ಭಾರತದಲ್ಲೇ ಮೊದಲ ಆನೆಗಳ ವಿಶೇಷ ಆಸ್ಪತ್ರೆ ಆಗ್ರಾದಲ್ಲಿ ನಿರ್ಮಾಣ

ಮಥುರಾ: ಭಾರತದಲ್ಲಿ ಮೊದಲ ಬಾರಿಗೆ ಆನೆಗಳ ಚಿಕಿತ್ಸೆಗೆ ವಿಶೇಷ ಆಸ್ಪತ್ರೆಯನ್ನು ಉತ್ತರ ಪ್ರದೇಶ ಆಗ್ರಾದ ಫರಾಹ್​ ಬ್ಲಾಕ್​ನ ಚುರ್ಮುರಾ ಗ್ರಾಮದಲ್ಲಿ ಆಗ್ರಾ ವಿಭಾಗೀಯ ಆಯುಕ್ತ ಅನಿಲ್​ ಕುಮಾರ್​ ಅವರು ಶುಕ್ರವಾರ ತೆರೆದಿದ್ದಾರೆ.

ಈ ಚಿಕಿತ್ಸಾಲಯದಲ್ಲಿ ವೈರ್​ಲೆಸ್​ ಡಿಜಿಟಲ್​ ಎಕ್ಸ್​ರೇ, ಲೇಸರ್​ ಚಿಕಿತ್ಸೆ, ಡೆಂಟಲ್​ ಎಕ್ಸ್​ರೇ, ಥರ್ಮಲ್​ ಇಮೇಜಿಂಗ್​, ಅಲ್ಟ್ರಾಸೋನೋಗ್ರಫಿ, ಹೈಡ್ರೋಥೆರಪಿ ಮತ್ತು ರೋಗಗ್ರಸ್ತ ಆನೆಗಳನ್ನು ಅಡ್ಮಿಟ್ ಮಾಡಿಕೊಳ್ಳುವ ವ್ಯವಸ್ಥೆಗಳೂ ಇವೆ.

ಈ ಆಸ್ಪತ್ರೆಯನ್ನು ಆನೆ ಸಂರಕ್ಷಣಾ ಹಾಗೂ ಕಾಳಜಿ ಕೇಂದ್ರದ ಸಮೀಪವೇ ನಿರ್ಮಿಸಲಾಗಿದ್ದು, ಗಾಯಗೊಂಡ, ಅನಾರೋಗ್ಯಪೀಡಿತ ಆನೆಗಳಿಗೆ ಚಿಕಿತ್ಸೆ ನೀಡಲಾಗುವುದು. ಅಲ್ಲದೆ, ತರಬೇತಿ ಸಂದರ್ಭಗಳಲ್ಲಿ ಅವುಗಳನ್ನು ಮೇಲೆತ್ತುವ ಮೆಡಿಕಲ್​ ಸಲಕರಣೆಗಳನ್ನೂ ಒಳಗೊಂಡಿದೆ.

ಆನೆಗಳ ಚಟುವಟಿಕೆ, ಚಿಕಿತ್ಸೆಗಳನ್ನು ವೀಕ್ಷಿಸಲು ಹಾಗೂ ಕಲಿಯಲು ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ, ಇಂಟರ್ನಿಗಳಿಗೆ ಇಲ್ಲಿ ಅವಕಾಶವಿದೆ.