ಸಿನಿಮಾ

ಎಲೈಟ್ ಕ್ಲಬ್, ಎಂಸಿಬಿ ತಂಡ ಪ್ಲೇಆಫ್‌ಗೆ

ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಮೊಟ್ಟಮೊದಲ ಬಾರಿಗೆ ಅರೆಭಾಷಿಕ ಗೌಡ ಜನಾಂಗದವರಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್, ಎಂಸಿಬಿ ತಂಡಗಳು ಪ್ಲೇಆಫ್ ಹಂತಕ್ಕೆ ತಲುಪಿತು.


ಮೊದಲ ಪಂದ್ಯದಲ್ಲಿ ಮಡಿಕೇರಿ ಚಾಂಪಿಯನ್ ಭಾವ(ಎಂಸಿಬಿ) ಮತ್ತು ಕೆಜಿಎಸ್ ಸ್ಟ್ರೈಕರ್ಸ್‌ ತಂಡಗಳ ನಡುವೆ ನಡೆಯಿತು. ಟಾಸ್ ಗೆದ್ದ ಎಂಸಿಬಿ ತಂಡ ಕ್ಷೇತ್ರ ರಕ್ಷಣೆಗೆ ಮುಂದಾಯಿತು. ಮೊದಲು ಬ್ಯಾಟ್ ಮಾಡಿದ ಕೆಜಿಎಸ್ ಸ್ಟ್ರೈಕರ್ಸ್‌ ತಂಡ ನಿಗದಿತ ೧೦ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ೯೨ ರನ್ ಕಲೆ ಹಾಕಿತು. ತಂಡದ ಪರ ನಯನ್ ೧೮ ಎಸೆತದಲ್ಲಿ ೩೨ರನ್ ಕಲೆಹಾಕಿದರು. ಉಳಿದಂತೆ ಜಗನ್ ೨೦, ಶರತ್ ಚೊಕ್ಕಾಡಿ ೧೬, ಪವನ್ ೨೦ ರನ್ ದಾಖಲಿಸಿದರು. ಎಂಸಿಬಿ ಪರ ಹರ್ಷ ಕೊಂಬಾರನ ೨ ಓವರ್‌ನಲ್ಲಿ ೩ ವಿಕೆಟ್ ಕಬಳಿಸಿದರೆ, ಮದನ್ ಯಾಲದಾಳು, ಟಿ.ಕೆ.ಶ್ರೇಯಸ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.


ಗುರಿಬೆನ್ನಟ್ಟಿದ ಎಂಸಿಬಿ ತಂಡ ೯ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ತಂಡದ ಪರ ಮದನ್ ಯಾಲದಾಳು ೧೭, ಮುನಿಶ್ ೧೮, ತಂಡದ ನಾಯಕ ಡಾ.ಕುಶ್ವಂತ್ ಕೋಳಿಬೈಲು ೧೭ ಎಸೆತದಲ್ಲಿ ೭ ಬೌಂಡರಿ ನೆರವಿನೊಂದಿಗೆ ೩೭ರನ್ ದಾಖಲಿಸಿ ತಂಡದ ಗೆಲುವಿಗೆ ಮುಖ್ಯ ಪಾತ್ರ ವಹಿಸಿದರು. ಕೆಜಿಎಸ್ ಸ್ಟ್ರೈಕರ್ಸ್‌ ತಂಡದ ಪರ ಶರತ್, ಪ್ರತೀಕ್ ತಲಾ ಒಂದೊಂದು ವಿಕೆಟ್ ಪಡೆದರು. ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಎಂಸಿಬಿ ತಂಡದ ಹರ್ಷ ಕೊಂಬಾರನ ಪಡೆದುಕೊಂಡರು.


