಗರಹಾವು ಎಂದರು. ಹೌದು, ನಾನು ಲೂಟಿ ಮಾಡá-ವ ಡಿ.ಕೆ.ಶಿವಕುಮಾರ್ ಪಾಲಿಗೆ ನಾಗರಹಾವೇ ಎಂದು ಎಚ್​ಡಿಕೆ ಹರಿಹಾಯ್ದರು.

| ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ನೀಡದೆ ರಣಹೇಡಿಯಾಗಿ ಓಡಿ ಹೋದ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ನಮ್ಮ ವಿರá-ದ್ಧದ ದಾಖಲೆಗಳನ್ನು ಬಿಚ್ಚಿಡಲಿ ಎಂದು ವಿಜಯೇಂದ್ರ ಸವಾಲೆಸೆದರು.

ಸುಳ್ಳು ಆರೋಪಗಳಿಗೆ ಹೆದರುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ರಾಜಕೀಯ ಲಾಭಕ್ಕಾಗಿ ಬಿಜೆಪಿ- ಜೆಡಿಎಸ್​ನವರು ಮಾಡುತ್ತಿರುವ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ ಹಾಗೂ ಈ ಆರೋಪಗಳ ವಿರುದ್ಧ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಶನಿವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನಿಗೆ ಕಪ್ಪು ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಅವರ ಆರೋಪಗಳು ಸುಳ್ಳು ಎಂದು ಜನರಿಗೆ ಮನವರಿಕೆ ಮಾಡಲು ಜನಾಂದೋಲನ ಮಾಡಲಾಗಿದೆ ಎಂದರು.

ಬಂಡೆಯನ್ನು ನಂಬಿ ನಾನು ಕೆಟ್ಟಿದ್ದೆ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

Share This Article

ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿ​ಕ್ಸ್​​​​​ | Health Tips

ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…

ಊಟದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ; ಮಾಹಿತಿ ತಿಳಿದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಿ | Health Tips

ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. WHO ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.…

ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker

Pressure Cooker : ಪ್ರೆಶರ್​ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…