ಬೆಳಗಾವಿ:/ವಿವಿಧಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಕೊಥಳಿ ಗ್ರಾಮದ ಆಚಾರ್ಯ ರತ್ನ ಶ್ರೀ 108 ದೇಶಭೂಷಣ ಮಹಾರಾಜರು ಸಾಕಿದ್ದ ಕುಪ್ಪಾನವಾಡಿ ಆಶ್ರಮದ ಆನೆ ಉಷಾರಾಣಿ ಶನಿವಾರ ಹೃದಯಾಘಾತದಿಂದ ನಿಧನಹೊಂದಿದೆ.
ಚಿಕ್ಕೋಡಿ ತಾಲೂಕಿನ ಕೊಥಳಿಯ ಕುಪ್ಪಾನವಾಡಿ ಶಾಂತಿಗಿರಿ ಟ್ರಸ್ಟ್ ಮತ್ತು ಬೇಡಕಿಹಾಳ ಗ್ರಾಮದ ಉಷಾರಾಣಿ ಹೆಸರಿನ ಆನೆ ತನ್ನ 51 ನೇ ವಯಸ್ಸಿಗೆ ನಿಧನಹೊಂದಿದೆ. ಈ ಆಶ್ರಮಕ್ಕೆ
1971 ರಲ್ಲಿ ಶಿವಮೊಗ್ಗದ ಸಕ್ರೆಬೈಲ್ ನಿಂದ ಕೇವಲ 6 ನೇ ವಯಸ್ಸಿನಲ್ಲಿ ಆನೆಯನ್ನು ತರಲಾಗಿತ್ತು. ಬೇಡಕಿಹಾಳ ಗ್ರಾಮದ ಸಂದೀಪ್ ಪೊಲೀಸ್ ಪಾಟೀಲ್ ಎಂಬುವವರು ತೋಟದಲ್ಲಿ ವಾಸವಿತ್ತು.
ಪ್ರಮುಖವಾಗಿ ಉಷಾರಾಣಿ ಆಣೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದ ಅನೇಕ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿತ್ತು.
ಬೇಡಕಿಹಾಳದ ಶ್ರೀ ಕಲ್ಯಾಣ ಸಿದ್ಧೇಶ್ವರನ ಐತಿಹಾಸಿಕ ದಸರಾ ಹಬ್ಬ, ದೀಪಾವಳಿ ಮತ್ತು ಧೂಳವಡ ಪಲ್ಲಕಿ ಆಚರಣೆ ಸೇರಿದಂತೆ ಜೈನ ಸಮುದಾಯದ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.
ಕೇವಲ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲದೆ ಚಲನಚಿತ್ರ ಹಾಗೂ ಧಾರಾವಾಹಿಯಲ್ಲಿಯೂ ಉಷಾರಾಣಿ ಗುರುತಿಸಿಕೊಂಡಿತ್ತು.