ಎರಡನೇ ಪಂದ್ಯ ಟೀಂ ಭಗವತಿ ಮತ್ತು ಕುಕ್ಕನೂರು ಬುಲ್ಸ್ ತಂಡಗಳ ನಡುವೆ ನಡೆಯಿತು. ಟಾಸ್ ಸೋತ ಟೀಂ ಭಗವತಿ ತಂಡ ನಿಗದಿತ ೧೦ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ೯೪ ರನ್ ಕಲೆ ಹಾಕಿತು. ತಂಡದ ಪರ ರಿಶಿ ಬೋಪಣ್ಣ ೨೦ ಎಸೆತದಲ್ಲಿ ೪ ಸಿಕ್ಸರ್, ೨ ಬೌಂಡರಿ ನೆರವಿನೊಂದಿಗೆ ೪೪ ರನ್ ಕಲೆ ಹಾಕಿದರು. ಜಗತ್ ದಂಬೆಕೋಡಿ ೧೯, ಬಿ.ಡಿ.ವರುಣ್ ರಾಜ್ ೧೧ ರನ್‌ಗಳಿಸಿ ತಂಡದ ಮೊತ್ತ ಏರಿಸಲು ನೆರವಾದರು. ಕುಕ್ಕನೂರು ಬುಲ್ಸ್ ಪರ ಯಶಿನ್ ಬೋಪಣ್ಣ ೨ ಓವರ್‌ನಲ್ಲಿ ೧೩ ರನ್ ನೀಡಿ ೩ ವಿಕೆಟ್ ಪಡೆದರೆ, ಓಂಪ್ರಕಾಶ್ ಉಡುದೋಳಿರ ೨ ವಿಕೆಟ್ ಪಡೆದರು.


ಗುರಿಬೆನ್ನಟ್ಟಿದ ಕುಕ್ಕನೂರು ಬುಲ್ಸ್ ತಂಡ ೭ ವಿಕೆಟ್ ಕಳೆದುಕೊಂಡು ೭೭ರನ್ ದಾಖಲಿಸಲಷ್ಟೇ ಶಕ್ತವಾಗಿ ೧೭ರನ್‌ಗಳ ಅಂತರದಲ್ಲಿ ಸೋಲುಂಡಿತು. ತಂಡದ ಪರ ಜಶ್ವಿತ್ ಪರ್ಲಕೋಟಿ ೧೫, ದೀಪಕ್ ೧೫, ಚೇತನ್ ೧೭ ರನ್ ಕಲೆ ಹಾಕಿದರು. ಟೀಂ ಭಗವತಿ ಪರ ಹರ್ಷಿತ್, ಪ್ರಶಾಂತ್ ಕೆ.ಟಿ, ಜಾನವಿ ಕಟ್ಟೆಮನೆ ತಲಾ ಒಂದೊಂದು ವಿಕೆಟ್ ಪಡೆದುಕೊಂಡರೆ, ತಂಡದ ಹೊಂದಾಣಿಕೆ ಆಟದಿಂದ ೪ ರನೌಟ್ ಮಾಡುವಲ್ಲಿ ಆಟಗಾರರು ಸಫಲರಾದರು. ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಟೀಂ ಭಗವತಿ ತಂಡದ ರಿಶಿ ಬೋಪಣ್ಣ ಪಡೆದುಕೊಂಡರು.


೩ನೇ ಪಂದ್ಯದಲ್ಲಿ ಟಾಸ್ ಸೋತ ಕೆಜಿಎಸ್ ಸ್ಟ್ರೈಕರ್ಸ್‌ ತಂಡ ನಿಗದಿತ ೧೦ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ೭೯ ರನ್ ಕಲೆ ಹಾಕಿತು. ತಂಡದ ಪರ ಸಿ.ಎಚ್.ನಯನ್ ೨೫ ಎಸೆತದಲ್ಲಿ ೧ ಸಿಕ್ಸರ್ ಹಾಗೂ ೪ ಬೌಂಡರಿ ನೆರವಿನೊಂದಿಗೆ ೪೧ರನ್ ಹೊರತು ಪಡಿಸಿದಂತೆ ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. ಎಲೈಟ್ ಕ್ರಿಕೆಟ್ ಕ್ಲಬ್ ಪರ ಲೋಕೇಶ್, ಲೋಹಿತ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.


ಗುರಿಬೆನ್ನಟ್ಟಿದ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ೯.೨ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು. ತಂಡದ ಪರ ಎಂ.ಎಚ್.ಅವಿನ್ ೨೩ ಎಸೆತದಲ್ಲಿ ೪ ಬೌಂಡರಿ ನೆರವಿನೊಂದಿಗೆ ೩೦ ರನ್ ಕಲೆ ಹಾಕಿದರೆ, ವಿಕ್ಕಿ ೨೩, ಲೋಕೇಶ್ ೧೩ ರನ್ ದಾಖಲಿಸಿದರು. ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಎಲೈಟ್ ಕ್ರಿಕೆಟ್ ಕ್ಲಬ್ ತಂಡದ ಲೋಕೇಶ್ ಪಡೆದುಕೊಂಡರು.

Latest Posts

ಲೈಫ್‌ಸ್ಟೈಲ್